
ಮುಂಬೈ: ಭಾರಿ ಮಳೆ ಹಿನ್ನೆಲೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಭಾನುವಾರ 36 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು. ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಮತ್ತು ಏರ್ ಇಂಡಿಯಾ, ವಿಸ್ತಾರಾ ಏರ್ ಲೈನ್ಸ್ ಸಂಸ್ಥೆಗಳು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿರುವುದಾಗಿ ಮೂಲಗಳು ಹೇಳಿವೆ.
ನಗರದಲ್ಲಿ ಆಗಾಗ್ಗೆ ಭಾರೀ ಮಳೆ ಮತ್ತು ಕಡಿಮೆ ಗೋಚರತೆ ಪರಿಣಾಮವಾಗಿ ಭಾನುವಾರದಂದು ಆಗಮಿಸಬೇಕಾಗಿದ್ದ ಮತ್ತು ನಿರ್ಗಮಿಸಬೇಕಾಗಿದ್ದ ತಲಾ 18 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಇದರಲ್ಲಿ ಇಂಡಿಗೋದ 24 ವಿಮಾನಗಳು ಮತ್ತು ಏರ್ ಇಂಡಿಯಾದ ಎಂಟು ವಿಮಾನಗಳು ಸೇರಿವೆ. ವಿಸ್ತಾರಾ ಮುಂಬೈ ವಿಮಾನ ನಿಲ್ದಾಣದಲ್ಲಿ ತನ್ನ ನಾಲ್ಕು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರತಿಕೂಲ ಹವಾಮಾನ ಮತ್ತು ಕಡಿಮೆ ಗೋಚರತೆಯಿಂದಾಗಿ ರನ್‌ವೇ ಕಾರ್ಯಾಚರಣೆಯನ್ನು ಮೊದಲು ಮಧ್ಯಾಹ್ನ 12.12 ಕ್ಕೆ ಎಂಟು ನಿಮಿಷಗಳ ಕಾಲ ಮತ್ತು ನಂತರ ಮಧ್ಯಾಹ್ನ 1 ರಿಂದ 1.15 ರವರೆಗೆ ಸ್ಥಗಿತಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಏರ್ ಇಂಡಿಯಾ, ಇಂಡಿಗೋ ಮತ್ತು ಆಕಾಶ ಸೇರಿದಂತೆ ಕನಿಷ್ಠ 15 ವಿಮಾನಗಳನ್ನು ಸಂಜೆ 4 ಗಂಟೆಯವರೆಗೆ ಹತ್ತಿರದ ವಿಮಾನ ನಿಲ್ದಾಣಗಳಿಗೆ ಮುಖ್ಯವಾಗಿ ಅಹಮದಾಬಾದ್‌ಗೆ ತಿರುಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement