
ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿ ಅಂಗಡಿ ಮಾಲಿಕರ ಹೆಸರು ಪ್ರದರ್ಶನ ಮಾಡಬೇಕು ಎಂಬ ಸರ್ಕಾರದ ನಿಯಮ ವಾಪಸ್ ಪಡೆಯುವಂತೆ ಬಿಜೆಪಿಗೆ ಮಿತ್ರ ಪಕ್ಷಗಳ ಒತ್ತಡ ಹೆಚ್ಚಾಗತೊಡಗಿದೆ.
ರಾಷ್ಟ್ರೀಯ ಲೋಕದಳ ಮುಖ್ಯಸ್ಥ ಜಯಂತ್ ಚೌಧರಿ ಉತ್ತರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದು, ನಿಯಮ ಬದಲಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ.
ಯಾತ್ರೆಗಳು ಯಾವುದೇ ಧರ್ಮ ಮತ್ತು ಜಾತಿಗೆ ಸಂಬಂಧಿಸಿದ್ದಾಗಿಲ್ಲ ಎಂದು ಜಯಂತ್ ಚೌಧರಿ ಹೇಳಿದ್ದಾರೆ.
ಹೆಚ್ಚು ಯೋಚನೆ ಮಾಡದೇ ಸರ್ಕಾರ ಈ ನಿರ್ಧಾರ ಕೈಗೊಂಡಿರುವಂತಿದೆ, ನಿರ್ಧಾರ ತೆಗೆದುಕೊಂಡು ಆಗಿದೆ ಎಂಬ ಕಾರಣಕ್ಕೆ ಸರ್ಕಾರ ಪಟ್ಟು ಹಿಡಿದಿರುವಂತಿದೆ ಎಂದು ರಾಜ್ಯಸಭಾ ಸದಸ್ಯ ಜಯಂತ್ ಚೌಧರಿ ಹೇಳಿದ್ದಾರೆ.
"ಇನ್ನೂ ಸಮಯವಿದೆ. ಸರ್ಕಾರದ ನಿರ್ಧಾರ ಬದಲಾಗಬೇಕು ಅಥವಾ ನಿಯಮ ಅನುಷ್ಠಾನಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಬಾರದು" ಎಂದು ಜಯಂತ್ ಚೌಧರಿ ಹೇಳಿದ್ದಾರೆ.
ಕನ್ವರ್ ಅನ್ನು ಯಾರೂ ಗುರುತಿಸುವುದಿಲ್ಲ, ಕನ್ವರ್ ಸೇವೆ ಮಾಡುವ ಜನರನ್ನು ಧರ್ಮ ಅಥವಾ ಜಾತಿಯ ಮೇಲೆ ಗುರುತಿಸಲಾಗುವುದಿಲ್ಲ ಎಂದು ಚೌಧರಿ ಹೇಳಿದ್ದಾರೆ.
Advertisement