
ನವದೆಹಲಿ: ಬಿಜೆಪಿ ನಾಯಕ ಸುರೇಶ್ ನಕುವಾ ಅವರು ಹೂಡಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಬುಧವಾರ ಯೂಟ್ಯೂಬರ್ ಧ್ರುವ್ ರಾಠಿಗೆ ಸಮನ್ಸ್ ಜಾರಿ ಮಾಡಿದೆ.
ಧ್ರುವ್ ರಾಠಿ ನನ್ನನ್ನು ʼಹಿಂಸಾತ್ಮಕ ಮತ್ತು ನಿಂದಿಸುವʼ ರೀತಿ ಟ್ರೋಲ್ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ಸುರೇಶ್ ನಕುವಾ ಅವರು ಸಲ್ಲಿಸಿದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಯೂಟ್ಯೂಬರ್ ಧ್ರುವ ರಾಠಿಗೆ ಸಮನ್ಸ್ ಜಾರಿ ಮಾಡಿದೆ. ಅಲ್ಲದೆ ಮುಂದಿನ ವಿಚಾರಣೆಯನ್ನು ಆಗಸ್ಟ್ 6ಕ್ಕೆ ಮುಂದೂಡಿದೆ.
“My Reply to Godi Youtubers'' ಎಂಬ ವಿಡಿಯೋದಲ್ಲಿ ಧ್ರುವ್ ರಾಠಿ ತಮ್ಮನ್ನು “violent and abusive trolls” ಭಾಗ ಎಂದು ಕರೆದಿದ್ದರು. ಉದ್ದೇಶವೂರ್ವಕವಾಗಿ ತಮ್ಮ ವರ್ಚಸ್ಸಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಬಿಜೆಪಿ ನಾಯಕ ಸುರೇಶ್ ನಕುವಾ 20 ರೂ ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಸಾಕೇತ್ ಕೋರ್ಟ್‌ನ ಜಿಲ್ಲಾ ನ್ಯಾಯಾಧೀಶ ಗುಂಜನ್ ಗುಪ್ತಾ ಅವರು ಧ್ರುವ್ ರಾಠೀ ವಿರುದ್ಧ ಹೂಡಲಾದ ಮಾನನಷ್ಟ ಮೊಕದ್ದಮೆಯಲ್ಲಿ ಸಮನ್ಸ್ ಜಾರಿಗೊಳಿಸಿದ್ದಾರೆ, ಜೊತೆಗೆ ಗೂಗಲ್ ಎಲ್ಎಲ್ ಸಿ ಮತ್ತು ಎಕ್ಸ್ ಕಾರ್ಪ್ (ಟ್ವಿಟರ್) ಸಂಸ್ಥೆಗಳಿಂದಲೂ ಸ್ಪಷ್ಟನೆ ಕೇಳಿದ್ದಾರೆ.
ನಖುವಾ ಪರ ವಕೀಲರಾದ ರಾಘವ್ ಅವಸ್ತಿ ಮತ್ತು ಮುಖೇಶ್ ಶರ್ಮಾ ವಾದ ಮಂಡಿಸಿದ್ದರು.
Advertisement