
ನವದೆಹಲಿ: ರಾಜ್ಯ ಸರ್ಕಾರಗಳು ತಮ್ಮ ಸಾಂವಿಧಾನಿಕ ಅಧಿಕಾರ ವ್ಯಾಪ್ತಿಯನ್ನು ಮೀರಿ ವಿದೇಶಾಂಗ ವ್ಯವಹಾರಗಳಲ್ಲಿ ಅತಿಕ್ರಮಣ ಮಾಡಬಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ಶುಕ್ರವಾರ ಹೇಳಿದೆ.
ಕೇರಳ ಸರ್ಕಾರ ಪ್ರತ್ಯೇಕ ವಿದೇಶಾಂಗ ಕಾರ್ಯದರ್ಶಿ ಹುದ್ದೆಯನ್ನು ಸೃಷ್ಟಿಸಿ, ಕೆ ವಾಸುಕಿ ಎಂಬ ಹಿರಿಯ ಅಧಿಕಾರಿಯನ್ನು ಆ ಹುದ್ದೆಗೆ ನೇಮಕ ಮಾಡಿದೆ.
"7ನೇ ಶೆಡ್ಯೂಲ್ ಪಟ್ಟಿ 1-ರ ಅಡಿಯಲ್ಲಿ ಭಾರತದ ಸಂವಿಧಾನವು ಕೇಂದ್ರ ಪಟ್ಟಿಯಲ್ಲಿ ವಿದೇಶಾಂಗ ವ್ಯವಹಾರಗಳು ಮತ್ತು ಇತರ ಯಾವುದೇ ವಿದೇಶಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು ಕೇಂದ್ರ ಸರ್ಕಾರದ ಏಕೈಕ ಹಕ್ಕು ಎಂದು ಸ್ಪಷ್ಟವಾಗಿ ಹೇಳಿದೆ" ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ಅವರು ತಿಳಿಸಿದ್ದಾರೆ.
"ಇದು ಸಮವರ್ತಿ ಪಟ್ಟಿಯ ವಿಷಯವಲ್ಲ ಮತ್ತು ಖಂಡಿತವಾಗಿಯೂ ರಾಜ್ಯದ ವಿಷಯವಲ್ಲ. ರಾಜ್ಯ ಸರ್ಕಾರಗಳು ತಮ್ಮ ಸಾಂವಿಧಾನಿಕ ಅಧಿಕಾರ ವ್ಯಾಪ್ತಿಯನ್ನು ಮೀರಿ ಇತರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬುದು ನಮ್ಮ ನಿಲುವು" ಎಂದು ಅವರು ಹೇಳಿದ್ದಾರೆ.
Advertisement