
ದ್ರಾಸ್ ಕಾರ್ಗಿಲ್ ಯುದ್ಧ ಸ್ಮಾರಕ(ಲಡಾಕ್): ಕಾರ್ಗಿಲ್ ವಿಜಯ್ ದಿವಸದ 25 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕಾರ್ಗಿಲ್‌ನಲ್ಲಿದ್ದಾರೆ. ಕಾರ್ಗಿಲ್ ಯುದ್ಧದ 25 ನೇ ವಾರ್ಷಿಕೋತ್ಸವದಂದು ಲಡಾಖ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿಯವರು, ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿ ವೀರಮರಣವನ್ನು ಕಂಡ ಯೋಧರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು.
ಇಂದು ಬೆಳಗ್ಗೆ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಪ್ರಧಾನಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದರು. ಪ್ರಧಾನಿ ಭೇಟಿಗೆ ಮುನ್ನ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಭದ್ರತಾ ಉದ್ದೇಶಗಳಿಗೆ ಅನುಗುಣವಾಗಿ ವ್ಯವಸ್ಥೆಗಳನ್ನು ಮಾಡಲಾಗಿದೆ.
ನಂತರ ಅಲ್ಲಿರುವ ಮ್ಯೂಸಿಯಂಗೆ ಭೇಟಿ ನೀಡಿದ ಪ್ರಧಾನ ಮಂತ್ರಿಗಳು ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಬಳಸಿರುವ ಮಿಲಿಟರಿ ಉಪಕರಣಗಳು, ಭಾರತೀಯ ಸೇನೆಯ ಯುದ್ಧ ಸಲಕರಣೆಗಳು, ಹುತಾತ್ಮ ಯೋಧರ ಛಾಯಾಚಿತ್ರಗಳನ್ನು ವೀಕ್ಷಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ 25 ನೇ ಕಾರ್ಗಿಲ್ ವಿಜಯ ದಿನ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಕಾರ್ಗಿಲ್ ವಿಜಯ್ ದಿವಸ್ ನಮ್ಮ ಸಶಸ್ತ್ರ ಪಡೆಗಳ ಅದಮ್ಯ ಧೈರ್ಯ ಮತ್ತು ಅಸಾಧಾರಣ ಶೌರ್ಯಕ್ಕೆ ಗೌರವ ಸಲ್ಲಿಸಲು ಕೃತಜ್ಞತೆ ಸಲ್ಲಿಸಲು ರಾಷ್ಟ್ರಕ್ಕೆ ಒಂದು ಸಂದರ್ಭವಾಗಿದೆ. 1999 ರಲ್ಲಿ ಕಾರ್ಗಿಲ್ ಶಿಖರಗಳಲ್ಲಿ ಭಾರತಮಾತೆಯನ್ನು ರಕ್ಷಿಸುವ ಸಂದರ್ಭದಲ್ಲಿ ಅತ್ಯುನ್ನತ ತ್ಯಾಗ ಮಾಡಿದ ಪ್ರತಿಯೊಬ್ಬ ಸೈನಿಕನಿಗೆ ನಾನು ಗೌರವ ಸಲ್ಲಿಸುತ್ತೇನೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ನಂತರ, ಪ್ರಧಾನಿ ಮೋದಿ ಅವರು ಲಡಾಖ್‌ನ ಶಿಂಕುನ್ ಲಾ ಸುರಂಗ ಯೋಜನೆಯಲ್ಲಿ ಮೊದಲ ಸ್ಫೋಟವನ್ನು ವರ್ಚುವಲ್ ಮೂಲಕ ನಡೆಸಿಕೊಡಲಿದ್ದಾರೆ.
ಶಿಂಕುನ್ ಲಾ ಸುರಂಗ ಯೋಜನೆಯು 4.1 ಕಿಮೀ ಉದ್ದದ ಅವಳಿ-ಟ್ಯೂಬ್ ಸುರಂಗವನ್ನು ಒಳಗೊಂಡಿದೆ, ಇದು ಲೇಹ್‌ಗೆ ಎಲ್ಲಾ ಹವಾಮಾನದಲ್ಲಿ ಸಂಪರ್ಕವನ್ನು ಒದಗಿಸಲು ನಿಮು - ಪಾಡುಮ್ - ದರ್ಚಾ ರಸ್ತೆಯಲ್ಲಿ ಸುಮಾರು 15,800 ಅಡಿ ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ.
ಇದರ ಕಾಮಗಾರಿ ಒಮ್ಮೆ ಪೂರ್ಣಗೊಂಡರೆ ವಿಶ್ವದ ಅತಿ ಎತ್ತರದ ಸುರಂಗವಾಗಲಿದೆ. ಶಿಂಕುನ್ ಲಾ ಸುರಂಗವು ದೇಶದ ಸಶಸ್ತ್ರ ಪಡೆಗಳು ಮತ್ತು ಸಲಕರಣೆಗಳ ತ್ವರಿತ ಮತ್ತು ಪರಿಣಾಮಕಾರಿ ಕ್ರಮವನ್ನು ಜಾರಿಗೊಳಿಸುವುದು ಮಾತ್ರವಲ್ಲದೆ ಲಡಾಖ್‌ನಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.
Advertisement