
ಛತ್ತೀಸ್‌ಗಢ: ಮೂರು ರಾಜ್ಯಗಳಲ್ಲಿ ತಲೆಗೆ 13 ಲಕ್ಷ ರೂ. ಬಹುಮಾನ ಘೋಷಿಸಲಾಗಿದ್ದ ನಕ್ಸಲ್ ಮಹಿಳೆಯೊಬ್ಬರು ಕಬೀರ್‌ಧಾಮ್ ಜಿಲ್ಲೆಯಲ್ಲಿ ಶನಿವಾರ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಡ್ಮೆ ಕೊವಾಸಿ ಅಲಿಯಾಸ್ ರನಿತಾ (22) ಶರಣಾದ ಮಹಿಳೆಯಾಗಿದ್ದಾರೆ. ಇವರು ಎಂಎಂಸಿ ವಲಯ ಸಮಿತಿ ಭಾಗವಾಗಿ ಸಕ್ರಿಯರಾಗಿದ್ದರು ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾವೋವಾದಿಯ ಗೊಂಡಿಯಾ-ರಾಜನಂದಗಾಂವ್-ಬಾಲಾಘಾಟ್ ವಿಭಾಗದ ತಾಂಡಾ/ಮಲಾಜ್‌ಖಂಡ್ ಪ್ರದೇಶ ಸಮಿತಿ ಸದಸ್ಯರಾಗಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 ಲಕ್ಷ ರೂ. ಹಾಗೂ ಮಧ್ಯಪ್ರದೇಶದಲ್ಲಿ 3 ಲಕ್ಷ ರೂ. ಗಳನ್ನು ಆಕೆಯ ತಲೆಗೆ ಬಹುಮಾನವಾಗಿ ಘೋಷಿಸಲಾಗಿತ್ತು. ಮಧ್ಯ ಪ್ರದೇಶದ ಬಾಲಘಾಟ್‌ನಲ್ಲಿ ನಡೆದ ಮಾವೋವಾದಿ ಹಿಂಸಾಚಾರದ 19 ಘಟನೆಗಳು ಮತ್ತು ಛತ್ತೀಸ್ ಘಡದ ಖೈರಗಢ-ಚುಯಿಖಾಡನ್- ಗಂಡೈ ಜಿಲ್ಲೆಯಲ್ಲಿ ನಡೆಯಲ್ಲಿ ನಡೆದ ಮೂರು ಹಿಂಸಾಚಾರಗಳಲ್ಲಿ ಅವರು ಸಕ್ರಿಯರಾಗಿದ್ದರು ಎನ್ನಲಾಗಿದೆ.
ಹಿರಿಯ ಮಾವೋವಾದಿಗಳು ಮತ್ತು ಮಾವೋವಾದಿ ಸಿದ್ಧಾಂತದಿಂದ ನಿರಾಶೆಗೊಂಡ ಅವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದು, ರಾಜ್ಯ ಸರ್ಕಾರದ ಪುನರ್ವಸತಿ ನೀತಿಯಡಿಯಲ್ಲಿ ಅವರಿಗೆ 25,000 ರೂಪಾಯಿ ಆರ್ಥಿಕ ನೆರವು ಮತ್ತು ಇತರ ಸೌಲಭ್ಯಗಳನ್ನು ನೀಡಲಾಗುವುದು ಎಂದು ಅಧಿಕಾರಿ ಹೇಳಿದರು.
Advertisement