
ನವದೆಹಲಿ: NITI ಆಯೋಗದ ಸಭೆಯಲ್ಲಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಅವಮಾನ ಮಾಡಿರುವುದು ಪ್ರಜಾಸತ್ತಾತ್ಮಕ ನಿಯಮಗಳಿಗೆ ಸರಿಹೊಂದುವುದಿಲ್ಲ ಎಂದು ಶಿವಸೇನೆ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರೌತ್ ಹೇಳಿದ್ದಾರೆ.
ರಾಜ್ಯಗಳಿಗೆ ಹಲವು ಸಮಸ್ಯೆಗಳಿರುತ್ತವೆ ಅವುಗಳನ್ನು ಬಗೆಹರಿಸಬೇಕಾಗುತ್ತದೆ. ಆದರೆ ಸಭೆಯಲ್ಲಿ ಸಿಎಂ ಒಬ್ಬರ ಮೈಕ್ರೋಫೋನ್ ನ್ನು ಮ್ಯೂಟ್ ಮಾಡುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಒಳಿತಲ್ಲ ಎಂದು ರೌತ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NITI ಆಯೋಗದ ಸಭೆಯಿಂದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೊರ ನಡೆದಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಉಳಿದ ಸಿಎಂ ಗಳಿಗೆ ತಮ್ಮ ರಾಜ್ಯಗಳ ಬಗ್ಗೆ ಮಾತನಾಡುವುದಕ್ಕೆ ಹೆಚ್ಚಿನ ಸಮಯ ಅವಕಾಶ ನೀಡಲಾಗಿತ್ತು. ಆದರೆ ನಾನು ಮಾತನಾಡಲು ಕೇವಲ 5 ನಿಮಿಷ ನೀಡಲಾಯಿತು. 5 ನಿಮಿಷದ ನಂತರ ನನ್ನ ಬಳಿ ಇದ್ದ ಮೈಕ್ರೋಫೋನ್ ನ್ನು ಮ್ಯೂಟ್ ಮಾಡಲಾಯಿತು ಈ ಹಿನ್ನೆಲೆಯಲ್ಲಿ ನಾನು ಸಭೆಯಿಂದ ಹೊರನಡೆದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
"ಕೇಂದ್ರವು ವಿತರಿಸುವ ಹಣವು ಭಾರತದ ಜನರಿಗೆ ಸೇರಿದೆ. ಅದನ್ನು ವಿವಿಧ ತೆರಿಗೆಗಳಾಗಿ ಸಂಗ್ರಹಿಸಲಾಗುತ್ತದೆ. ಮಹಾರಾಷ್ಟ್ರಕ್ಕೆ ಏನು ಸಿಕ್ಕಿತು.. ನಮ್ಮ ಮುಖ್ಯಮಂತ್ರಿ ಬರಿಗೈಯಲ್ಲಿ ಹಿಂತಿರುಗಿದರು" ಎಂದು ಏಕನಾಥ್ ಶಿಂಧೆ ನೇತೃತ್ವದ ಆಡಳಿತಾರೂಢ ಮೈತ್ರಿಕೂಟದ ವಿರುದ್ಧ ರಾವತ್ ಹೇಳಿದರು.
Advertisement