
ನವದೆಹಲಿ: ಕೋವಿಡ್ ಸೋಂಕಿಗೆ ತಮ್ಮ ಕೊರೊನಿಲ್ ಮಾತ್ರೆಗಳನ್ನು ಪ್ರಚಾರ ಮಾಡುವ ಭರದಲ್ಲಿ ಅಲೋಪತಿ ವೈದ್ಯಪದ್ಧತಿಯಿಂದಲೇ COVID ಸಾವು ಸಂಭವಿಸುತ್ತಿದೆ ಎಂದು ಮಾಡಿದ್ದ ಪ್ರಚಾರ ಮತ್ತು ಪೋಸ್ಟ್ ಅನ್ನು ತೆಗೆದು ಹಾಕುವಂತೆ ಪತಂಜಲಿ ಸಂಸ್ಥೆ ಹಾಗೂ ಯೋಗ ಗುರು ಬಾಬಾ ರಾಮ್ ದೇವ್ ಗೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.
ಕೋವಿಡ್–19 ವಿರುದ್ಧ ‘ಕೊರೊನಿಲ್’ ಮಾತ್ರೆ ಬಳಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ‘ದಾರಿ ತಪ್ಪಿಸುವ’ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಯೋಗ ಗುರು ರಾಮ್‌ದೇವ್ ಅವರಿಗೆ ದೆಹಲಿ ಹೈಕೋರ್ಟ್ ಸೋಮವಾರ ಸೂಚಿಸಿದೆ.
ಕೊರೊನಿಲ್ ಮಾತ್ರೆಯು ಕೊರೊನಾವನ್ನು ಗುಣಪಡಿಸಲಿದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಲವು ವೈದ್ಯರು 2021ರಲ್ಲಿ ರಾಮ್‌ದೇವ್, ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ್ ವಿರುದ್ಧ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿ ಅನೂಪ್ ಜೈರಾಮ್ ಭಂಭಾನಿ ಅವರು, ‘ರಾಮ್‌ದೇವ್ ವಿರುದ್ಧ ಹಲವು ವೈದ್ಯರು ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲಾಗಿದೆ’ ಎಂದು ಹೇಳಿದರು.
‘ಕೆಲವು ಆಕ್ಷೇಪಾರ್ಹ ಟ್ವೀಟ್, ಪೋಸ್ಟ್ ಮತ್ತು ವಿಷಯಗಳನ್ನು ಮೂರು ದಿನಗಳ ಒಳಗಾಗಿ ತೆಗೆದುಹಾಕಲು ನಿರ್ದೇಶನ ನೀಡಲಾಗಿದೆ. ಈ ಸೂಚನೆಯನ್ನು ಪಾಲಿಸದೇ ಇದ್ದಲ್ಲಿ, ‘ಎಕ್ಸ್’ ಜಾಲತಾಣವೇ ಅವುಗಳನ್ನು ತೆಗೆದುಹಾಕಲಿದೆ’ ಎಂದು ಹೇಳಿದರು.
Advertisement