
ನವದೆಹಲಿ: ಸಂಸತ್ ಅಧಿವೇಶನದ ಲೋಕಸಭಾ ಕಲಾಪದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್- ಸಂಸದ ಅನುರಾಗ್ ಠಾಕೂರ್ ನಡುವೆ ಅಗ್ನಿಪಥ್ ಯೋಜನೆ ವಿಷಯವಾಗಿ ವಾಕ್ಸಮರ ನಡೆಯಿತು.
ಸರ್ಕಾರದ ವಿರುದ್ಧ ಆರೋಪ ಮಾಡಿದ ಅಖಿಲೇಶ್ ಯಾದವ್, ಸರ್ಕಾರ ಅಗ್ನಿಪಥ್ ಯೋಜನೆಯನ್ನು ಉತ್ತೇಜಿಸುವುದಕ್ಕಾಗಿ ಯೋಜನೆಯ ಪರವಾಗಿ ಪ್ರಮುಖ ಕೈಗಾರಿಕೋದ್ಯಮಿಗಳಿಂದ ಟ್ವೀಟ್ ಅಭಿಯಾನ ನಡೆಸಿತ್ತು ಎಂದು ಆರೋಪಿಸಿದರು.
ಅಗ್ನಿವೀರ್ ಯೋಜನೆ ಆರಂಭವಾದಾಗ ಪ್ರಮುಖ ಕೈಗಾರಿಕೋದ್ಯಮಿಗಳು ಈ ಯೋಜನೆಗಿಂತ ಉತ್ತಮವಾದುದ್ದು ಇಲ್ಲ ಎಂದು ಟ್ವೀಟ್ ಮಾಡಿ ತಾವೂ ಸಹ ಅಗ್ನಿವೀರರಿಗೆ ಉದ್ಯೋಗ ಕೊಡುವುದಾಗಿ ಹೇಳುವಂತೆ ಮಾಡಲಾಗಿತ್ತು.
ಬಹುಶಃ ಸರ್ಕಾರವು ಇದನ್ನು ನೆನಪಿಸಿಕೊಳ್ಳುತ್ತದೆ ಏಕೆಂದರೆ ಯೋಜನೆಯು ಸರಿಯಾಗಿಲ್ಲ ಎಂದು ಅದು ಒಪ್ಪಿಕೊಂಡಿದೆ, ಅದಕ್ಕಾಗಿಯೇ ಅವರು ತಮ್ಮ ರಾಜ್ಯ ಸರ್ಕಾರಗಳನ್ನು ಹಿಂದಿರುಗಿದ ಅಗ್ನಿವೀರ್‌ಗಳಿಗೆ ಕೋಟಾ ಮತ್ತು ಉದ್ಯೋಗಗಳನ್ನು ನೀಡುವಂತೆ ಕೇಳುತ್ತಿದ್ದಾರೆ, ”ಎಂದು ಯಾದವ್ ಹೇಳಿದರು, ಅಷ್ಟೇ ಅಲ್ಲದೇ ಯೋಜನೆ ಪ್ರಯೋಜನಕಾರಿಯಾಗಿದೆ ಎಂದು ಎದ್ದು ನಿಂತು ಘೋಷಿಸುವಂತೆ ಆಡಳಿತ ಸದಸ್ಯರಿಗೆ ಸವಾಲು ಹಾಕಿದರು.
ಪ್ರತಿಕ್ರಿಯೆಯಾಗಿ, ಮಾಜಿ ಕೇಂದ್ರ ಸಚಿವ ಠಾಕೂರ್ ಅವರು ಅಗ್ನಿಪಥ್ ಯೋಜನೆಯನ್ನು ಸಮರ್ಥಿಸಿಕೊಂಡು, ಅವರ ತವರು ರಾಜ್ಯ ಹಿಮಾಚಲ ಪ್ರದೇಶದ ಮಿಲಿಟರಿ ಪರಂಪರೆಯನ್ನು ಉಲ್ಲೇಖಿಸಿದರು. "ನಾನು ಮೊದಲ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಯೋಧ ಸೋಮನಾಥ ಶರ್ಮಾ ಅವರನ್ನು ನೀಡಿದ, ಕಾರ್ಗಿಲ್ ಯುದ್ಧದಲ್ಲಿ ಅತಿ ಹೆಚ್ಚು ಹುತಾತ್ಮರನ್ನು ಹೊಂದಿದ ಹಿಮಾಚಲ ಪ್ರದೇಶದಿಂದ ಬಂದಿದ್ದೇನೆ.
ಹೌದು, ‘ಒಂದು ಶ್ರೇಣಿ ಒಂದು ಪಿಂಚಣಿ’ ಎಂಬ ಬಹುದಿನಗಳ ಬೇಡಿಕೆಯನ್ನು ನರೇಂದ್ರ ಮೋದಿಯವರ ಸರಕಾರ ಈಡೇರಿಸಿದೆ ಎಂದು ಹೇಳುತ್ತೇನೆ. ಮತ್ತು ಅಖಿಲೇಶ್ ಜೀ, ಅಗ್ನಿವೀರ್ ಯೋಜನೆಯು 100 ಪ್ರತಿಶತ ಉದ್ಯೋಗವನ್ನು ಖಾತರಿಪಡಿಸುತ್ತದೆ ಎಂದು ನಾನು ಸ್ಪಷ್ಟಪಡಿಸುತ್ತೇನೆ, ”ಎಂದು ಅವರು ಹೇಳಿದರು.
ಠಾಕೂರ್ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಅಖಿಲೇಶ್ ಯಾದವ್, ಅಗ್ನಿವೀರ್ ಯೋಜನೆ ಬಹಳ ಪರಿಣಾಮಕಾರಿಯಾಗಿದ್ದಲ್ಲಿ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಅಗ್ನಿವೀರರಿಗೆ 10 ಪ್ರತಿಶತ ಕೋಟಾವನ್ನು ಒದಗಿಸುವ ಅಗತ್ಯತೆ ಇದೆ ಎಂದು ಸರ್ಕಾರ ಭಾವಿಸಿದ್ದೇಕೆ? ಎಂದು ಪ್ರಶ್ನಿಸಿದರು.
ಮಾಜಿ ಕೇಂದ್ರ ಸಚಿವರು- ಮಾಜಿ ಸಿಎಂ ನಡುವಿನ ವಾಕ್ಸಮರ ಲೋಕಸಭೆಯಲ್ಲಿ ಕೋಲಾಹಲ ಉಂಟುಮಾಡಿತು. ಅವರು ತಮ್ಮದೇ ಆದ ಮಿಲಿಟರಿ ಶಾಲಾ ಶಿಕ್ಷಣದ ಬಗ್ಗೆ ಒತ್ತಿ ಹೇಳಿ, ಪರಮವೀರ ಚಕ್ರ ಪುರಸ್ಕೃತರ ಬಗ್ಗೆ ಠಾಕೂರ್ ಅವರ ಪ್ರತಿಪಾದನೆಗಳಿಗೆ ಪ್ರತ್ಯುತ್ತರ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅನುರಾಗ್ ಠಾಕೂರ್,ಸೇನೆಯಲ್ಲಿ ತಮ್ಮ ಸೇವವಧಿಯನ್ನು ಉಲ್ಲೇಖಿಸಿ ನಾನು ಸ್ವತಃ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದೇನೆ. ಅಖಿಲೇಶ್ ಜೀ, ಕೇವಲ ಉಪದೇಶ ನೀಡಬೇಡಿ, ರಾಹುಲ್ ಗಾಂಧಿ ಅವರೊಂದಿಗೆ ಕುಳಿತಿರುವುದರ ಪರಿಣಾಮ ನೀವು ವದಂತಿಗಳು ಮತ್ತು ಸುಳ್ಳುಗಳನ್ನು ಹರಡಲು ಒಗ್ಗಿಕೊಂಡಿದ್ದೀರಿ" ಎಂದು ಲೇವಡಿ ಮಾಡಿದರು.
Advertisement