
ಕೊಯಮತ್ತೂರು: ವಾಲ್ಪಾರೈನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಠಾತ್ ಭೂಕುಸಿತ ಸಂಭವಿಸಿದ್ದು, ಮಂಗಳವಾರ 43 ವರ್ಷದ ಮಹಿಳೆ ಮತ್ತು ಆಕೆಯ 15 ವರ್ಷದ ಮೊಮ್ಮಗಳು ಮೃತಪಟ್ಟಿದ್ದಾರೆ. ಪೊಲ್ಲಾಚಿ ಸಮೀಪದ ತಿಪ್ಪಂಪಟ್ಟಿಯಲ್ಲಿ ಮನೆ ಕುಸಿದು ಒಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಅರುಮುಗಂ ಅವರ ಪತ್ನಿ ಮುತ್ತಮ್ಮಲ್ ಅಲಿಯಾಸ್ ರಾಜೇಶ್ವರಿ (43ವ) ಮತ್ತು ಆಕೆಯ ಮೊಮ್ಮಗಳು ಎ ಧನಪ್ರಿಯಾ (15ವ) ಹತ್ತನೇ ತರಗತಿ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಅವರು ಸೋಲೈಯಾರ್ ಅಣೆಕಟ್ಟಿನ ಎಡಭಾಗದಲ್ಲಿರುವ ಮುಕ್ಕು ರಸ್ತೆಯಲ್ಲಿರುವ ಕಲ್ನಾರಿನ ಛಾವಣಿಯ ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದರು. ಅರುಮುಗಂ ಖಾಸಗಿ ಕಾಟೇಜ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಧನಪ್ರಿಯಾ ಸೋಲೈಯಾರ್ ಅಣೆಕಟ್ಟು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಳು.
ಅರುಮುಗಂ ಸೋಮವಾರ ರಾತ್ರಿ ಪಾಳಿ ಕೆಲಸಕ್ಕೆ ಹೋಗಿದ್ದು, ಎಸ್ಟೇಟ್‌ನ ಗುಡ್ಡದ ಪಕ್ಕದಲ್ಲಿರುವ ಮನೆಯಲ್ಲಿ ಪತ್ನಿ ಮತ್ತು ಮೊಮ್ಮಗಳನ್ನು ಬಿಟ್ಟು ಹೋಗಿದ್ದರು. ಭಾರೀ ಮಳೆಯಿಂದ ಮನೆಯ ಪಕ್ಕದ ಜಮೀನು ಮಧ್ಯರಾತ್ರಿ ಕುಸಿದು ಬೀಳಲು ಆರಂಭವಾಯಿತು. ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಾಜೇಶ್ವರಿ ಮತ್ತು ಧನಪ್ರಿಯ ಅವಶೇಷಗಳಡಿ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ.
ಸ್ಥಳೀಯರು ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ವಾಲ್ಪಾರೈ ಜಿಎಚ್‌ಗೆ ಕಳುಹಿಸಿದ್ದಾರೆ. ಘಟನೆ ಕುರಿತು ಶೆಕ್ಕಲಮುಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನೊಂದು ಘಟನೆಯಲ್ಲಿ ಪೊಲ್ಲಾಚಿ ಸಮೀಪದ ಗಾಮಂಗಲಂ ಎಂಬಲ್ಲಿ ಮಳೆಯಿಂದಾಗಿ ಮನೆ ಕುಸಿದು ಬಿದ್ದಿದ್ದು, ತಿಪ್ಪಂಪಟ್ಟಿಯ ಅಣ್ಣಾನಗರದ 20 ವರ್ಷದ ಬಿಕಾಂ ಪದವೀಧರ ಎ ಹರಿಹರಸುಧನ್ ಮೃತಪಟ್ಟಿದ್ದಾರೆ. ಅವರ ಕುಟುಂಬದ ಇನ್ನೂ ಮೂವರು ಮನೆ ಕುಸಿತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮೃತದೇಹವನ್ನು ಪೊಲ್ಲಾಚಿ ಜಿಎಚ್‌ಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
Advertisement