ಜಾಮೀನು ಅರ್ಜಿ ವಿಚಾರಣೆ ತೀರ್ಪು ಜೂನ್ 5ಕ್ಕೆ ಮುಂದೂಡಿಕೆ: ನಾಳೆ ತಿಹಾರ್ ಜೈಲಿಗೆ ಅರವಿಂದ್ ಕೇಜ್ರಿವಾಲ್ ವಾಪಸ್!

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ವಿಚಾರಣೆಯು ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಪೂರ್ಣಗೊಂಡಿದೆ. ಜೂನ್ 5ಕ್ಕೆ ಮಧ್ಯಂತರ ಜಾಮೀನು ಕುರಿತು ನ್ಯಾಯಾಲಯ ತೀರ್ಪು ನೀಡಲಿದ್ದು ಸದ್ಯಕ್ಕೆ ನಾಳೆ ಕೇಜ್ರಿವಾಲ್ ಶರಣಾಗಬೇಕಿದೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ವಿಚಾರಣೆಯು ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಪೂರ್ಣಗೊಂಡಿದೆ. ಜೂನ್ 5ಕ್ಕೆ ಮಧ್ಯಂತರ ಜಾಮೀನು ಕುರಿತು ನ್ಯಾಯಾಲಯ ತೀರ್ಪು ನೀಡಲಿದ್ದು ಸದ್ಯಕ್ಕೆ ನಾಳೆ ಕೇಜ್ರಿವಾಲ್ ಶರಣಾಗಬೇಕಿದೆ.

ಅರವಿಂದ್ ಕೇಜ್ರಿವಾಲ್ ಅವರ ವಿಡಿಯೋವನ್ನು ಇಡಿ ನ್ಯಾಯಾಲಯಕ್ಕೆ ತೋರಿಸಿದ್ದು ಈ ವಿಡಿಯೋದಲ್ಲಿ ಕೇಜ್ರಿವಾಲ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಮನೆಯಲ್ಲಿ ನಡೆದ ಸಭೆಗೆ ಹೋಗುತ್ತಿರುವುದಾಗಿದೆ. ಅನಾರೋಗ್ಯ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಉಲ್ಲೇಖಿಸಿ ಕೇಜ್ರಿವಾಲ್ ಅವರು 7 ದಿನಗಳ ಮಧ್ಯಂತರ ಜಾಮೀನು ಕೋರಿದ್ದರು. ಶುಕ್ರವಾರ ಸಿಎಂ ಅರವಿಂದ್ ಕೇಜ್ರಿವಾಲ್ ಪತ್ರಿಕಾಗೋಷ್ಠಿ ನಡೆಸಿ ಜೂನ್ 2ರ ಮಧ್ಯಾಹ್ನ 3 ಗಂಟೆಗೆ ಶರಣಾಗುತ್ತಿರುವುದಾಗಿ ಎಸ್‌ಜಿ ತುಷಾರ್ ಮೆಹ್ತಾ ಹೇಳಿದ್ದಾರೆ. ಇದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಿದ್ದು, ನಾವು ಆಕ್ಷೇಪಣೆ ಸಲ್ಲಿಸುತ್ತೇವೆ. ದೆಹಲಿ ಮುಖ್ಯಮಂತ್ರಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಜೂನ್ 2 ರಂದು ಸ್ವತಃ ಶರಣಾಗುವುದಾಗಿ ತಪ್ಪುದಾರಿಗೆಳೆಯುವ ಹೇಳಿಕೆ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಪರವಾಗಿ ನ್ಯಾಯಾಲಯಕ್ಕೆ ತಿಳಿಸಲಾಯಿತು. ಈ ಕುರಿತು ಕೇಜ್ರಿವಾಲ್ ಪರ ವಕೀಲ ಎನ್. ಹರಿಹರನ್ ಅವರು ಈ ಹೇಳಿಕೆ ಬಗ್ಗೆ ತಿಳಿದಿಲ್ಲ ಎಂದು ಹೇಳಿದರು.

ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜು ಮಾತನಾಡಿ, ಸುಪ್ರೀಂ ಕೋರ್ಟ್ ಈಗಾಗಲೇ ಈ ವಿಷಯದಲ್ಲಿ ವಿವರವಾದ ಆದೇಶಗಳನ್ನು ನೀಡಿದ್ದು, ನ್ಯಾಯಾಲಯವನ್ನು ದಾರಿ ತಪ್ಪಿಸುವ ಅಗತ್ಯ ಏನಿದೆ. ಕೇಜ್ರಿವಾಲ್ ನ್ಯಾಯಾಲಯದ ಮುಂದೆ ತಮ್ಮ ಸತ್ಯಗಳನ್ನು ಏಕೆ ಮರೆಮಾಚುತ್ತಿದ್ದಾರೆ? ಈ ಮಧ್ಯಂತರ ಜಾಮೀನು ಚುನಾವಣಾ ಪ್ರಚಾರಕ್ಕೆ ಮಾತ್ರ ಎಂದು ಎಎಸ್‌ಜಿ ರಾಜು ಚರ್ಚೆ ಆರಂಭಿಸಿದರು. ಅವರು ಜೂನ್ 2 ರಂದು ಶರಣಾಗಬೇಕು. ಮಧ್ಯಂತರ ಜಾಮೀನು ವಿಸ್ತರಣೆಗೆ ಆಗ್ರಹಿಸಿ ಅರವಿಂದ್ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ತನ್ನ ಹಿಂದಿನ ಆದೇಶದಲ್ಲಿ ಎಲ್ಲಿಯೂ ಹೇಳಿಲ್ಲ. ಕೇಜ್ರಿವಾಲ್ ಅವರ ಈ ಅರ್ಜಿಯನ್ನು ಸ್ವೀಕರಿಸಬಾರದು, ತಿರಸ್ಕರಿಸಬೇಕು ಎಂದು ವಾದಿಸಿದ್ದರು.

ಅರವಿಂದ್ ಕೇಜ್ರಿವಾಲ್
ವೈದ್ಯಕೀಯ ಆಧಾರದ ಮೇಲೆ ಜಾಮೀನು ವಿಸ್ತರಣೆ ಕೋರಿದ ಕೇಜ್ರಿವಾಲ್ ಮನೆಗೆ ಆಂಬುಲೆನ್ಸ್ ಕೊಂಡೊಯ್ದ ಬಿಜೆಪಿ ನಾಯಕ!

ಮಧ್ಯಂತರ ಜಾಮೀನಿನ ಬೇಡಿಕೆ ವಿಚಾರಣೆಗೆ ಯೋಗ್ಯವಲ್ಲ

ಸಾಮಾನ್ಯ ಜಾಮೀನಿಗಾಗಿ ಕೆಳ ನ್ಯಾಯಾಲಯಕ್ಕೆ ಹೋಗಬಹುದು ಎಂಬುದಷ್ಟೇ ಸುಪ್ರೀಂ ಕೋರ್ಟ್ ನಿಂದ ಸಿಕ್ಕಿರುವ ಅನುಮತಿ ಎಂದ ಎಸ್.ವಿ.ರಾಜು ಇಲ್ಲಿ ಮಧ್ಯಂತರ ಜಾಮೀನಿಗೆ ಬೇಡಿಕೆ ಇಟ್ಟಿದ್ದಾರೆ ಎಂದರ್ಥವಲ್ಲ. 7 ದಿನಗಳ ಮಧ್ಯಂತರ ಜಾಮೀನು ನೀಡಬೇಕೆಂಬ ಅವರ ಬೇಡಿಕೆ ವಿಚಾರಣೆಗೆ ಯೋಗ್ಯವಾಗಿಲ್ಲ. PMLAನ ಸೆಕ್ಷನ್ 45ರ ಅಡಿಯಲ್ಲಿ ಜಾಮೀನಿನ ಎರಡು ಷರತ್ತುಗಳ ನಿಬಂಧನೆಯು ಮಧ್ಯಂತರ ಜಾಮೀನಿಗೆ ಅನ್ವಯಿಸುತ್ತದೆ. ಇಲ್ಲಿಯೂ ಜಾಮೀನು ನೀಡುವ ಮೊದಲು ಕೇಜ್ರಿವಾಲ್ ವಿರುದ್ಧ ಕೇಸ್ ಹಾಕಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕಾಗುತ್ತದೆ. ಅರವಿಂದ್ ಅವರು ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು ಆದರೆ ರಿಜಿಸ್ಟ್ರಾರ್ ಜನರಲ್ ಅದನ್ನು ಆರಂಭಿಕ ವಿಚಾರಣೆಗೆ ಪಟ್ಟಿ ಮಾಡಲು ನಿರಾಕರಿಸಿದ್ದರು ಎಂದು ತಮ್ಮ ಅರ್ಜಿಯಲ್ಲಿ ಈ ನ್ಯಾಯಾಲಯಕ್ಕೆ ತಿಳಿಸಲಿಲ್ಲ. ಈ ಸಂಗತಿಯನ್ನು ಅವರು ನ್ಯಾಯಾಲಯದಿಂದ ಮುಚ್ಚಿಟ್ಟಿದ್ದರು.

ವಕೀಲ ಹರಿಹರನ್ ಮಾತನಾಡಿ, ಚುನಾವಣಾ ಪ್ರಚಾರದ ನಂತರ ಶುಗರ್ ಲೆವೆಲ್ ಏರುಪೇರಾಗುತ್ತಿದೆ. ಇದು ತುಂಬಾ ಅಪಾಯಕಾರಿಯಾಗಬಹುದು. ಆತಂಕಕಾರಿ ವಿಷಯವೆಂದರೆ ದೇಹದಲ್ಲಿ ಕೀಟೋನ್ ಮಟ್ಟವೂ ಹೆಚ್ಚಾಯಿತು. ಮೂತ್ರಪಿಂಡಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದಕ್ಕೆ ಇದು ಸಂಕೇತವಾಗಿದೆ. ವೈದ್ಯರ ವರದಿ ಹೇಗಿದೆ ಮತ್ತು ನನ್ನ ಆರೋಗ್ಯ ಹೇಗಿದೆ, ನಾಳೆ ನನಗೆ ಏನಾದರೂ ಸಂಭವಿಸಿದರೆ, ಅದರ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ, ಅದನ್ನು ಯಾವ ತನಿಖಾ ಸಂಸ್ಥೆ ತೆಗೆದುಕೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಾನು 7 ದಿನಗಳ ಮಧ್ಯಂತರ ಜಾಮೀನು ಕೇಳುತ್ತಿದ್ದು ಇದರಿಂದ ನಾನು ನನ್ನ ಚಿಕಿತ್ಸೆಯನ್ನು ಪಡೆಯುತ್ತೇನೆ. ಕೀಟೋನ್ ಮಟ್ಟ 15+ ಆಗಿದೆ. ಇದು ಋಣಾತ್ಮಕವಾಗಿರಬೇಕು ಮತ್ತು ಅದಕ್ಕಾಗಿಯೇ ನಾವು ಅವರ ದೇಹದಲ್ಲಿ ಕೆಲವು ದೊಡ್ಡ ಬದಲಾವಣೆಗಳು ಸಂಭವಿಸುತ್ತಿವೆ ಎಂದು ನಾವು ಹೇಳುತ್ತೇವೆ ಅದನ್ನು ತನಿಖೆ ಮಾಡಬೇಕಾಗಿದೆ. ನಾನು ಶರಣಾಗಲು ಬಯಸುವುದಿಲ್ಲ ಎಂದು ಅಲ್ಲ. ಇಂದು ಕೇಜ್ರಿವಾಲ್ ಅವರ ತೂಕ 64 ಕೆ.ಜಿ. ಆತನನ್ನು ವಶಕ್ಕೆ ಪಡೆದಾಗ ಆತನ ತೂಕ 69 ಕೆ.ಜಿ ಆಗಿತ್ತು ಎಂದು ವಾದಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com