ಲೋಕಸಭಾ ಚುನಾವಣೆ 7ನೇ ಹಂತ: ಈವರೆಗೂ ಶೇ. 40.09ರಷ್ಟು ಮತದಾನ, ಬಂಗಾಳದಲ್ಲಿ EVMs, VVPAT ಲೂಟಿ!
ನವದೆಹಲಿ: ಲೋಕಸಭಾ ಚುನಾವಣೆಯ 7 ಮತ್ತು ಅಂತಿಮ ಹಂತದ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈವರೆಗೂ ಶೇ.40.09ರಷ್ಟು ಮತದಾನವಾಗಿದೆ.
ಬಿಹಾರ, ಚಂಡೀಗಢ, ಹಿಮಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ಪಂಜಾಬ್, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 7 ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶಗಳ 57 ಲೋಕಸಭೆ ಕ್ಷೇತ್ರಗಳಲ್ಲಿ 2024ರ ಲೋಕಸಭೆ ಚುನಾವಣೆಯ ಏಳನೇ ಹಾಗೂ ಅಂತಿಮ ಹಂತದ ಮತದಾನ ಇಂದು (ಶನಿವಾರ) ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಿದ್ದು, ಮಧ್ಯಾಹ್ನ 1 ಗಂಟೆಯ ವೇಳೆಗೆ 40.09ರಷ್ಟು ಮತದಾನವಾಗಿದೆ.
ಹಿಮಾಚಲ ಪ್ರದೇಶದಲ್ಲಿ ಅತಿ ಹೆಚ್ಚು ಶೇ.48.63ರಷ್ಟು ಮತದಾನವಾಗಿದ್ದಾರೆ, ಬಿಹಾರದಲ್ಲಿ ಕಡಿಮೆ ಶೇ.35.65ರಷ್ಟು ಮತದಾನವಾಗಿದೆ.
ರಾಜ್ಯವಾರು ಮತದಾನದ ಮಾಹಿತಿ ಇಲ್ಲಿದೆ...
ಬಿಹಾರ ಶೇ.35.65
ಚಂಡೀಗಢ ಶೇ.40.14
ಹಿಮಾಚಲ ಪ್ರದೇಶ ಶೇ.48.63
ಜಾರ್ಖಂಡ್ ಶೇ.46.80
ಒಡಿಶಾ ಶೇ.37.64
ಪಂಜಾಬ್ ಶೇ.37.80
ಉತ್ತರ ಪ್ರದೇಶ ಶೇ.39.21
ಪಶ್ಚಿಮ ಬಂಗಾಳ ಶೇ.45.07
ಪಶ್ಚಿಮ ಬಂಗಾದಲ್ಲಿ ಇವಿಎಂ, ವಿವಿಪಿಟಿ ಲೂಟಿ ಮಾಡಿದ ಸ್ಥಳೀಯರು
19-ಜಯನಗರ (SC) ಸಂಸದೀಯ ಕ್ಷೇತ್ರದ ವ್ಯಾಪ್ತಿಗೆ ಬರುವ 129-ಕುಲ್ತಾಲಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಗುಂಪೊಂದು ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಲೂಟಿ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಒಂದು ಕಂಟ್ರೋಲ್ ಯೂನಿಟ್ (CU), ಒಂದು ಬ್ಯಾಲೆಟ್ ಯೂನಿಟ್ (BU), ಮತ್ತು ಎರಡು VVPAT ಯಂತ್ರಗಳನ್ನು ಲೂಟಿ ಮಾಡಿರುವ ಕಿಡಿಗೇಡಿಗಳು. ಅವುಗಳನ್ನು ಚರಂಡಿಗೆ ಎಸೆದಿರುವುದು ಕಂಡು ಬಂದಿದೆ.
ಈ ಘಟನೆಯ ಹೊರತಾಗಿಯೂ ಸೆಕ್ಟರ್‌ನ ಎಲ್ಲಾ ಆರು ಬೂತ್‌ಗಳಲ್ಲಿ ಅಡೆತಡೆಗಳಿಲ್ಲದೆ ಮತದಾನ ಮುಂದುವರೆದಿದೆ. ಹೊಸ ಇವಿಎಂಗಳು ಮತ್ತು ಪೇಪರ್‌ಗಳನ್ನು ಸೆಕ್ಟರ್ ಅಧಿಕಾರಿಗೆ ನೀಡಲಾಗಿದೆ ಎಂದು ಪಶ್ಚಿಮ ಬಂಗಾಳ ಸಿಇಒ ಹೇಳಿದರು.
ಸೆಕ್ಟರ್ ಅಧಿಕಾರಿಯಿಂದ ಎಫ್‌ಐಆರ್ ದಾಖಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಆರು ಬೂತ್‌ಗಳಲ್ಲಿ ಮತದಾನ ಪ್ರಕ್ರಿಯೆಯು ಅಡೆತಡೆಯಿಲ್ಲದೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ