Kolhapur: ಭೀಕರ ಅಪಘಾತ, ವೇಗವಾಗಿ ಬಂದು ಹಲವು ಬೈಕ್ ಗಳಿಗೆ ಕಾರು ಢಿಕ್ಕಿ; ಗಾಳಿಯಲ್ಲಿ ಹಾರಿದ ಸವಾರರು, CCTV Video ವೈರಲ್!

ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರೊಂದು ವೇಗವಾಗಿ ಬಂದು ಹಲವು ಬೈಕ್ ಗಳಿಗೆ ಢಿಕ್ಕಿಯಾದ ಪರಿಣಾಮ ಬೈಕ್ ಸವಾರರು ಗಾಳಿಯಲ್ಲಿ ಹಾರಿ ಬಿದ್ದಿದ್ದು, 3 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
Kolhapur Rash Driving
ಹಲವು ಬೈಕ್ ಗಳಿಗೆ ಕಾರು ಢಿಕ್ಕಿ
Updated on

ಕೊಲ್ಹಾಪುರ: ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರೊಂದು ವೇಗವಾಗಿ ಬಂದು ಹಲವು ಬೈಕ್ ಗಳಿಗೆ ಢಿಕ್ಕಿಯಾದ ಪರಿಣಾಮ ಬೈಕ್ ಸವಾರರು ಗಾಳಿಯಲ್ಲಿ ಹಾರಿ ಬಿದ್ದಿದ್ದು, 3 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ವಿಡಿಯೋ ದಾಖಲಾಗಿದೆ. ಕೊಲ್ಹಾಪುರದ ಪ್ರಮುಖ ವೃತ್ತದಲ್ಲಿ ಈ ಘಟನೆ ನಡೆದಿದ್ದು, ವೃತ್ತಿದಲ್ಲಿ ಹಲವು ಬೈಕ್ ಗಳು ಚಲಿಸುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಏಕಾಏಕಿ ಬೈಕ್ ಗಳಿಗೆ ಢಿಕ್ಕಿಯಾಗಿದೆ.

ಕಾರು ಗುದ್ದಿದ ರಭಸಕ್ಕೆ ಕ್ಷಣ ಮಾತ್ರದಲ್ಲಿ ಬೈಕ್ ಗಳಲ್ಲಿದ್ದ ಸವಾರರು ಮತ್ತು ಹಿಂಬದಿ ಸವಾರರು ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದಿದ್ದಾರೆ. ಈ ಪೈಕಿ ಒಂದು ಬೈಕ್ ನಲ್ಲಿ ದಂಪತಿ ಕೂಡ ಇದ್ದು, ದಂಪತಿಯ ಮಗು ಕೂಡ ಗಾಳಿಯಲ್ಲಿ ಹಾರಿ ಬಿದ್ದಿದೆ.

Kolhapur Rash Driving
ಕಾಶ್ಮೀರ: ಪ್ರಪಾತಕ್ಕೆ ಉರುಳಿಬಿದ್ದ ಬಸ್, ಭೀಕರ ಅಪಘಾತದಲ್ಲಿ 21 ಮಂದಿ ಸಾವು

ಅಪಘಾತದ ಬಳಿಕ ಕಾರು ಪಲ್ಟಿಯಾಗಿ ಬಿದ್ದಿದ್ದು, ಈ ಅಪಘಾತದಲ್ಲಿ ಕಾರು ಚಾಲಕ ಸೇರಿ 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 6ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಕೊಲ್ಹಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತಿ ವೇಗವೇ ಅಪಘಾತಕ್ಕೆ ಕಾರಣ

ಇನ್ನು ಮೇಲ್ನೋಟಕ್ಕೆ ಕಾರು ಚಾಲಕನ ಅತಿಯಾದ ವೇಗದ ಚಾಲನೆಯೇ ಈ ಭೀಕರ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಕೊಲ್ಹಾಪುರ ಪೊಲೀಸರು ತನಿಖೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com