3 ನೇ ಬಾರಿಗೆ NDA ಪರ ಜನ ವಿಶ್ವಾಸ ಇರಿಸಿದ್ದಾರೆ, ಐತಿಹಾಸಿಕ ಕ್ಷಣ: ಚುನಾವಣಾ ಫಲಿತಾಂಶದ ಬಗ್ಗೆ ಪ್ರಧಾನಿ ಮೋದಿ

ಲೋಕಸಭಾ ಚುನಾವಣೆ 2024 ರಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಗೆ ಸತತ 3 ನೇ ಬಾರಿಗೆ ಅಧಿಕಾರ ನೀಡಿರುವುದಕ್ಕೆ ಜನತೆಗೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ.
3 ನೇ ಬಾರಿಗೆ NDA ಪರ ಜನ ವಿಶ್ವಾಸ ಇರಿಸಿದ್ದಾರೆ, ಐತಿಹಾಸಿಕ ಕ್ಷಣ: ಚುನಾವಣಾ ಫಲಿತಾಂಶದ ಬಗ್ಗೆ ಪ್ರಧಾನಿ ಮೋದಿ

ನವದೆಹಲಿ: ಲೋಕಸಭಾ ಚುನಾವಣೆ 2024 ರಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಗೆ ಸತತ 3 ನೇ ಬಾರಿಗೆ ಅಧಿಕಾರ ನೀಡಿರುವುದಕ್ಕೆ ಜನತೆಗೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ.

"ಸತತ ಮೂರನೇ ಬಾರಿಗೆ ಎನ್ ಡಿಎ ಪರ ಜನತೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಇದು ಐತಿಹಾಸಿಕ ಮೈಲಿಗಲ್ಲು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

3 ನೇ ಬಾರಿಗೆ NDA ಪರ ಜನ ವಿಶ್ವಾಸ ಇರಿಸಿದ್ದಾರೆ, ಐತಿಹಾಸಿಕ ಕ್ಷಣ: ಚುನಾವಣಾ ಫಲಿತಾಂಶದ ಬಗ್ಗೆ ಪ್ರಧಾನಿ ಮೋದಿ
ಭಾರತದಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮೂರನೇ ಪ್ರಧಾನಿ ನರೇಂದ್ರ ಮೋದಿ; ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ?

ಎನ್ ಡಿಎ ಮೈತ್ರಿಕೂಟ 290 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ವಿಪಕ್ಷ INDIA ಮೈತ್ರಿಕೂಟ ಸಹ ಎನ್ ಡಿಎ ಗೆ ಪ್ರಬಲ ಪೈಪೋಟಿ ನೀಡಿದ್ದು 234 ಸ್ಥಾನಗಳನ್ನು ಪಡೆದಿದ್ದು 2019 ಕ್ಕೆ ಹೋಲಿಕೆ ಮಾಡಿದರೆ ಇದು ವಿಪಕ್ಷದ ಉತ್ತಮ ಸಾಧನೆಯಾಗಿದೆ.

ಈ ವಿಶ್ವಾಸಕ್ಕಾಗಿ ಜನತಾ ಜನಾರ್ದನನಿಗೆ ನಾನು ನಮಿಸುತ್ತೇನೆ. ಕಳೆದ 1 ದಶಕದಲ್ಲಿ ನಡೆದ ಉತ್ತಮ ಕೆಲಸಗಳನ್ನು ಮುಂದುವರೆಸುತ್ತೇವೆ, ಜನರ ಆಶೋತ್ತರಗಳನ್ನು ಈಡೇರಿಸುತ್ತೇವೆ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಈ ಫಲಿತಾಂಶಕ್ಕಾಗಿ ಶ್ರಮ ವಹಿಸಿದ ಕಾರ್ಯಕರ್ತರಿಗೂ ಮೋದಿ ಧನ್ಯವಾದ ತಿಳಿಸಿದ್ದು, ಅವರ ಪರಿಶ್ರಮವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com