
ರಾಂಚಿ: ಜಾರ್ಖಂಡ್‌ನಲ್ಲಿ ಬುಡಕಟ್ಟು ಸಮುದಾಯಕ್ಕೆ ಮೀಸಲಾಗಿದ್ದ ಎಲ್ಲ ಐದು ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿದೆ. ಕುಂತಿ ಲೋಹರ್ಡಗಾ, ಸಿಂಗ್‌ಭೂಮ್, ರಾಜಮಹಲ್ ಮತ್ತು ದುಮ್ಕಾ ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ. ಕುಂತಿ ಮತ್ತು ಲೋಹರ್ಡ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ರಾಜಮಹಲ್ ಮತ್ತು ದುಮ್ಕಾದಲ್ಲಿ ಜೆಎಂಎಂ ಗೆದ್ದಿದೆ. 2019ರಲ್ಲಿ ಐದು ಕ್ಷೇತ್ರಗಳ ಪೈಕಿ ರಾಜಮಹಲ್ ಮತ್ತು ಸಿಂಗ್‌ಭೂಮ್‌ನಲ್ಲಿ ಬಿಜೆಪಿ ಗೆದ್ದಿತ್ತು.
ಕುಂತಿಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಅರ್ಜುನ್ ಮುಂಡಾ ಕಾಂಗ್ರೆಸ್‌ನ ಕಾಳಿಚರಣ್ ಮುಂಡಾ ವಿರುದ್ಧ ಸೋತರು. ದುಮ್ಕಾದಲ್ಲಿ ಜೆಎಂಎಂನ ಏಳು ಬಾರಿ ಶಾಸಕರಾಗಿರುವ ನಳಿನ್ ಸೊರೆನ್ ವಿರುದ್ಧ ಸೀತಾ ಸೊರೆನ್ ಸೋತಿದ್ದಾರೆ. ಬಿಜೆಪಿ ತನ್ನ ಅಧಿಕೃತ ನಾಮನಿರ್ದೇಶಿತ ಮತ್ತು ಹಾಲಿ ಸಂಸದ ಸುನಿಲ್ ಸೊರೆನ್ ಅವರನ್ನು ಹಿಂತೆಗೆದುಕೊಂಡು ಮೂರು ಬಾರಿ ಜೆಎಂಎಂ ಶಾಸಕಿ ಸೀತಾ ಸೊರೆನ್ ಅವರನ್ನು ದುಮ್ಕಾದಲ್ಲಿ ಕಣಕ್ಕಿಳಿಸಿತ್ತು.
ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರ ಪತ್ನಿ ಗೀತಾ ಕೋಡಾ ಅವರು ಸಿಂಗ್‌ಭೂಮ್‌ನಲ್ಲಿ ಜೆಎಂಎಂನ ಜೋಬಾ ಮಾಂಝಿ ವಿರುದ್ಧ ಸೋತಿದ್ದಾರೆ. ಲೋಹರ್ಡಗಾದಲ್ಲಿ, ಬಿಜೆಪಿ ತನ್ನ ಹಾಲಿ ಸಂಸದ ಸುದರ್ಶನ್ ಭಗತ್ ಬದಲಿಗೆ ಸಮೀರ್ ಓರಾನ್ ಅವರನ್ನು ಕಣಕ್ಕಿಳಿಸಿತ್ತು. ಆದರೆ ಅವರು ಕಾಂಗ್ರೆಸ್ ಪಕ್ಷದ ಸುಖದೇವ್ ಭಗತ್ ವಿರುದ್ಧ ಸೋತಿದ್ದಾರೆ. ರಾಜಮಹಲ್ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಜೆಎಂಎಂ ಯಶಸ್ವಿಯಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಡಕಟ್ಟು ಜನಾಂಗದವರಿಗೆ, ವಿಶೇಷವಾಗಿ ಜಾರ್ಖಂಡ್‌ನ ಪ್ರಾಚೀನ ಬುಡಕಟ್ಟುಗಳಿಗೆ ಮೆಗಾ-ಅಭಿವೃದ್ಧಿ ಕಾರ್ಯಕ್ರಮವನ್ನು ಆರಂಭಿಸಿದ್ದರು. ಸರ್ಕಾರವು ಬುಡಕಟ್ಟು ಜನಾಂಗದ ಐಕಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು 'ಜನಜಾತಿಯ ಗೌರವ್ ದಿವಸ್' ಎಂದು ಘೋಷಿಸಿತು ಆದರೆ. ತಮ್ಮ ಭೂಮಿ ಮತ್ತು ಅರಣ್ಯವನ್ನು ಉಳಿಸುವ ಭರವಸೆಯನ್ನು ಬಯಸಿದ ಆದಿವಾಸಿಗಳನ್ನು ಮನವೊಲಿಸಲು ಸಾಧ್ಯವಾಗಲಿಲ್ಲ.
Advertisement