ಲೋಕಸಭೆ ಚುನಾವಣೆ 2024: ಹಲವು ಕ್ಷೇತ್ರಗಳಲ್ಲಿ NOTA ಮತದಾನ ಪ್ರಮಾಣ ಹೆಚ್ಚು!

ಚುನಾವಣಾ ಆಯೋಗದ ವರದಿ ಪ್ರಕಾರ, 28 ಕ್ಷೇತ್ರಗಳ ಮತದಾನದಲ್ಲಿ ರಾಜ್ಯಾದ್ಯಂತ 2,18,300 ನೋಟಾ ಮತಗಳು ಈ ಬಾರಿ ಬಂದಿವೆ. ಇದು ಒಟ್ಟಾರೆ ಮತದಾನದ ಶೇಕಡಾ 0.56ರಷ್ಟು ಹಂಚಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: 2024ರ ಲೋಕಸಭೆ ಚುನಾವಣೆಯಲ್ಲಿ ಚಲಾವಣೆಯಾದ ಮತಗಳಲ್ಲಿ ಮೇಲಿನ ಯಾವ ಅಭ್ಯರ್ಥಿಯೂ ಅಲ್ಲ(NOTA) ಹೆಚ್ಚು ಸದ್ದು ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ಗೆದ್ದವರು ಮತ್ತು ಸೋತವರ ಹೊರತಾಗಿ, ಮೇಲಿನ ಯಾವುದೂ ಇಲ್ಲ (NOTA) ಆಯ್ಕೆಯನ್ನು ಹಲವು ಕ್ಷೇತ್ರಗಳಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಒತ್ತಿದ್ದಾರೆ.

ಚುನಾವಣಾ ಆಯೋಗದ ವರದಿ ಪ್ರಕಾರ, 28 ಕ್ಷೇತ್ರಗಳ ಮತದಾನದಲ್ಲಿ ರಾಜ್ಯಾದ್ಯಂತ 2,18,300 ನೋಟಾ ಮತಗಳು ಈ ಬಾರಿ ಬಂದಿವೆ. ಇದು ಒಟ್ಟಾರೆ ಮತದಾನದ ಶೇಕಡಾ 0.56ರಷ್ಟು ಹಂಚಿಕೆಯಾಗಿದೆ. 2019 ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಸ್ವಲ್ಪ ಕಡಿಮೆಯಾಗಿದೆ. ಅಂದು ರಾಜ್ಯದಲ್ಲಿ 2,50,810 ನೋಟಾ ಮತಗಳು ಬಂದಿದ್ದು ಅದು ಶೇಕಡಾ 0.72ರಷ್ಟು ಮತ ಹಂಚಿಕೆಯಾಗಿತ್ತು.

ಅಂಕಿಅಂಶಗಳ ಪ್ರಕಾರ, ಅತಿ ಹೆಚ್ಚು ನೋಟಾ ಮತಗಳು ದಕ್ಷಿಣ ಕನ್ನಡದಲ್ಲಿ (23,576) ನಂತರದ ಸ್ಥಾನದಲ್ಲಿ ಬೆಂಗಳೂರು ಉತ್ತರ (13,554) ಮತ್ತು ಬೆಂಗಳೂರು ಸೆಂಟ್ರಲ್ (12,126) ಆಗಿದೆ. ಚಿಕ್ಕೋಡಿಯಲ್ಲಿ (2,608) ನೋಟಾ ಮತಗಳು ಬಂದಿವೆ.

ನೋಟಾ ಆಯ್ಕೆ ಮಾಡುವ ಮತದಾರರು ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ ಅಥವಾ ಪ್ರಜಾಪ್ರಭುತ್ವದ ವಿರುದ್ಧ ತಮ್ಮ ಭಿನ್ನಾಭಿಪ್ರಾಯವನ್ನು ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಪಿಸೆಫಾಲಜಿಸ್ಟ್(ಚುನಾವಣಾ ಟ್ರೆಂಡ್ ಗಳ ತಜ್ಞರು) ಸಂದೀಪ್ ಶಾಸ್ತ್ರಿ ಹೇಳಿದ್ದಾರೆ.

ಇದು ರಾಜಕೀಯ ಸ್ಥಾಪನೆಯ ವಿರುದ್ಧ ಪ್ರತಿಭಟಿಸುವ ವಿಧಾನವಾಗಿದೆ. ಮತದಾರರು ತಾವು ಬದ್ಧ ಮತದಾರರು ಎಂದು ಹೇಳಲು ಬಯಸುತ್ತಿರುವುದನ್ನು ಸಹ ಇದು ತೋರಿಸುತ್ತದೆ, ಆದರೆ ಅವರು ಪಕ್ಷಗಳ ಬಗ್ಗೆ ಈಗಿರುವ ರಾಜಕೀಯ ಒಕ್ಕೂಟದ ಬಗ್ಗೆ ಅತೃಪ್ತಿ ಹೊಂದಿದ್ದಾರೆ ಅಥವಾ ಸ್ಪರ್ಧಿಸುವ ಅಭ್ಯರ್ಥಿಯ ಬಗ್ಗೆ ಅವರು ಅಸಮಾಧಾನ ಹೊಂದಿದ್ದಾರೆ ಎಂದು ತೋರಿಸುತ್ತದೆ ಎಂದಿದ್ದಾರೆ.

ಸಾಂದರ್ಭಿಕ ಚಿತ್ರ
ಇಂದೋರ್ ನಲ್ಲಿ ಎರಡು ಚುನಾವಣಾ ದಾಖಲೆ; ಅತಿ ಹೆಚ್ಚು NOTA, ಮತ್ತೊಂದು 11 ಲಕ್ಷ ಮತಗಳ ಲೀಡ್!

ರಾಜಕೀಯ ಪಕ್ಷಗಳು ಇದನ್ನು ಹೆಚ್ಚು ಗಮನಿಸುವುದಿಲ್ಲ ಎಂದು ರಾಜಕೀಯ ತಜ್ಞ ಚಂದನ್ ಗೌಡ ಹೇಳುತ್ತಾರೆ. ಮತದಾರರ ಈ ಮನೋಭಾವವನ್ನು ನಾವು ನಿರ್ಲಕ್ಷಿಸಬಾರದು. ಇದು ಅಭ್ಯರ್ಥಿಯ ಆಯ್ಕೆಯ ಬಗ್ಗೆ ಮತದಾರರ ಅಸಮಾಧಾನದ ಸಂಕೇತವಾಗಿದೆ. ಉತ್ತಮ ಅಭ್ಯರ್ಥಿಗಳ ಅಗತ್ಯತೆ ಮತ್ತು ಉತ್ತಮ ವಿಷಯಗಳ ಕುರಿತು ಚರ್ಚೆಯಾಗಬೇಕು ಎಂಬುದನ್ನು ಇದು ತೋರಿಸುತ್ತದೆ. ಇದು ಪೌರತ್ವದ ಸಮಸ್ಯೆಯಾಗಿದ್ದು, ಮತದಾರರು ಪ್ರಜಾಪ್ರಭುತ್ವ ಸ್ಥಾಪನೆಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದರು.

ನಗರಗಳಲ್ಲಿ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಮತದಾರರು ನೋಟಾ ಆಯ್ಕೆ ಮಾಡಿದ್ದಾರೆಯೇ ಮತ್ತು ಯಾವ ಕ್ಷೇತ್ರದಲ್ಲಿ ಹೆಚ್ಚು ಮಾಡಿದ್ದಾರೆ ಎಂಬುದನ್ನು ಚಿತಪಡಿಸಿಕೊಳ್ಳಬೇಕಾಗಿದೆ ಎಂದು ರಾಜಕೀಯ ತಜ್ಞರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com