UGNEET ಫಲಿತಾಂಶ ಪ್ರಕಟ: ಕರ್ನಾಟಕಕ್ಕೆ 5ನೇ ಸ್ಥಾನ, ರಾಜ್ಯದ ಮೂವರಿಗೆ ಮೊದಲ ರ‍್ಯಾಂಕ್‌

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮಂಗಳವಾರ(ಜೂನ್ 4) ಸಂಜೆ ತಡವಾಗಿ UGNEET-2024 ಫಲಿತಾಂಶ ಪ್ರಕಟಿಸಿದ್ದು, ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್‌ ಗಳಿಸಿದ 67 ಟಾಪರ್‌ಗಳಲ್ಲಿ ರಾಜ್ಯದ ಮೂವರು ಇದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮಂಗಳವಾರ(ಜೂನ್ 4) ಸಂಜೆ ತಡವಾಗಿ UGNEET-2024 ಫಲಿತಾಂಶ ಪ್ರಕಟಿಸಿದ್ದು, ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್‌ ಗಳಿಸಿದ 67 ಟಾಪರ್‌ಗಳಲ್ಲಿ ರಾಜ್ಯದ ಮೂವರು ಇದ್ದಾರೆ.

ರಾಜ್ಯದ ಕಲ್ಯಾಣ್ ವಿ, ಸ್ಯಾಮ್ ಶ್ರೇಯಸ್ ಜೋಸೆಫ್ ಮತ್ತು ಅರ್ಜುನ್ ಕಿಶೋರ್ ಅವರು ಶೇ. 99.99 ಅಂಕ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಕರ್ನಾಟಕದಿಂದ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 89,088 ವಿದ್ಯಾರ್ಥಿಗಳು ಈ ವರ್ಷ ನೀಟ್‌ಗೆ ಅರ್ಹರಾಗಿದ್ದಾರೆ. ಕಳೆದ ವರ್ಷ ಕರ್ನಾಟಕದ 75,248 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದರು.

ಎನ್‌ಟಿಎ ಬಿಡುಗಡೆ ಮಾಡಿದ ಟಾಪ್ 100 ರ‍್ಯಾಂಕ್‌ಗಳಲ್ಲಿ ಕರ್ನಾಟಕದ ಐದು ಹುಡುಗರು ಮತ್ತು ಒಬ್ಬ ಹುಡುಗಿ ಸೇರಿದಂತೆ ಆರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಕಲ್ಯಾಣ್ ಅವರು ಬಿ ಫಾರ್ಮ್, ಫಾರ್ಮ್ ಡಿ, ಪಶುವೈದ್ಯಕೀಯ ವಿಜ್ಞಾನ ಮತ್ತು ನರ್ಸಿಂಗ್ ಸ್ಟ್ರೀಮ್‌ಗಳಲ್ಲಿ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ(ಸಿಇಟಿ) ಅಗ್ರಸ್ಥಾನ ಗಳಿಸಿದ್ದರು. ಇದರ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಕಳೆದ ಶನಿವಾರ ಪ್ರಕಟಿಸಿತ್ತು. ಮೇ 5 ರಂದು ಬೆಂಗಳೂರು ಸೇರಿದಂತೆ ರಾಜ್ಯದ 29 ಜಿಲ್ಲಾ ಕೇಂದ್ರಗಳಲ್ಲಿ ಪದವಿ ಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ನಡೆದಿತ್ತು.

ಸಾಂದರ್ಭಿಕ ಚಿತ್ರ
ಸಿಇಟಿ ಫಲಿತಾಂಶ ಪ್ರಕಟ: ಇಂಜಿನಿಯರಿಂಗ್ ನ 10 ರ್ಯಾಂಕ್ ನಲ್ಲಿ ಟಾಪ್ 9 ಬಾಲಕರು!

ಭಾರತದಾದ್ಯಂತ, 557 ನಗರಗಳಲ್ಲಿ ಮತ್ತು ವಿದೇಶದ 14 ನಗರಗಳಲ್ಲಿ ಯುಜಿ ನೀಟ್ ಪರೀಕ್ಷೆ ನಡೆಸಲಾಗಿತ್ತು. ಒಂದು ಲಕ್ಷ ಎಂಬಿಬಿಎಸ್ ಸೀಟುಗಳನ್ನು ಪಡೆಯಲು 24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್‌ಗೆ ನೋಂದಾಯಿಸಿಕೊಂಡಿದ್ದರು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕಳೆದ ವರ್ಷ 720-137 ಇದ್ದ ಕಟ್-ಆಫ್ ಈ ವರ್ಷ 720-164ಕ್ಕೆ ಏರಿಕೆಯಾಗಿದೆ. NEET UG 2024 ಫಲಿತಾಂಶವನ್ನು ಜೂನ್ 4 ರಂದು NTA ಬಿಡುಗಡೆ ಮಾಡಿದ್ದು ಅಂತಿಮ ಉತ್ತರ ಕೀಯನ್ನು ಆಧರಿಸಿ ಫಲಿತಾಂಶ ಪ್ರಕಟಿಸಲಾಗಿದೆ.

ರಾಜ್ಯವಾರು ಫಲಿತಾಂಶದಲ್ಲಿ ಉತ್ತರ ಪ್ರದೇಶ 1,65,047 ವಿದ್ಯಾರ್ಥಿಗಳೊಂದಿಗೆ ಮೊದಲ ಸ್ಥಾನ ಪಡೆದಿದ್ದು, ಮಹಾರಾಷ್ಟ್ರ, ರಾಜಸ್ಥಾನ ಮತ್ತು ತಮಿಳುನಾಡು ಕ್ರಮವಾಗಿ 1,42,665, 121240 ಮತ್ತು 89,426 ವಿದ್ಯಾರ್ಥಿಗಳ ಅರ್ಹತೆಯೊಂದಿಗೆ ಎರಡು, ಮೂರು ಮತ್ತು ನಾಲ್ಕನೆ ಸ್ಥಾಪ ಪಡೆದಿವೆ. ಕರ್ನಾಟಕ ಐದನೇ ಸ್ಥಾನ ಪಡೆದುಕೊಂಡಿದೆ. ಭಾರತದಾದ್ಯಂತ, 13,16,268 ವಿದ್ಯಾರ್ಥಿಗಳು UGNEET 2024 ಗೆ ಅರ್ಹತೆ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com