
ನವದೆಹಲಿ: 18ನೇ ಲೋಕಸಭೆಯಲ್ಲಿ ಮೊದಲ ಬಾರಿಗೆ ಚುನಾಯಿತರಾದ ಸುಮಾರು 280 ಸಂಸದರಿದ್ದಾರೆ. 2019ರ ಚುನಾವಣೆಯಲ್ಲಿ 267 ಸಂಸದರು ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಅವರ ಸಂಖ್ಯೆ ಹೆಚ್ಚಾಗಿದೆ. ಹೊಸದಾಗಿ ಚುನಾಯಿತರಾದ ಒಟ್ಟು 263 ಸಂಸದರು ಈ ಹಿಂದೆ ಲೋಕಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಥಿಂಕ್-ಟ್ಯಾಂಕ್ PRS ಲೆಜಿಸ್ಲೇಟಿವ್ ರಿಸರ್ಚ್ ಪ್ರಕಾರ, ಹೆಚ್ಚುವರಿಯಾಗಿ 16 ಸಂಸದರು ರಾಜ್ಯಸಭೆಯ ಸದಸ್ಯರಾಗಿದ್ದಾರೆ ಮತ್ತು ಓರ್ವ ಸಂಸದರು ಲೋಕಸಭೆಯಲ್ಲಿ ಏಳು ಅವಧಿಗೆ ಸೇವೆ ಸಲ್ಲಿಸಿದ್ದಾರೆ.
ಪುನರಾಯ್ಕೆಯಾದ ಸಂಸದರಲ್ಲಿ ಎಂಟು ಮಂದಿ ತಮ್ಮ ಕ್ಷೇತ್ರವನ್ನು ಬದಲಾಯಿಸಿದ್ದು, ಒಬ್ಬರು ಎರಡು ಕ್ಷೇತ್ರಗಳಿಂದ ಮರು ಆಯ್ಕೆಯಾಗಿದ್ದಾರೆ.
ಒಂಬತ್ತು ಮರು ಚುನಾಯಿತ ಸಂಸದರು 17ನೇ ಲೋಕಸಭೆಯಲ್ಲಿ ವಿವಿಧ ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದರೆ, ಇತರ 8 ಮಂದಿ ತಮ್ಮ ಹಿಂದಿನ ಪಕ್ಷದಿಂದ ಬೇರ್ಪಟ್ಟ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಸ್ಪರ್ಧಿಸಿದ್ದ 53 ಸಚಿವರ ಪೈಕಿ 35 ಮಂದಿ ಗೆದ್ದಿದ್ದಾರೆ.
ಹೊಸ ಲೋಕಸಭೆಯಲ್ಲಿ 240 ಸ್ಥಾನಗಳೊಂದಿಗೆ ಬಿಜೆಪಿ ಅತಿದೊಡ್ಡ ಪಕ್ಷವಾಗಿದೆ. ಕಾಂಗ್ರೆಸ್ 99 ಸ್ಥಾನಗಳೊಂದಿಗೆ ಎರಡನೇ ದೊಡ್ಡ ಪಕ್ಷವಾಗಿದ್ದರೆ, ಸಮಾಜವಾದಿ ಪಕ್ಷವು 37 ಸ್ಥಾನಗಳೊಂದಿಗೆ ನಂತರದ ಸ್ಥಾನದಲ್ಲಿದೆ.
Advertisement