ಟೆಂಟ್‌ನಲ್ಲಿದ್ದ ರಾಮನಿಗೆ ದೇಗುಲ ಕಟ್ಟಿದ್ದೇ ತಪ್ಪಾ?; ಅಯೋಧ್ಯೆ ಜನರ ವಿರುದ್ಧ 'ರಾಮಾಯಣ'ದ ನಟ ಕಿಡಿ

ರಮಾನಂದ್ ಸಾಗರ್ ಅವರ 'ರಾಮಾಯಣ' ಚಿತ್ರದಲ್ಲಿ ಲಕ್ಷ್ಮಣನ ಪಾತ್ರದಲ್ಲಿ ನಟಿಸಿದ್ದ ನಟ ಸುನಿಲ್ ಲಾಹಿರಿ, ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಹುಮತ ಗಳಿಸಲು ಬಿಜೆಪಿ ವಿಫಲವಾಗಿರುವುದರಿಂದ ತೀವ್ರ ನಿರಾಸೆ ಉಂಟಾಗಿರುವುದಾಗಿ ಹೇಳಿದ್ದಾರೆ.
ಸುನೀಲ್ ಲಾಹಿರಿ
ಸುನೀಲ್ ಲಾಹಿರಿ
Updated on

ನವದೆಹಲಿ: ರಮಾನಂದ್ ಸಾಗರ್ ಅವರ 'ರಾಮಾಯಣ' ಚಿತ್ರದಲ್ಲಿ ಲಕ್ಷ್ಮಣನ ಪಾತ್ರದಲ್ಲಿ ನಟಿಸಿದ್ದ ನಟ ಸುನಿಲ್ ಲಾಹಿರಿ, ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಹುಮತ ಗಳಿಸಲು ಬಿಜೆಪಿ ವಿಫಲವಾಗಿರುವುದರಿಂದ ತೀವ್ರ ನಿರಾಸೆ ಉಂಟಾಗಿರುವುದಾಗಿ ಹೇಳಿದ್ದಾರೆ.

ತನ್ನ ಅನುಯಾಯಿಗಳಿಗೆ ನೀಡಿರುವ ವಿಡಿಯೋ ಸಂದೇಶದಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಸಮ್ಮಿಶ್ರ ಸರ್ಕಾರವು ಯಾವುದೇ ತೊಂದರೆಗಳಿಲ್ಲದೆ ಪೂರ್ಣಾವಧಿಯನ್ನು ಪೂರ್ಣಗೊಳಿಸಬಹುದೇ ಎಂದು ಪ್ರಶ್ನಿಸಿದ್ದಾರೆ. 'ಚುನಾವಣಾ ಫಲಿತಾಂಶಗಳನ್ನು ನೋಡಿ ನನಗೆ ತುಂಬಾ ನಿರಾಶೆಯಾಗಿದೆ. ಮೊದಲನೆಯದಾಗಿ, ಮತದಾನದ ಪ್ರಮಾಣ ತುಂಬಾ ಕಡಿಮೆಯಾಗಿದೆ ಮತ್ತು ನಂತರ ಈ ಫಲಿತಾಂಶ ಬಂದಿದೆ. ನಾನು ನಿರಂತರವಾಗಿ ಜನರಿಗೆ ಮತ ಚಲಾಯಿಸುವಂತೆ ಒತ್ತಾಯಿಸಿದ್ದೇನೆ. ಆದರೆ, ಯಾರೂ ಗಮನ ಹರಿಸಲಿಲ್ಲ. ಈಗ, ಸಮ್ಮಿಶ್ರ ಸರ್ಕಾರ ರಚನೆಯಾಗುತ್ತದೆ. ಆದರೆ, ಈ ಸರ್ಕಾರವು ಐದು ವರ್ಷ ಪೂರೈಸುತ್ತದೆಯೇ? ಇದು ಚಿಂತಿಸಬೇಕಾದ ವಿಚಾರವಾಗಿದೆ' ಎಂದಿದ್ದಾರೆ.

ಫೈಜಾಬಾದ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಕ್ಷಯ ಯಾದವ್ ಅವರು 89,000 ಮತಗಳಿಂದ ಬಿಜೆಪಿ ಅಭ್ಯರ್ಥಿ ವಿಶ್ವದೀಪ್ ಸಿಂಗ್ ಅವರನ್ನು ಸೋಲಿಸಿದ್ದು, ಇದಕ್ಕಾಗಿ ಅಯೋಧ್ಯೆಯ ಮತದಾರರ ವಿರುದ್ಧ ಚಾಟಿ ಬೀಸಿರುವ ಅವರು, ವನವಾಸದಿಂದ ಹಿಂದಿರುಗಿದ ನಂತರ ಅಯೋಧ್ಯೆಯ ನಿವಾಸಿಗಳು ಸೀತೆಯ ಚಾರಿತ್ರ್ಯದ ಬಗ್ಗೆ ಪ್ರಶ್ನಿಸಿದ್ದನ್ನು ನಾವು ಮರೆತಿದ್ದೇವೆ. ಅವರ ಮುಂದೆ ದೇವರೇ ಕಾಣಿಸಿಕೊಂಡರೂ, ಅವರು ಆತನನ್ನು ತಿರಸ್ಕರಿಸುತ್ತಾರೆ. ಅಯೋಧ್ಯೆ ಯಾವಾಗಲೂ ತನ್ನ ನಿಜವಾದ ರಾಜನಿಗೆ ದ್ರೋಹ ಬಗೆದಿದೆ ಎಂದು ಪೋಸ್ಟ್‌ ಮಾಡಿದ್ದಾರೆ.

ಸುನೀಲ್ ಲಾಹಿರಿ
64 ರಿಂದ 36: ಉತ್ತರ ಪ್ರದೇಶದಲ್ಲಿ ಬಿಜೆಪಿ, ಮಿತ್ರಪಕ್ಷಗಳು ಎಡವಿದ್ದೆಲ್ಲಿ?

'ನಾನು ಅಯೋಧ್ಯೆ ನಿವಾಸಿಗಳ ಶ್ರೇಷ್ಠತೆಗೆ ನಮಸ್ಕರಿಸುತ್ತೇನೆ. ನೀವು ಮಾತೆ ಸೀತೆಯನ್ನು ಸಹ ಬಿಡಲಿಲ್ಲ, ಹಾಗಾದರೆ ರಾಮನನ್ನು ಟೆಂಟ್‌ನಿಂದ ಹೊರತಂದು ಭವ್ಯವಾದ ದೇವಾಲಯದಲ್ಲಿ ಸಿಂಹಾಸನಾರೋಹಣ ಮಾಡಿದವರಿಗೆ ನೀವು ಹೇಗೆ ದ್ರೋಹ ಮಾಡಬಾರದು? ಭಾರತವು ನಿಮ್ಮನ್ನು ಎಂದಿಗೂ ದಯೆಯಿಂದ ನೋಡುವುದಿಲ್ಲ' ಎಂದು ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಆದರೆ, ತಮ್ಮ ನೆಚ್ಚಿನ ಇಬ್ಬರು ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಬಹುಮತ ಪಡೆದಿರುವುದು ಸಂತಸ ತಂದಿದೆ ಎಂದು ನಟ ಹೇಳಿದ್ದಾರೆ.

ಮೊದಲನೆಯದಾಗಿ, ಮಹಿಳಾ ಸಬಲೀಕರಣದ ಸಂಕೇತವಾಗಿರುವ ಕಂಗನಾ ರಣಾವತ್ ಅವರು ಮಂಡಿ ಸ್ಥಾನವನ್ನು ಗೆದ್ದಿದ್ದಾರೆ. ಎರಡನೆಯದಾಗಿ, ಮೀರತ್‌ನಿಂದ ನನ್ನ ಹಿರಿಯ ಸಹೋದರ ಅರುಣ್ ಗೋವಿಲ್ ಗೆದ್ದಿದ್ದಾರೆ. ನಾನು ಇಬ್ಬರನ್ನೂ ಅಭಿನಂದಿಸುತ್ತೇನೆ ಎಂದು ಹೇಳಿದರು.

ಲಾಹಿರಿ ಜೊತೆಗೆ ರಾಮನ ಪಾತ್ರವನ್ನು ನಿರ್ವಹಿಸಿದ ಅರುಣ್ ಗೋವಿಲ್ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com