ಮೋದಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರೂ ಪರ್ಯಾಯ ಸ್ಥಿರ ಸರ್ಕಾರ ರಚನೆ ಯತ್ನ ಮುಂದುವರೆಸಿದ ಇಂಡಿಯಾ ಬ್ಲಾಕ್!

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ) ಶುಕ್ರವಾರ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ.
ನರೇಂದ್ರ ಮೋದಿ, ಚಂದ್ರ ಬಾಬು ನಾಯ್ಡು ಮತ್ತು ನಿತೀಶ್ ಕುಮಾರ್
ನರೇಂದ್ರ ಮೋದಿ, ಚಂದ್ರ ಬಾಬು ನಾಯ್ಡು ಮತ್ತು ನಿತೀಶ್ ಕುಮಾರ್
Updated on

ನವದೆಹಲಿ: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ) ಶುಕ್ರವಾರ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರೂ, ಬಿಜೆಪಿಗೆ ಪರ್ಯಾಯವಾಗಿ ಸ್ಥಿರ ಸರ್ಕಾರ ರಚನೆಗೆ ಪ್ರತಿಪಕ್ಷಗಳ ಮೈತ್ರಿಕೂಟ ತನ್ನ ಪ್ರಯತ್ನ ಮುಂದುವರಿಸುವುದಾಗಿ ಹೇಳಿದೆ.

ಈ ಸಂಬಂಧ

ಟಿಎಂಸಿ ಸಂಸದರಾದ ಅಭಿಷೇಕ್ ಬ್ಯಾನರ್ಜಿ ಮತ್ತು ಡೆರೆಕ್ ಒ'ಬ್ರಿಯಾನ್ ಅವರು ಮುಂಬೈನಲ್ಲಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರೊಂದಿಗೆ ಮತ್ತು ದೆಹಲಿಯಲ್ಲಿ ಸಮಾಜವಾದಿ ಪಕ್ಷದ(ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಗುರುವಾರ ಮಾತುಕತೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಯಾದವ್ ಅವರು ಇನ್ನೂ ಹೆಚ್ಚಿನ ನಾಯಕರನ್ನು ಭೇಟಿಯಾಗಲಿದ್ದಾರೆ ಎಂದು ಎಸ್‌ಪಿ ನಾಯಕರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿದ ಎಸ್‌ಪಿ ವಕ್ತಾರ ಘನಶ್ಯಾಮ್ ತಿವಾರಿ, ಯಾದವ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಸದ್ಯ ನಾಯ್ಡು ಮತ್ತು ಕುಮಾರ್ ಇಬ್ಬರೂ ಬಿಜೆಪಿಗೆ ಬೆಂಬಲ ನೀಡಿದ್ದಾರೆ. "ಬಿಜೆಪಿಯು ಪ್ರಾದೇಶಿಕ ಪಕ್ಷಗಳಿಗೆ ಮಾರಕವೆಂದು ಸಾಬೀತಾಗಿರುವುದರಿಂದ ಎನ್‌ಡಿಎ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ" ಎಂದು ಅವರು ಒತ್ತಿ ಹೇಳಿದರು.

ನರೇಂದ್ರ ಮೋದಿ, ಚಂದ್ರ ಬಾಬು ನಾಯ್ಡು ಮತ್ತು ನಿತೀಶ್ ಕುಮಾರ್
ಈ ಬಾರಿ RSS ಮೋದಿ ವಿರುದ್ಧ ಇದೆ- ಸಂಜಯ್ ರೌತ್; INDIA ಸೇರ್ತಾರ ಶಿಂಧೆ ಬಣದ 4 ಸಂಸದರು?

ಎನ್ ಡಿಎ ನಾಯಕರನ್ನು ತಲುಪಲು ಅಖಿಲೇಶ್ ಅವರನ್ನು ನಿಯೋಜಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ತಿವಾರಿ, “ಅಖಿಲೇಶ್ ಅವರು ಈಗಾಗಲೇ ನಿತೀಶ್ ಕುಮಾರ್ ಅಥವಾ ನಾಯ್ಡು ಅವರೊಂದಿಗೆ ಮಾತನಾಡಿದ್ದರೆ ನನಗೆ ಆಶ್ಚರ್ಯವಿಲ್ಲ. ಏಕೆಂದರೆ ಅವರು ಇಬ್ಬರೂ ನಾಯಕರೊಂದಿಗೆ ಸುದೀರ್ಘ ಒಡನಾಟವನ್ನು ಹೊಂದಿದ್ದಾರೆ. ನಾಯ್ಡು ಮತ್ತು ಡಿಎಂಕೆ ನಾಯಕ ಸ್ಟಾಲಿನ್ ನಡುವೆಯೂ ಸಭೆ ನಡೆದಿದೆ. ಸಾರ್ವಜನಿಕರ ಕಣ್ಣಿಗೆ ಕಾಣದ ಹೆಚ್ಚಿನ ಸಂವಾದಗಳು ನಡೆದಿವೆ'' ಎಂದು ಹೇಳಿದರು.

ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಈಗ ರಾಜಧಾನಿಯಲ್ಲಿ ಬೀಡುಬಿಟ್ಟಿರುವುದರಿಂದ ಹೆಚ್ಚಿನ ನಾಯಕರನ್ನು ಭೇಟಿಯಾಗಲಿದ್ದಾರೆ ಎಂದಿದ್ದಾರೆ.

"ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ನಿನ್ನೆ ಮಾತುಕತೆ ನಡೆಸಿದ್ದಾರೆ. ಈ ಸಭೆಯಿಂದ ಸ್ವಾಭಾವಿಕ ಫಲಿತಾಂಶವನ್ನು ನಾವು ನಿರೀಕ್ಷಿಸಬಾರದು. ಅನೇಕ ಸಂಗತಿಗಳು ನಡೆದಿವೆ. ಬಿಜೆಪಿಯಲ್ಲೂ ಭಿನ್ನಮತ ಉಂಟಾಗಲಿದೆ. ಯುಪಿ ಫಲಿತಾಂಶದ ನಂತರ ಬಿಜೆಪಿಯಲ್ಲಿ ಆಂತರಿಕ ತಿಕ್ಕಾಟ ಹೊರಬಂದಿದೆ ಎಂದು ಅವರು ಹೇಳಿದರು.

“ವಿವಿಧ ರೀತಿಯ ಸಭೆಗಳು ನಡೆಯುತ್ತಿರುವುದು ಒಳ್ಳೆಯದು. ನಾವು ವಿರೋಧ ಪಕ್ಷದಲ್ಲಿರಲಿ ಅಥವಾ ಸರ್ಕಾರ ರಚಿಸುವ ಹಂತವನ್ನು ತಲುಪಲಿ. ನಾವು ಬಲಶಾಲಿ ಮತ್ತು ಸ್ಥಿರವಾಗಿರುತ್ತೇವೆ. ನಾವು ಸರ್ಕಾರ ರಚನೆಗೆ ಧಾವಿಸಿದರೆ, ಅದನ್ನು ಅವಕಾಶವಾದಿ ಎಂದು ಗ್ರಹಿಸಲಾಗುತ್ತದೆ ಎಂದು ತಿವಾರಿ ಹೇಳಿದರು.

ಸ್ಥಿರ ಮತ್ತು ವಿಶ್ವಾಸಾರ್ಹ ಸರ್ಕಾರ ರಚನೆಗೆ ಸಾಕಷ್ಟು ಅಡಿಪಾಯ ಇರಬೇಕು. ಈ ವಾರದ ಆರಂಭದಲ್ಲಿ, ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಇಂಡಿಯಾ ಬ್ಲಾಕ್ ಹೇಳಿದೆ ಎಂದಿದ್ದಾರೆ.

ಏತನ್ಮಧ್ಯೆ TNIE ಯೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಅವರು, ಇಂಡಿಯಾ ಮೈತ್ರಿಕೂಟದ ಎಲ್ಲಾ ಪಾಲುದಾರರು ಒಂದೇ ಹಾದಿಯಲ್ಲಿದ್ದಾರೆ ಮತ್ತು ಸದಸ್ಯರ ನಡುವೆ ಸಂವಾದ ನಿರಂತರ ಪ್ರಕ್ರಿಯೆಯಾಗಿದೆ ಎಂದು ಹೇಳಿದ್ದಾರೆ.

ಇನ್ನು ಮೈತ್ರಿಕೂಟದ ಪಾಲುದಾರರೊಂದಿಗೆ ಪ್ರತ್ಯೇಕ ಸಭೆ ನಡೆಸುತ್ತಿರುವ ಟಿಎಂಸಿ, ಪಶ್ಚಿಮ ಬಂಗಾಳದ ಮೂವರು ಬಿಜೆಪಿ ಸಂಸದರೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ. ಆದರೆ, ಈ ಹೇಳಿಕೆಯನ್ನು ಬಿಜೆಪಿ ತಿರಸ್ಕರಿಸಿದೆ.

ಮೈತ್ರಿಕೂಟದ ಪಾಲುದಾರರೊಂದಿಗಿನ ಸಭೆಯ ನಂತರ, ಟಿಎಂಸಿ ನಾಯಕ ಡೆರೆಕ್ ಒ'ಬ್ರೇನ್ ಅವರು ನರೇಂದ್ರ ಮೋದಿ ಸರ್ಕಾರವನ್ನು ಜನ ತಿರಸ್ಕರಿಸಿದ್ದಾರೆ ಮತ್ತು ಇದು ಕೇವಲ ಆರಂಭ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com