
ನವದೆಹಲಿ: ಉದ್ಧವ್ ಠಾಕ್ರೆ ಅವರ ಶಿವಸೇನೆಯಿಂದ ಹೊಸದಾಗಿ ಆಯ್ಕೆಯಾದ ಇಬ್ಬರು ಲೋಕಸಭಾ ಸದಸ್ಯರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಶಿವಸೇನೆ ಶನಿವಾರ ಹೇಳಿದೆ.
ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವಸೇನಾ ವಕ್ತಾರ ನರೇಶ್ ಮಾಸ್ಕೆ, ಪಕ್ಷಾಂತರ ವಿರೋಧಿ ಕಾನೂನನ್ನು ಉಲ್ಲೇಖಿಸಿ ಇಬ್ಬರು ಲೋಕಸಭಾ ಸದಸ್ಯರನ್ನು ಹೆಸರಿಸಲು ನಿರಾಕರಿಸಿದರು. ಆದರೆ, ಇನ್ನೂ ನಾಲ್ವರು ಶಾಸಕರು ಸೇರಿದಂತೆ ಎಲ್ಲರೂ ಶೀಘ್ರದಲ್ಲೇ ಶಿಂಧೆ ನೇತೃತ್ವದ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.
'ಉದ್ಧವ್ ಠಾಕ್ರೆ ಅವರು ಬಸ್ಸುಗಳಲ್ಲಿ ಬಂದ ನಿರ್ದಿಷ್ಟ ಸಮುದಾಯದವರ ಬಳಿ ಮತಯಾಚಿಸಿದ ರೀತಿಗೆ ಲೋಕಸಭೆಯ ಇಬ್ಬರು ನೂತನ ಸದಸ್ಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ' ಎಂದು ಥಾಣೆಯಿಂದ ಹೊಸದಾಗಿ ಆಯ್ಕೆಯಾದ ಲೋಕಸಭಾ ಸದಸ್ಯರಾದ ಮ್ಹಾಸ್ಕೆ ಹೇಳಿದರು.
ಠಾಕ್ರೆ ಬಣದ ಇಬ್ಬರು ಲೋಕಸಭಾ ಸದಸ್ಯರು ಈಗಾಗಲೇ ನಮ್ಮ ಸಂಪರ್ಕದಲ್ಲಿದ್ದು, ಇನ್ನೂ ನಾಲ್ವರು ಅವರೊಂದಿಗೆ ಸೇರಿಕೊಂಡು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತಾರೆ ಎಂದರು.
ಏಕನಾಥ್ ಶಿಂಧೆ ಬಣದ ಶಾಸಕರು ಮತ್ತು ಸಂಸದರು ಉದ್ಧವ್ ಠಾಕ್ರೆ ಅವರ ಬಣಕ್ಕೆ ಮತ್ತೆ ಸೇರಲು ಉತ್ಸುಕರಾಗಿದ್ದಾರೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಹೇಳಿಕೆ ನೀಡಿದ ಬೆನ್ನಲ್ಲೇ ಮ್ಹಾಸ್ಕೆ ಅವರ ಹೇಳಿಕೆಗಳು ಬಂದಿವೆ.
ಶಿಂಧೆ ನೇತೃತ್ವದ ಶಿವಸೇನೆ ಏಳು ಲೋಕಸಭಾ ಸ್ಥಾನಗಳನ್ನು ಗೆದ್ದರೆ, ಠಾಕ್ರೆ ಬಣ ಒಂಬತ್ತು ಸ್ಥಾನಗಳನ್ನು ಗೆದ್ದಿದೆ.
Advertisement