ನವದೆಹಲಿ: ಮೋದಿ ಅವರು, ಮೊದಲ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಲು ಸಜ್ಜಾಗಿರುವಂತೆಯೇ, 'ಕ್ಯಾಬಿನೆಟ್ ಮಂತ್ರಿ ಯಾರಾಗುತ್ತಾರೆ ಎಂಬ ಊಹೆ' ಆಟ ನಡೆಯುತ್ತಿದೆ. ಎನ್‌ಡಿಎ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಭಾನುವಾರ ನಿಗದಿಯಾಗಿದೆ. ಉನ್ನತ ಖಾತೆಗಳ ಸುತ್ತ ಚರ್ಚೆ ನಡೆಯುತ್ತಿದೆ. ಗೃಹ, ಹಣಕಾಸು, ರಕ್ಷಣೆ, ವಿದೇಶಾಂಗ ವ್ಯವಹಾರಗಳು, ರಸ್ತೆ ಸಾರಿಗೆ, ರೈಲ್ವೆ, ಐಟಿ ಮತ್ತು ಶಿಕ್ಷಣದಂತಹ ಉನ್ನತ ಖಾತೆಗಳನ್ನು ಬಿಜೆಪಿಯೇ ಉಳಿಸಿಕೊಳ್ಳುವ ನಿರೀಕ್ಷೆಯಿದೆ.
ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಜೆಡಿಯು ಹಾಗೂ ಟಿಡಿಪಿ ರೈಲ್ವೆ, ಮಾಹಿತಿ ತಂತ್ರಜ್ಞಾನದಂತಹ ಖಾತೆಗಳಿಗೆ ಬೇಡಿಕೆ ಇಟ್ಟಿರುವುದಾಗಿ ಮಾತುಗಳು ಕೇಳಿಬರುತ್ತಿದೆ. ಆದರೆ, ಆ ಖಾತೆಗಳು ದಕ್ಕುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ.
ಜೆಡಿಯು 12 ಮತ್ತು ಟಿಡಿಪಿ 16 ಕ್ಷೇತ್ರಗಳಿಗಲ್ಲಿ ಗೆದ್ದಿದ್ದರೂ ಎರಡೂ ಪಕ್ಷಗಳಿಗೂ ಒಂದೇ ಸಂಖ್ಯೆಯ ಖಾತೆಗಳು ದೊರೆಯುವ ನಿರೀಕ್ಷೆಯಿದೆ. ಖಾತೆಗಳ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿಳಿಸಿದ್ದಾರೆ. ಕನಿಷ್ಠ 30 ಸದಸ್ಯರ ಬಲಿಷ್ಠ ಸಂಪುಟ ರಚನೆಯಾಗುವ ನಿರೀಕ್ಷೆಯಿದ್ದರೂ ಎಷ್ಟು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಬಗ್ಗೆ ಇನ್ನೂ ಯಾವುದೇ ಸೂಚನೆ ಸಿಕ್ಕಿಲ್ಲ.
ನೂತನ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸುವ ನಿಟ್ಟಿನಲ್ಲಿ ಹಲವು ಬಿಜೆಪಿ ನಾಯಕರು ದೇವರ ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ. ಮೋದಿ ಸರ್ಕಾರದ ಎರಡನೇ ಅವಧಿಯ ಹಲವು ಸಚಿವರನ್ನು ಕೈಬಿಡುವ ಬಗ್ಗೆಯೂ ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಚುನಾವಣಾ ಹಿನ್ನಡೆ ಅಥವಾ ಕಡಿಮೆ ಅಂತರದಲ್ಲಿ ಗೆದ್ದವರ ಬದಲಿಗೆ ಹೊಸ ಮುಖಗಳನ್ನು ಪರಿಚಯಿಸಲು ಬಿಜೆಪಿ ನಾಯಕತ್ವ ಸಜ್ಜಾಗಿದೆ ಎಂದು ಮೂಲಗಳು ಹೇಳುತ್ತವೆ. ಮುಂಬರುವ ಕ್ಯಾಬಿನೆಟ್ ಪ್ರಾದೇಶಿಕ, ಸಮುದಾಯಕ, ಆಡಳಿತಾತ್ಮಕ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಸಮತೋಲಿತ ಸಂಪುಟವಾಗಿದೆ ಎಂದು ಹೇಳಲಾಗುತ್ತದೆ.

Advertisement