
ಬೆಂಗಳೂರು: ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ಇತರ ಪ್ರವೇಶ ಪರೀಕ್ಷೆಗಳೊಂದಿಗೆ NEET UG ಪರೀಕ್ಷೆಗಳನ್ನು ನಡೆಸುತ್ತಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕಳೆದ ಎರಡು ದಿನಗಳಲ್ಲಿ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ.
ಪಾಲಕರು ಮತ್ತು ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶ ಪರೀಕ್ಷೆಯ ಮರುಪರೀಕ್ಷೆಗೆ ಒತ್ತಾಯಿಸುತ್ತಿದ್ದಾರೆ, 67 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಗಳಿಸುವ ಮೂಲಕ ಸ್ವಾಯತ್ತ ಪರೀಕ್ಷಾ ಸಂಸ್ಥೆಯ ಪಾವಿತ್ರ್ಯತೆಯನ್ನು ಪ್ರಶ್ನಿಸಿದ್ದಾರೆ. ಈ ವಿವಾದ ನಡುವೆ, ಮರುಪರೀಕ್ಷೆ ಎಷ್ಟು ಕಾರ್ಯಸಾಧ್ಯವಾಗಿದೆ, ದೇಶದ ಪ್ರಮುಖ ಪ್ರವೇಶ ಪರೀಕ್ಷಾ ಏಜೆನ್ಸಿಯ ಸಮಗ್ರತೆಯನ್ನು ಪುನಃಸ್ಥಾಪಿಸಲು NTA ಯಾವ ಕೋರ್ಸ್ ತಿದ್ದುಪಡಿಯನ್ನು ಮಾಡಬಹುದು ಎಂಬುದರ ಕುರಿತು ತಜ್ಞರು ಪರಾಮರ್ಶಿಸುತ್ತಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ಮಾಜಿ ಉಪಕುಲಪತಿ ಸಚ್ಚಿದಾನಂದ ಸರ್ವಜ್ಞಮೂರ್ತಿ ಆರಾಧ್ಯ TNIE ಪ್ರತಿನಿಧಿ ಜೊತೆ ಮಾತನಾಡಿ, NEET ನಲ್ಲಿ 720 ಅಂಕಗಳನ್ನು ಗಳಿಸುವುದು ಖಂಡಿತಾ ಕಷ್ಟವಿದೆ. ಅನೇಕ ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ಗಳಿಸುವುದು ಎಂದರೆ ಇದು ಆತಂಕದ ವಿಚಾರ ಎಂದರು, ಫಲಿತಾಂಶ ಘೋಷಣೆಯಲ್ಲಿ ತಪ್ಪು ಆಗಿರಬಹುದು ಎನ್ನುತ್ತಾರೆ. ಎನ್‌ಟಿಎ ಜಾಗರೂಕರಾಗಿರಬೇಕು, ಬಹುಶಃ ತಂತ್ರಜ್ಞಾನದ ಪರಿಕರಗಳನ್ನು ಕೇವಲ ಇನ್ವಿಜಿಲೇಷನ್‌ಗೆ ಮಾತ್ರವಲ್ಲದೆ ಫಲಿತಾಂಶ ಘೋಷಣೆಗೆ ಬಳಸಬಹುದು, ಇದರಿಂದಾಗಿ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಬಗೆಹರಿಸಲಬಹುದು ಎನ್ನುತ್ತಾರೆ.
24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸುವುದು ಕಷ್ಟಕರ ವಿಚಾರ. ಶೈಕ್ಷಣಿಕ ಅವಧಿ ಎರಡು ತಿಂಗಳು ವಿಳಂಬವಾಗುತ್ತದೆ. ಖರ್ಚುವೆಚ್ಚದ ಅಂಶವನ್ನು ಹೊರತುಪಡಿಸಿ ಎಲ್ಲಾ ಸಂಬಂಧಪಟ್ಟವರ ಮೇಲೆ ಪರಿಣಾಮ ಬೀರುತ್ತದೆ. ಕರ್ನಾಟಕದಿಂದ ಪರೀಕ್ಷೆಯಲ್ಲಿ ತೇರ್ಗಡೆಯಾದ ಸುಮಾರು 89,000 ವಿದ್ಯಾರ್ಥಿಗಳನ್ನು ಹೊಂದಿದ್ದೇವೆ. ದೆಹಲಿಯ ಏಮ್ಸ್‌ಗೆ ಸೇರಲು ನಿರೀಕ್ಷಿಸುತ್ತಿರುವ ಸಾಮಾನ್ಯ ಮೆರಿಟ್ ಶ್ರೇಣಿಯ ವಿದ್ಯಾರ್ಥಿಗಳಿಗೆ ಈಗ ಕಷ್ಟವಾಗುತ್ತದೆ. ಅಲ್ಲದೆ, ರಾಜ್ಯದಲ್ಲಿ ಉನ್ನತ ರ್ಯಾಂಕ್ ಗಳಿಸಿದ ಬೆಂಗಳೂರು ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಇದು ಹೇಗೆ ಪರಿಣಾಮ ಬೀರುತ್ತದೆ ಎಂಬುದು ನಮಗೆ ತಿಳಿದಿಲ್ಲ. ಎನ್‌ಟಿಎ ಈ ವಿವಾದದ ಬಗ್ಗೆ ಹೆಚ್ಚಿನ ಸ್ಪಷ್ಟತೆ ಕೊಡಬೇಕು. ಆತಂಕದಲ್ಲಿರುವ ಪೋಷಕರು ಮತ್ತು ವಿದ್ಯಾರ್ಥಿಗಳ ಆತಂಕ ದೂರ ಮಾಡಬೇಕಿದೆ ಎಂದು ಬೇಸ್‌ನ ಸಿಇಒ ಅನಂತ ಕುಲಕರ್ಣಿ ಹೇಳುತ್ತಾರೆ.
Advertisement