
ಸುಂದರ್‌ಗಢ್: ಒಡಿಶಾದ ಸುಂದರ್‌ಗಢ್ ಜಿಲ್ಲೆಯ ಬ್ರಹ್ಮಣಿ ನದಿಯಲ್ಲಿ ಶನಿವಾರ ಸ್ನಾನ ಮಾಡುತ್ತಿದ್ದ ವೇಳೆ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ವಿದ್ಯಾರ್ಥಿಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಮಹಿಳೆಯರು ಸೇರಿದಂತೆ ಆರು ವಿದ್ಯಾರ್ಥಿಗಳು ಬೇಸಿಗೆ ಇಂಟರ್ನ್‌ಶಿಪ್ ಗಾಗಿ ರೂರ್ಕೆಲಾದ ಎನ್‌ಐಟಿಗೆ ಬಂದಿದ್ದರು ಮತ್ತು ನದಿಯಲ್ಲಿ ಸ್ನಾನ ಮಾಡಲು ವೇದವ್ಯಾಸ್ ಘಾಟ್‌ಗೆ ತೆರಳಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೃತರನ್ನು ಸಂಬಲ್‌ಪುರ ಮಾಹಿತಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ರಜತ್ ಸಾಹು ಹಾಗೂ ಸಮೀರನ್ ಸುಕುಮಾರ್ ನಾಯಕ್ ಎಂದು ಗುರುತಿಸಲಾಗಿದೆ.
ಸಾಹು ಬಾಲಸೋರ್‌ನಿಂದ ಬಂದಿದ್ದರೆ, ನಾಯಕ್ ಪಾಟಿಯಾದ ರಘುನಾಥಪುರದಿಂದ ಬಂದಿದ್ದರು ಮತ್ತು ರಜತ್ ಸಾಹು ಮೇ ತಿಂಗಳಿನಿಂದ ಇಲ್ಲಿಯೇ ಇದ್ದರು ಮತ್ತು ಜುಲೈ ವರೆಗೆ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್‌ನಲ್ಲಿ ಇಂಟರ್ನ್‌ಶಿಪ್ ಮಾಡಬೇಕಿತ್ತು. ಸಮೀರನ್ ಅವರು ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಒಂದು ತಿಂಗಳ ಇಂಟರ್ನ್‌ಶಿಪ್ ಗಾಗಿ ಬಂದಿದ್ದರು.
ಇನ್ನು ರಕ್ಷಿಸಲ್ಪಟ್ಟ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರು ರೂರ್ಕೆಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement