ಪ್ರಧಾನಿ ಮೋದಿ ಚಹಾಕೂಟ
ಪ್ರಧಾನಿ ಮೋದಿ ಚಹಾಕೂಟ

NDA ನಾಯಕರಿಗೆ ಮೋದಿ ಚಹಾಕೂಟ; ಸಂಭವನೀಯ ಸಚಿವರ ಪಟ್ಟಿ!

Published on

ನವದೆಹಲಿ: ನರೇಂದ್ರ ಮೋದಿ ಅವರು ಇಂದು ಸಂಜೆ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಇಲ್ಲಿನ ತಮ್ಮ ನಿವಾಸದಲ್ಲಿ ಎನ್ ಡಿಎ ನಾಯಕರಿಗೆ ಚಹಾಕೂಟ ಆಯೋಜಿಸಿದರು.

ಅಮಿತ್ ಶಾ, ಜೆ. ಪಿ. ನಡ್ಡಾ. ಬಿಎಲ್ ವರ್ಮಾ, ಪಂಕಜ್ ಚೌಧರಿ, ಶಿವರಾಜ್ ಸಿಂಗ್ ಚೌಹಾಣ್, ಅನ್ನಪೂರ್ಣ ದೇವಿ, ಅರ್ಜುನ್ ರಾಮ್ ಪಾಲ್, ಹೆಚ್ ಡಿ ಕುಮಾರಸ್ವಾಮಿ. ವಿ. ಸೋಮಣ್ಣ ಮತ್ತಿತರರು ಪಾಲ್ಗೊಂಡರು.

ಪ್ರಧಾನಿ ಮೋದಿ ಚಹಾಕೂಟ
ಇಂದು 3ನೇ ಬಾರಿಗೆ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ, ಮಹಾತ್ಮ ಗಾಂಧಿ, ವಾಜಪೇಯಿ ಸಮಾಧಿಗೆ ಗೌರವ

ನಿತಿನ್ ಗಡ್ಕರಿ, ಪಿಯೂಷ್ ಗೋಯೆಲ್, ರಾಜನಾಥ್ ಸಿಂಗ್,ಜ್ಯೋತಿರಾಧಿತ್ಯ ಸಿಂಧಿಯಾ, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ, ವಿ. ಸೋಮಣ್ಣ ಮತ್ತಿತರರ ನಾಯಕರು ನೂತನ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, 2047ರ ವೇಳೆಗೆ ಭಾರತ ವಿಕಾಸದ ಕನಸು ನನಸು ಆಗಬೇಕು. ಬಾಕಿ ಯೋಜನೆಗಳನ್ನು ಅನುಷ್ಠಾನವಾಗಬೇಕು. ಎನ್ ಡಿಎ ಮೇಲೆ ಜನರಿಗೆ ಹೆಚ್ಚಿನ ವಿಶ್ವಾಸ ಬಂದಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಚಹಾಕೂಟ
ಮೋದಿ 3.0 ಸಂಪುಟದಲ್ಲಿ ಕುಮಾರಸ್ವಾಮಿಗೆ ಸಚಿವ ಸ್ಥಾನ ಖಚಿತ: ಕೋಲಾರ ಸಂಸದ ಮಲ್ಲೇಶ್ ಬಾಬು ವಿಶ್ವಾಸ

ಸಂಭವನೀಯ ಸಚಿವರ ಪಟ್ಟಿ ಇಂತಿದೆ:

* ನಿತಿನ್ ಗಡ್ಕರಿ

* ರಾಜನಾಥ್ ಸಿಂಗ್

* ಪಿಯೂಷ್ ಗೋಯೆಲ್

* ಜ್ಯೋತಿರಾಧಿತ್ಯ ಸಿಂಧಿಯಾ

* ಕಿರಣ್ ರಿಜಿಜು

* ಹೆಚ್ ಡಿ ಕುಮಾರಸ್ವಾಮಿ

* ಚಿರಾಗ್ ಪಾಸ್ವನ್

* ರಾಮ್ ನಾಥ್ ಠಾಕೂರ್

* ಜಿತಿನ್ ರಾಮ್ ಮಾಂಝಿ

* ಜಯಂತ್ ಚೌಧರಿ

* ಅನುಪ್ರಿಯಾ ಪಾಟೀಲ್

* ರಾಮ್ ಮೋಹನ್ ಪಾಟೀಲ್

* ರಾಮ್ ಮೋಹನ್ ನಾಯ್ಡು

* ಚಂದ್ರ ಶೇಖರ್ ಪೆಮ್ಮಾಸಾನಿ

* ಪ್ರತಾಪ್ ರಾವ್ ಜಾಧವ್

* ಸರ್ಬಾನಂದ್ ಸೊನೊವಾಲ್

* ಜೆಪಿ ನಡ್ಡಾ

* ಶ್ರೀನಿವಾಸ್ ವರ್ಮಾ

* ರವನೀತ್ ಸಿಂಗ್ ಬಿಟ್ಟು

* ವಿ. ಸೋಮಣ್ಣ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com