ಶಾರುಖ್ ಖಾನ್, ಅನಿಲ್ ಕಪೂರ್ ಸೇರಿದಂತೆ ಹಲವು ನಟರು ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿ

ನರೇಂದ್ರ ಮೋದಿ ಅವರು ಭಾನುವಾರ ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಮಾರಂಭದಲ್ಲಿ ಶಾರುಖ್ ಖಾನ್
ಸಮಾರಂಭದಲ್ಲಿ ಶಾರುಖ್ ಖಾನ್
Updated on

ನವದೆಹಲಿ: ನರೇಂದ್ರ ಮೋದಿ ಅವರು ಭಾನುವಾರ ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇಂದು ರಾತ್ರಿ 7:15ಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭಕ್ಕೆ ಬಾಲಿವುಡ್ ನಟರಾದ ಶಾರುಖ್ ಖಾನ್ ಹಾಗೂ ಅನಿಲ್ ಕಪೂರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಮತ್ತು ಗಣ್ಯರು ಸಾಕ್ಷಿಯಾದರು.

ಶಾರುಖ್ ಖಾನ್ ತಮ್ಮ ಮ್ಯಾನೇಜರ್ ಪೂಜಾ ದದ್ಲಾನಿ ಅವರೊಂದಿಗೆ ಭಾನುವಾರ ರಾಷ್ಟ್ರಪತಿ ಭವನಕ್ಕೆ ಆಗಮಿಸಿದರು. ಪ್ರಧಾನಿ ಮೋದಿಯವರ ಪ್ರಮಾಣವಚನ ಸಮಾರಂಭಕ್ಕೆ ಶಾರುಖ್ ಖಾನ್ ಕಪ್ಪು ಸೂಟ್-ಪ್ಯಾಂಟ್ ಧರಿಸಿ ಆಗಮಿಸಿದ್ದರು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಾಲಿವುಡ್ ನಟ ಶಾರುಖ್ ಕಾಣಿಸಿಕೊಂಡಿದ್ದು ಇದೇ ಮೊದಲು. ಅವರು ಉದ್ಯಮಿ ಮುಕೇಶ್ ಅಂಬಾನಿ ಪಕ್ಕದಲ್ಲಿ ಕುಳಿತಿದ್ದರು.

ಸಮಾರಂಭದಲ್ಲಿ ಶಾರುಖ್ ಖಾನ್
ಮೋದಿ ಪ್ರಮಾಣ ವಚನ ಸ್ವೀಕಾರ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗಿ; ಜೆಡಿಎಸ್ ವರಿಷ್ಠ ದೇವೇಗೌಡ ಗೈರು

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವ ಇತರ ಸೆಲೆಬ್ರಿಟಿಗಳಲ್ಲಿ ಅನಿಲ್ ಕಪೂರ್, ಅನುಪಮ್ ಖೇರ್ ಮತ್ತು ಕೈಲಾಶ್ ಖೇರ್ ಸೇರಿದ್ದಾರೆ.

ಮುಕೇಶ್ ಅಂಬಾನಿ ಅವರಲ್ಲದೆ, ಅನಂತ್ ಅಂಬಾನಿ, ಆನಂದ್ ಪಿರಾಮಲ್, ಗೌತಮ್ ಅದಾನಿ ಅವರ ಪತ್ನಿ ಪ್ರೀತಿ ಅದಾನಿ ಹಾಗೂ ಸಹೋದರ ರಾಜೇಶ್ ಅದಾನಿ ಸೇರಿದಂತೆ ಉದ್ಯಮ ವಲಯದ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಏತನ್ಮಧ್ಯೆ, ಹಿಮಾಚಲ ಪ್ರದೇಶದ ಮಂಡಿ ಬಿಜೆಪಿ ಸಂಸದೆ ಕಂಗನಾ ರನೌತ್ ಕೂಡ ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕಾಣಿಸಿಕೊಂಡರು.

ಮೊನ್ನೆಯಷ್ಟೇ ತಮಿಳು ಮೆಗಾಸ್ಟಾರ್ ರಜನಿಕಾಂತ್ ಅವರು ಚೆನ್ನೈನಲ್ಲಿರುವ ತಮ್ಮ ನಿವಾಸದಿಂದ ದೆಹಲಿಗೆ ಹೊರಟಿದ್ದು ಕಂಡುಬಂದಿತ್ತು.

"ನಾನು ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದೇನೆ... ಇದು ಅತ್ಯಂತ ಐತಿಹಾಸಿಕ ಘಟನೆ... ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡಿರುವುದು ನರೇಂದ್ರ ಮೋದಿಯವರ ದೊಡ್ಡ ಸಾಧನೆಯಾಗಿದೆ. ಅವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಜನರು ದೃಢವಾದ ಪ್ರತಿಪಕ್ಷವನ್ನು ಆಯ್ಕೆ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ಆರೋಗ್ಯಕರ ಸಂಕೇತ" ರಜನಿಕಾಂತ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com