ವಾಯುವ್ಯ, ಪೂರ್ವ ಭಾರತಕ್ಕೆ ಮತ್ತೊಂದು Heat Wave ಆಘಾತ; ಮುಂದಿನ 5 ದಿನ ತಾಪಮಾನ ತೀವ್ರ ಏರಿಕೆ ಸಾಧ್ಯತೆ!

ಈ ಹಿಂದೆ ಉತ್ತರ ಭಾರತವನ್ನು ತತ್ತರಿಸುವಂತೆ ಮಾಡಿದ್ದ ಹೀಟ್ ವೇವ್ ಇದೀಗ ವಾಯುವ್ಯ, ಪೂರ್ವ ಭಾರತಕ್ಕೂ ಆಘಾಚ ನೀಡಿದ್ದು, ಮುಂದಿನ 5 ದಿನಗಳ ಕಾಲ ತಾಪಮಾನ ತೀವ್ರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
heat wave in india
ಹೀಟ್ ವೇವ್ ಆಘಾತ
Updated on

ನವದೆಹಲಿ: ಈ ಹಿಂದೆ ಉತ್ತರ ಭಾರತವನ್ನು ತತ್ತರಿಸುವಂತೆ ಮಾಡಿದ್ದ ಹೀಟ್ ವೇವ್ ಇದೀಗ ವಾಯುವ್ಯ, ಪೂರ್ವ ಭಾರತಕ್ಕೂ ಆಘಾಚ ನೀಡಿದ್ದು, ಮುಂದಿನ 5 ದಿನಗಳ ಕಾಲ ತಾಪಮಾನ ತೀವ್ರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ವಾಯುವ್ಯ ಮತ್ತು ಪೂರ್ವ ಭಾರತದಲ್ಲಿ ತೀವ್ರತರವಾದ ಉಷ್ಣ ಅಲೆ ಬೀಸುತ್ತಿದ್ದು, ಮುಂದಿನ ಐದು ದಿನಗಳಲ್ಲಿ ತಾಪಮಾನವು ಎರಡರಿಂದ ಮೂರು ಡಿಗ್ರಿಗಳಷ್ಟು ಹೆಚ್ಚಾಗುತ್ತದೆ. ಉತ್ತರ ಪ್ರದೇಶ, ಬಿಹಾರ ಮತ್ತು ಒಡಿಶಾ ಸೇರಿದಂತೆ ಹಲವು ರಾಜ್ಯಗಳು ಉಷ್ಣ ಅಲೆ ತತ್ತರಿಸಿದ್ದು, ಇಲ್ಲಿ ಹೀಟ್ ವೇವ್ ಗೆ ಸಾಕಷ್ಟು ಸಾವುಗಳು ಸಂಭವಿಸಿದೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಭಾರತವು ಅನೇಕ ತೀವ್ರವಾದ ಮತ್ತು ದೀರ್ಘಕಾಲದ ಶಾಖದ ಅಲೆಗಳನ್ನು ಅನುಭವಿಸಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ.

heat wave in india
ಆರೋಗ್ಯ ಬಗ್ಗೆ ಇರಲಿ ಎಚ್ಚರ: ರಾಜ್ಯದಲ್ಲಿ 569 ಉಷ್ಣ ಸಂಬಂಧಿ ಕಾಯಿಲೆ, ಒಂದು ಹೀಟ್ ಸ್ಟ್ರೋಕ್ ಪ್ರಕರಣ ದಾಖಲು!

"ಮುಂದಿನ ಐದು ದಿನಗಳಲ್ಲಿ ವಾಯುವ್ಯ ಮತ್ತು ಪೂರ್ವ ಭಾರತದಲ್ಲಿ ಉಷ್ಣ ಅಲೆಯಿಂದ ತಾಪಮಾನ ಏರಿಕೆಯಾಗಬಹುದು. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ ಮತ್ತು ಗಂಗಾನದಿ ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಬಿಸಿಗಾಳಿ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com