
ನವದೆಹಲಿ: ಮೂರನೇ ಮೋದಿ ಸರ್ಕಾರದ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದರಿಂದ ಬಿಜೆಪಿಯ ಮುಂದಿನ ಅಧ್ಯಕ್ಷರು ಯಾರಾಗುತ್ತಾರೆ ಎಂಬುದರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.
ನಡ್ಡಾ ಅವರಲ್ಲದೆ, ಭೂಪೇಂದರ್ ಯಾದವ್, ಶಿವರಾಜ್ ಸಿಂಗ್ ಚೌಹಾಣ್ ಮತ್ತು ಧರ್ಮೇಂದ್ರ ಪ್ರಧಾನ್ ಸೇರಿದಂತೆ ಹಲವಾರು ಹಿರಿಯ ನಾಯಕರು ಕೂಡ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಬಿಜೆಪಿಯನ್ನು ಮುನ್ನಡೆಸಲು ಹೊಸಬರಿಗೆ ದಾರಿ ಮಾಡಿಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯದ ಕೆಲವು ಮಾಜಿ ಸಚಿವರು ಕೂಡ ಬಿಜೆಪಿ ಪಕ್ಷದ ಉನ್ನತ ಹುದ್ದೆ ಹಿಡಿಯುವ ನಿರೀಕ್ಷೆಯಿದೆ.
ನಡ್ಡಾ ಅವರು 2020 ರ ಜನವರಿಯಲ್ಲಿ ಪಕ್ಷದ ಅಧ್ಯಕ್ಷರಾಗುವ ಮೂಲಕ ಅಮಿತ್ ಶಾ ಅವರನ್ನು ಬದಲಾಯಿಸಲಾಗಿತ್ತು. ಆದರೆ ಹಿಂದೆ ಪಕ್ಷವನ್ನು ಮುನ್ನಡೆಸಿದ ಇತರ ಮಂತ್ರಿಗಳಲ್ಲಿ ನಿತಿನ್ ಗಡ್ಕರಿ ಮತ್ತು ರಾಜನಾಥ್ ಸಿಂಗ್ ಸೇರಿದ್ದಾರೆ. ಬಿಜೆಪಿ ಮುಖ್ಯಸ್ಥರಾಗಿ ನಡ್ಡಾ ಅವರ ವಿಸ್ತೃತ ಅವಧಿ ಈ ತಿಂಗಳಿಗೆ ಕೊನೆಗೊಳ್ಳಲಿದೆ.
Advertisement