Video: ಮೆಟ್ರೋ, ವಿಮಾನ ಆಯ್ತು.. ಈಗ ರೈಲಿನಲ್ಲೂ ಜೋಡಿಯ ಅಶ್ಲೀಲ ವರ್ತನೆ, ಸಹ ಪ್ರಯಾಣಿಕರ ಆಕ್ರೋಶ!

ಚಲಿಸುತ್ತಿರುವ ರೈಲಿನಲ್ಲಿ ಯುವ ಜೋಡಿಯೊಂದು ಅಶ್ಲೀಲವಾಗಿ ವರ್ತಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
Couple's PDA on Trains Sleeper Coach
ರೈಲಿನಲ್ಲಿ ಯುವ ಜೋಡಿಯ ಅಸಭ್ಯ ವರ್ತನೆ
Updated on

ನವದೆಹಲಿ: ಚಲಿಸುತ್ತಿರುವ ರೈಲಿನಲ್ಲಿ ಯುವ ಜೋಡಿಯೊಂದು ಅಶ್ಲೀಲವಾಗಿ ವರ್ತಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ಇತ್ತೀಚಿನ ದಿನಗಳಲ್ಲಿ ಮೆಟ್ರೋ, ವಿಮಾನ, ಸಾರ್ವಜನಿಕ ಪಾರ್ಕ್ ಗಳಲ್ಲಿ ಪ್ರೇಮಿಗಳ ಅತಿರೇಕದ ವರ್ತನೆ ಸಾಮಾನ್ಯವಾಗಿತ್ತು. ಆದರೆ ಇದೀಗ ಲಕ್ಷಾಂತರ ಜನರು ಪ್ರಯಾಣಿಸುವ ರೈಲಿನಲ್ಲೂ ಯುವಜೋಡಿಯೊಂದು ಅಸಭ್ಯವಾಗಿ ವರ್ತಿಸಿ ಸಹ ಪ್ರಯಾಣಿಕರ ಆಕ್ರೋಶಕ್ಕೆ ತುತ್ತಾಗಿದೆ.

ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಜೋಡಿಯೊಂದು ಸಣ್ಣ ಮಕ್ಕಳ ಎದುರೇ ರೈಲಿನಲ್ಲಿ ಮುದ್ದಾಡುತ್ತಾ ಸಾಗಿರುವುದು ವೈರಲ್ ಆಗಿದೆ.

Couple's PDA on Trains Sleeper Coach
Romance in Metro train: ಬೆಂಗಳೂರು ಮೆಟ್ರೋ ರೈಲಿನಲ್ಲಿ ಯುವಕ-ಯವತಿಯ ಅಸಭ್ಯ ವರ್ತನೆ, ಸಹ ಪ್ರಯಾಣಿಕರ ಆಕ್ರೋಶ

ಸ್ಲೀಪರ್ ಕೋಚ್‌ನಲ್ಲಿ ದಂಪತಿ ಮುದ್ದಾಡುತ್ತಿದ್ದಾಗ ರೈಲಿನ ಟಿಕೇಟ್ ಪರೀಕ್ಷಿಸಲು ಪರೀಕ್ಷಕರು ಅಲ್ಲಿಗೆ ಬಂದಿದ್ದಾರೆ. ಅವರೊಂದಿಗೆ ಮಾತನಾಡುತ್ತಿದ್ದರೂ ದಂಪತಿ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಎಲ್ಲರ ಉಪಸ್ಥಿತಿಯಲ್ಲಿಯೂ ಪರಸ್ಪರ ಮುದ್ದಾಡುತ್ತಿದ್ದರು. ಇದು ಮಕ್ಕಳು ಸೇರಿದಂತೆ ಇತರ ಪ್ರಯಾಣಿಕರಿಗೂ ಮುಜುಗರ ಉಂಟು ಮಾಡುವಂತಿತ್ತು. ಈ ವಿಡಿಯೋ ಯಾವಾಗ ಮತ್ತು ಎಲ್ಲಿ ತೆಗೆದಿರುವುದೆಂದು ತಿಳಿದು ಬಂದಿಲ್ಲ. ಈ ಕುರಿತು ಸಾಕಷ್ಟು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೈರಲ್ ವಿಡಿಯೋವನ್ನು 2.6 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಮೆಟ್ರೋದಲ್ಲಿ, ಬೈಕ್ ನಲ್ಲಿ ಅಸಭ್ಯವಾಗಿ ವರ್ತಿಸುತ್ತಿರುವ ಜೋಡಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು. ಏಪ್ರಿಲ್‌ನಲ್ಲಿ ವಿಮಾನದಲ್ಲಿ ಜೋಡಿಯೊಂದು ಆಸನದಲ್ಲಿ ಕುಳಿತು ಮುದ್ದಾಡಿದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಮಾನ ಹಾರಾಟದ 4 ಗಂಟೆಗಳ ಕಾಲ ಜೋಡಿಯು ಆಲಿಂಗನದಲ್ಲಿದ್ದು ಸಾಕಷ್ಟು ನೆಟ್ಟಿಗರ ಟೀಕೆಗೆ ಗುರಿಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com