ನಮ್ಮನ್ನು ಕ್ಷಮಿಸಿ': ಕುವೈತ್ ಅಗ್ನಿ ದುರಂತಕ್ಕೆ NBTC ಗ್ರೂಪ್ ಮಾಲೀಕರಿಂದ ಕ್ಷಮೆ ಯಾಚನೆ, ಜನದಟ್ಟಣೆ ವರದಿ ನಿರಾಕರಣೆ

ಕುವೈತ್‌ನಲ್ಲಿನ ಆರು ಅಂತಸ್ತಿನ ಕಟ್ಟಡದಲ್ಲಿ ಇತ್ತೀಚಿಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ 42 ಭಾರತೀಯರು ಸೇರಿದಂತೆ 49 ಕಾರ್ಮಿಕರು ಸಾವನ್ನಪ್ಪಿದ ನಂತರ ಬಹು-ಶತಕೋಟಿ ಡಾಲರ್ ಮೊತ್ತದ ಎನ್‌ಬಿಟಿಸಿ ಗ್ರೂಪ್‌ನ ಸಂಸ್ಥಾಪಕ ಕೆ ಜಿ ಅಬ್ರಹಾಂ ಅವರು ಶನಿವಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಎನ್‌ಬಿಟಿಸಿ ಗ್ರೂಪ್‌ನ ಸಂಸ್ಥಾಪಕ ಕೆ ಜಿ ಅಬ್ರಹಾಂ
ಎನ್‌ಬಿಟಿಸಿ ಗ್ರೂಪ್‌ನ ಸಂಸ್ಥಾಪಕ ಕೆ ಜಿ ಅಬ್ರಹಾಂ
Updated on

ಕೊಚ್ಚಿ: ಕುವೈತ್‌ನಲ್ಲಿನ ಆರು ಅಂತಸ್ತಿನ ಕಟ್ಟಡದಲ್ಲಿ ಇತ್ತೀಚಿಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ 42 ಭಾರತೀಯರು ಸೇರಿದಂತೆ 49 ಕಾರ್ಮಿಕರು ಸಾವನ್ನಪ್ಪಿದ ನಂತರ ಬಹು-ಶತಕೋಟಿ ಡಾಲರ್ ಮೊತ್ತದ ಎನ್‌ಬಿಟಿಸಿ ಗ್ರೂಪ್‌ನ ಸಂಸ್ಥಾಪಕ ಕೆ ಜಿ ಅಬ್ರಹಾಂ ಅವರು ಶನಿವಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಆದರೆ ಅಪಾರ್ಟ್‌ಮೆಂಟ್‌ಗಳಲ್ಲಿ ಜನದಟ್ಟಣೆ ಅಥವಾ ಕಟ್ಟಡ ಪರವಾನಗಿಗಳಲ್ಲಿ ಅಕ್ರಮ ಇರಲಿಲ್ಲ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಮ್ಮನ್ನು ಕ್ಷಮಿಸಿ. ನಾನು ದುರಂತದ ಬಗ್ಗೆ ತಿಳಿದಾಗ ಮನೆಯಲ್ಲಿ ಅಳುತ್ತಿದ್ದೆ. ಇವರು ನಮ್ಮ ಜನರು. ಅವರು ನಮ್ಮ ಕುಟುಂಬಗಳಂತೆ. ಅವರ ಕೆಲವು ಕುಟುಂಬಗಳು 25-27 ವರ್ಷಗಳಿಂದ ನಮ್ಮೊಂದಿಗೆ ಕೆಲಸ ಮಾಡಿದ್ದಾರೆ" ಎಂದು ಅಬ್ರಹಾಂ ಹೇಳಿದರು.

"ನಾವು ಯಾವುದೇ ತಪ್ಪು ಮಾಡಿಲ್ಲ, ನಮ್ಮ ತಪ್ಪಿನಿಂದ ಏನು ಸಂಭವಿಸಿಲ್ಲ ಎಂದು ನಾವು ನಂಬುತ್ತೇವೆ. ಆದರೆ, ಇನ್ನೂ, ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಇದು ನಮ್ಮ ಜವಾಬ್ದಾರಿಯಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅವರು ನಮ್ಮೊಂದಿಗೆ ಕೆಲಸ ಮಾಡುತ್ತಿದ್ದರು, ಅವರು ನಮ್ಮ ಕಂಪನಿಯನ್ನು ಬೆಳೆಸಿದ್ದರು. ಅವರು ನಮ್ಮ ಕುಟುಂಬ ಎಂದರು.

ಎನ್‌ಬಿಟಿಸಿ ಗ್ರೂಪ್‌ನ ಸಂಸ್ಥಾಪಕ ಕೆ ಜಿ ಅಬ್ರಹಾಂ
ಕುವೈತ್ ಅಗ್ನಿ ದುರಂತ: ಕೊಚ್ಚಿ ವಿಮಾನ ನಿಲ್ದಾಣಕ್ಕೆ 45 ಭಾರತೀಯರ ಮೃತದೇಹ ಆಗಮನ; ಕುಟುಂಬಸ್ಥರು, ಗಣ್ಯರಿಂದ ಭಾವಪೂರ್ಣ ಕಂಬನಿ

1977 ರಲ್ಲಿ NBTC ಗ್ರೂಪ್ ಸ್ಥಾಪಿಸಿದ ಅಬ್ರಹಾಂ ಅವರು ಜನದಟ್ಟಣೆ ವರದಿಗಳನ್ನು ನಿರಾಕರಿಸಿದರು. ಆರು ಅಂತಸ್ತಿನ ಕಟ್ಟಡವು ಒಟ್ಟು 24 ಅಪಾರ್ಟ್ ಮೆಂಟ್ ಗಳನ್ನು ಹೊಂದಿದೆ. ಪ್ರತಿ ಅಪಾರ್ಟ್ಮೆಂಟ್ ಮೂರು ಕೊಠಡಿಗಳನ್ನು ಹೊಂದಿದೆ. ವ್ಯವಸ್ಥಾಪಕರು ಒಂದು ಕೊಠಡಿಯಲ್ಲಿ, ಇಬ್ಬರು ಎಂಜಿನಿಯರ್‌ಗಳು ಒಂದು ಕೊಠಡಿಯಲ್ಲಿರುತ್ತಾರೆ. "ಅಂತರರಾಷ್ಟ್ರೀಯ ಕಾನೂನು ನಮಗೆ ಒಂದು ಕೊಠಡಿಗೆ ನಾಲ್ಕು ವ್ಯಕ್ತಿಗಳಿಗೆ ಅಥವಾ ನಾಲ್ಕು ಘನ ಮೀಟರ್ ಗೆ ಒಬ್ಬ ವ್ಯಕ್ತಿಗೆ ವಸತಿ ಒದಗಿಸಲು ಅವಕಾಶ ನೀಡುತ್ತದೆ. ನಮ್ಮ ಹಲವು ಕೊಠಡಿಗಳಲ್ಲಿ ಮೂರು ಜನರು ಕೂಡ ಇರಲಿಲ್ಲ ಎಂದು 70 ವರ್ಷದ ಉದ್ಯಮಿ ಹೇಳಿದರು.

ಲಭ್ಯವಿರುವ ಮಾಹಿತಿಯ ಪ್ರಕಾರ, ಕಟ್ಟಡದ ಭದ್ರತಾ ಕ್ಯಾಬಿನ್‌ನಿಂದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com