ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಕೃತ್ಯಗಳು 'ಪ್ರಾಕ್ಸಿ ವಾರ್' ಗೆ ಕುಸಿತ: ಬೇರು ಸಮೇತ ಕಿತ್ತೊಗೆಯಲು ಸರ್ಕಾರ ನಿರ್ಧಾರ- ಅಮಿತ್ ಶಾ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟವು ನಿರ್ಣಾಯಕ ಹಂತದಲ್ಲಿದೆ. ಹೆಚ್ಚು ಸಂಘಟಿತ ಹಿಂಸಾಚಾರದಿಂದ ನಡೆಯುತ್ತಿದ್ದ ಭಯೋತ್ಪಾದನಾ ಕೃತ್ಯಗಳು ಕೇವಲ ಪ್ರಾಕ್ಸಿ ವಾರ್ ಗೆ (ಪರೋಕ್ಷ ಯುದ್ಧ) ಕುಗ್ಗುವಂತೆ ಮಾಡಿರುವುದನ್ನು ಇತ್ತೀಚಿನ ಭಯೋತ್ಪಾದನಾ ಕೃತ್ಯಗಳು ತೋರಿಸಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರ
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟವು ನಿರ್ಣಾಯಕ ಹಂತದಲ್ಲಿದೆ. ಹೆಚ್ಚು ಸಂಘಟಿತ ಹಿಂಸಾಚಾರದಿಂದ ನಡೆಯುತ್ತಿದ್ದ ಭಯೋತ್ಪಾದನಾ ಕೃತ್ಯಗಳು ಕೇವಲ ಪ್ರಾಕ್ಸಿ ವಾರ್ ಗೆ (ಪರೋಕ್ಷ ಯುದ್ಧ) ಕುಗ್ಗುವಂತೆ ಮಾಡಿರುವುದನ್ನು ಇತ್ತೀಚಿನ ಭಯೋತ್ಪಾದನಾ ಕೃತ್ಯಗಳು ತೋರಿಸಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರ

ಕೇಂದ್ರಾಡಳಿತ ಪ್ರದೇಶದಲ್ಲಿ ಇತ್ತೀಚಿನ ಉಗ್ರರ ದಾಳಿ ಹಿನ್ನೆಲೆಯಲ್ಲಿ ಭದ್ರತಾ ಪರಿಸ್ಥಿತಿ ಪರಿಶೀಲಿಸಲು ಇಲ್ಲಿನ ನಾರ್ತ್ ಬ್ಲಾಕ್‌ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ಮಾಡಿದಂತೆ ಜಮ್ಮು ವಿಭಾಗದಲ್ಲಿ ಪ್ರದೇಶ ಪ್ರಾಬಲ್ಯ ಮತ್ತು ಭಯೋತ್ಪಾದನಾ ನಿರ್ಮೂಲನೆ ಯೋಜನೆಗಳನ್ನು ಜಾರಿಗೊಳಿಸುವಂತೆ ಭದ್ರತಾ ಏಜೆನ್ಸಿಗಳಿಗೆ ನಿರ್ದೇಶನ ನೀಡಿದರು. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಪ್ರತಿಪಾದಿಸಿದರು.

ಅಮಿತ್ ಶಾ
ಜಮ್ಮು-ಕಾಶ್ಮೀರ: ಬಸ್ ಮೇಲೆ ಉಗ್ರರ ದಾಳಿ; 9 ಯಾತ್ರಿಕರು ಸಾವು, ಉಗ್ರರ ಹೆಡೆಮುರಿ ಕಟ್ಟಲು ಸೇನೆ ಮುಂದು!

ಭದ್ರತಾ ಏಜೆನ್ಸಿಗಳ ನಡುವೆ ತಡೆರಹಿತ ಸಮನ್ವಯತೆ, ದುರ್ಬಲ ಪ್ರದೇಶಗಳನ್ನು ಗುರುತಿಸುವುದು ಮತ್ತು ಈ ಪ್ರದೇಶಗಳಲ್ಲಿ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಒತ್ತು ನೀಡುವಂತೆ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಯೋತ್ಪಾದನೆ ವಿರುದ್ಧ ಸರ್ಕಾರದ ಶೂನ್ಯ ಸಹಿಷ್ಣುತೆಯ ನೀತಿಯನ್ನು ಪುನರುಚ್ಚರಿಸಿದ ಅವರು, ಜಮ್ಮು ಮತ್ತು ಕಾಶ್ಮೀರದಿಂದ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯಲು ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಪ್ರಯತ್ನಗಳು ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ಸಂಬಂಧಿತ ಘಟನೆಗಳಲ್ಲಿ ಗಣನೀಯ ಇಳಿಕೆಯೊಂದಿಗೆ ಉತ್ತಮ ಧನಾತ್ಮಕ ಫಲಿತಾಂಶಗಳನ್ನು ನೀಡಿದೆ. ಕಾಶ್ಮೀರ ಕಣಿವೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವುದರೊಂದಿಗೆ ಕಾನೂನು ಸುವ್ಯವಸ್ಥೆಯ ಸುಧಾರಣೆಯು ಪ್ರತಿಫಲಿಸುತ್ತಿದೆ ಎಂದು ಅಮಿತ್ ಶಾ ತಿಳಿಸಿದರು. ಜೂನ್ 29 ರಂದು ಪ್ರಾರಂಭವಾಗಲಿರುವ ವಾರ್ಷಿಕ ಅಮರನಾಥ ಯಾತ್ರೆಯ ಸಿದ್ಧತೆಗಳನ್ನು ಶಾ ಪರಿಶೀಲಿಸಿದರು.

ಕಳೆದ ವರ್ಷ 4.28 ಲಕ್ಷಕ್ಕೂ ಹೆಚ್ಚು ಜನರು ದೇಗುಲಕ್ಕೆ ಭೇಟಿ ನೀಡಿದ್ದರು ಮತ್ತು ಈ ಬಾರಿ ಈ ಸಂಖ್ಯೆ ಐದು ಲಕ್ಷಕ್ಕೆ ಏರಬಹುದು ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತಿತರ ಉನ್ನತ ಭದ್ರತಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com