ಭಾರತದಲ್ಲಿ EVMಗಳು 'ಬ್ಲಾಕ್ ಬಾಕ್ಸ್' ಇದ್ದಂತೆ: ಇವಿಎಂ 'ವಿರೋಧಿ' ಎಲಾನ್ ಮಸ್ಕ್ ಗೆ ರಾಹುಲ್ ಗಾಂಧಿ ಬೆಂಬಲ

ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರತಿಪಕ್ಷಗಳು ವಿದ್ಯುನ್ಮಾನ ಮತಯಂತ್ರಗಳ (EVM) ಸಮಸ್ಯೆಯನ್ನು ಬಲವಾಗಿ ಎತ್ತಿದ್ದವು. ಆದರೆ ಚುನಾವಣಾ ಫಲಿತಾಂಶಗಳು ಪ್ರಕಟವಾದ ತಕ್ಷಣ ಈ ವಿಷಯ ತಣ್ಣಗಾಗಿತ್ತು.
ರಾಹುಲ್ ಗಾಂಧಿ
ರಾಹುಲ್ ಗಾಂಧಿPTI
Updated on

ನವದೆಹಲಿ: ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರತಿಪಕ್ಷಗಳು ವಿದ್ಯುನ್ಮಾನ ಮತಯಂತ್ರಗಳ (EVM) ಸಮಸ್ಯೆಯನ್ನು ಬಲವಾಗಿ ಎತ್ತಿದ್ದವು. ಆದರೆ ಚುನಾವಣಾ ಫಲಿತಾಂಶಗಳು ಪ್ರಕಟವಾದ ತಕ್ಷಣ ಈ ವಿಷಯ ತಣ್ಣಗಾಗಿತ್ತು. ಆದರೆ, ಕಾಲಕಾಲಕ್ಕೆ ನಾಯಕರು ಈ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಹಠಾತ್ತನೆ ಕಣ್ಮರೆಯಾಗಿದ್ದ ವಿಚಾರ ಮತ್ತೆ ಬೆಳಕಿಗೆ ಬರುತ್ತಿದ್ದು ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಇವಿಎಂ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರ ಪೋಸ್ಟ್ ಅನ್ನು ಮರುಪೋಸ್ಟ್ ಮಾಡಿದ ರಾಹುಲ್ ಗಾಂಧಿ, ಭಾರತದಲ್ಲಿ ಇವಿಎಂಗಳು "ಬ್ಲಾಕ್ ಬಾಕ್ಸ್" ಇದ್ದಂತೆ, ಅವುಗಳನ್ನು ಪರಿಶೀಲಿಸಲು ಯಾರಿಗೂ ಅವಕಾಶವಿಲ್ಲ. ಇದು ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಬಗ್ಗೆ ಗಂಭೀರ ಕಾಳಜಿಯನ್ನು ಎತ್ತಲಾಗುತ್ತಿದೆ. ಸಂಸ್ಥೆಗಳಲ್ಲಿ ಹೊಣೆಗಾರಿಕೆಯ ಕೊರತೆ ಇದ್ದಾಗ ಪ್ರಜಾಪ್ರಭುತ್ವ ನೆಪವಾಗಿ ಪರಿಣಮಿಸಿ ವಂಚನೆಯ ಸಾಧ್ಯತೆ ಹೆಚ್ಚುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ತಮ್ಮ ಪೋಸ್ಟ್ ನಲ್ಲಿ ಮುಂಬೈ ಘಟನೆಯನ್ನು ಪ್ರಸ್ತಾಪಿಸಿದ್ದಾರೆ. ಈ ವಿಚಾರವಾಗಿ ಮುಂಬೈ ಪೊಲೀಸರು ಶಿವಸೇನಾ ಶಿಂಧೆ ಬಣದ ಸಂಸದ ರವೀಂದ್ರ ವಾಯ್ಕರ್ ಅವರ ಸೋದರ ಮಾವ ಮಂಗೇಶ್ ಪಾಂಡಿಲ್ಕರ್ ವಿರುದ್ಧ ಇವಿಎಂ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ನಿಷೇಧದ ನಡುವೆಯೂ ಮುಂಬೈನ ಗೋರೆಗಾಂವ್ ಚುನಾವಣಾ ಕೇಂದ್ರದೊಳಗೆ ಮಂಗೇಶ್ ಪಂಡಿಲ್ಕರ್ ಮೊಬೈಲ್ ಬಳಸಿದ್ದಾರೆ ಎಂಬ ಆರೋಪವಿದೆ.

ರಾಹುಲ್ ಗಾಂಧಿ
ಚುನಾವಣೆಯಲ್ಲಿ EVM ಬಳಕೆಗೆ ವಿರೋಧ: ಧ್ವನಿ ಎತ್ತಿದ ಎಲಾನ್ ಮಸ್ಕ್'ಗೆ ರಾಜೀವ್ ಚಂದ್ರಶೇಖರ್ ತಿರುಗೇಟು!

ಇದಲ್ಲದೆ, ಪಂಡಿಲ್ಕರ್‌ಗೆ ಮೊಬೈಲ್ ಫೋನ್ ನೀಡಿದ ಆರೋಪದ ಮೇಲೆ ಚುನಾವಣಾ ಆಯೋಗದ ನೌಕರನ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ವಾಯುವ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ಅನೇಕ ಅಭ್ಯರ್ಥಿಗಳಿಂದ ಮತ್ತು ಚುನಾವಣಾ ಆಯೋಗದಿಂದ ದೂರುಗಳನ್ನು ಸ್ವೀಕರಿಸಿದ್ದಾರೆ. ಅದರ ಆಧಾರದ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ. ರವೀಂದ್ರ ವೈಕರ್ ಅವರು ವಾಯವ್ಯ ಕ್ಷೇತ್ರದಿಂದ ಮರು ಎಣಿಕೆಯ ನಂತರ ಕೇವಲ 48 ಮತಗಳಿಂದ ಗೆದ್ದರು. ಇದರಿಂದಾಗಿ ಸಾಕಷ್ಟು ವಿವಾದಗಳು ಉಂಟಾಗಿದ್ದವು.

ಶಿವಸೇನಾ (ಏಕನಾಥ್ ಶಿಂಧೆ ಬಣ) ಅಭ್ಯರ್ಥಿ ರವೀಂದ್ರ ವೈಕರ್ ಅವರು ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದಿಂದ ಕೇವಲ 48 ಮತಗಳಿಂದ ಗೆದ್ದಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಇದು ಅತ್ಯಂತ ಕಡಿಮೆ ಅಂತರದ ಗೆಲುವಾಗಿದೆ.

ವಾಸ್ತವವಾಗಿ, ಎಲೆಕ್ಟ್ರಾನಿಕ್ ಮತಯಂತ್ರಗಳು ಅಂದರೆ ಇವಿಎಂಗಳೊಂದಿಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗಳನ್ನು ನಡೆಸದಂತೆ ಮಸ್ಕ್ ಸಲಹೆ ನೀಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದಿರುವ ಪೋಸ್ಟ್ ನಲ್ಲಿ, 'ವಿದ್ಯುನ್ಮಾನ ಮತಯಂತ್ರಗಳನ್ನು ರದ್ದುಗೊಳಿಸಬೇಕು. ಇದು ಮಾನವರು ಅಥವಾ AI ನಿಂದ ಹ್ಯಾಕ್ ಆಗುವ ಅಪಾಯವಿದೆ ಎಂದು ಟ್ವೀಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com