ಸಾಂದರ್ಭಿಕ ಚಿತ್ರ
ದೇಶ
ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ಸತತ 6ನೇ ಬಾರಿಗೆ ಈದ್ ಪ್ರಾರ್ಥನೆಗೆ ಅವಕಾಶ ನಿರಾಕರಣೆ
ಶ್ರೀನಗರದ ಐತಿಹಾಸಿಕ ಜಾಮಾ ಮಸೀದಿಯಲ್ಲಿ ಸತತ ಆರನೇ ವರ್ಷ ಈದ್ ಪ್ರಾರ್ಥನೆಗೆ ಸ್ಥಳೀಯ ಅಧಿಕಾರಿಗಳು ಅವಕಾಶ ನಿರಾಕರಿಸಿದ್ದಾರೆ.
ಶ್ರೀನಗರ: ಶ್ರೀನಗರದ ಐತಿಹಾಸಿಕ ಜಾಮಾ ಮಸೀದಿಯಲ್ಲಿ ಸತತ ಆರನೇ ವರ್ಷ ಈದ್ ಪ್ರಾರ್ಥನೆಗೆ ಸ್ಥಳೀಯ ಅಧಿಕಾರಿಗಳು ಅವಕಾಶ ನಿರಾಕರಿಸಿದ್ದಾರೆ ಎಂದು ಸೋಮವಾರ ಅಂಜುಮನ್ ಔಕಾಫ್ ಜಮಾ ಮಸೀದಿ ತಿಳಿಸಿದೆ.
ಇಂದು ಫಜ್ರ್ ಪ್ರಾರ್ಥನೆಯ ನಂತರ, ಪೊಲೀಸ್ ಸಿಬ್ಬಂದಿ ಶ್ರೀನಗರದ ಜಮಾ ಮಸೀದಿಯ ಗೇಟ್‌ಗಳನ್ನು ಮುಚ್ಚಿದರು ಮತ್ತು ಮಸೀದಿಯಲ್ಲಿ ಬೆಳಗ್ಗೆ 9 ಗಂಟೆಗೆ ನಿಗದಿಪಡಿಸಲಾದ ಈದ್ ಪ್ರಾರ್ಥನೆಗೆ ಅನುಮತಿ ನೀಡಿಲ್ಲ ಎಂದು 14 ನೇ ಶತಮಾನದ ಮಸೀದಿಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಈದ್ ಧರ್ಮೋಪದೇಶ ನೀಡಬೇಕಾಗಿದ್ದ ಮಿರ್ವೈಜ್ ಉಮರ್ ಫಾರೂಕ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.
2019 ರಿಂದ ಅಧಿಕಾರಿಗಳು ಜಾಮಾ ಮಸೀದಿ ಮತ್ತು ಈದ್ಗಾದಲ್ಲಿ ಈದ್ ಪ್ರಾರ್ಥನೆಗಳನ್ನು ನಿರ್ಬಂಧಿಸಿದ್ದಾರೆ. ಮಸೀದಿಯಲ್ಲಿ ಸತತ 6ನೇ ಬಾರಿಗೆ ಈದ್ ಪ್ರಾರ್ಥನೆಗೆ ಅವಕಾಶ ನಿರಾಕರಿಸಿರುವುದು ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ" ಎಂದು ಕರೆದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ