ಸ್ವಾತಿ ಮಲಿವಾಲ್
ಸ್ವಾತಿ ಮಲಿವಾಲ್

ಹಲ್ಲೆ ಪ್ರಕರಣದ ಬಗ್ಗೆ ಚರ್ಚಿಸಲು ಸಮಯ ಕೋರಿ ಇಂಡಿಯಾ ಬ್ಲಾಕ್ ಗೆ ಸ್ವಾತಿ ಮಲಿವಾಲ್ ಪತ್ರ

ತಮ್ಮ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಕುರಿತು ಚರ್ಚಿಸಲು ಸಮಯ ಕೋರಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮಂಗಳವಾರ ಇಂಡಿಯಾ ಬ್ಲಾಕ್‌ ನಾಯಕರಿಗೆ ಪತ್ರ ಬರೆದಿದ್ದಾರೆ.
Published on

ನವದೆಹಲಿ: ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಆಪ್ತ ಕಾರ್ಯದರ್ಶಿ ಬಿಭವ್‌ ಕುಮಾರ್‌ ಅವರು ತಮ್ಮ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಕುರಿತು ಚರ್ಚಿಸಲು ಸಮಯ ಕೋರಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮಂಗಳವಾರ ಇಂಡಿಯಾ ಬ್ಲಾಕ್‌ ನಾಯಕರಿಗೆ ಪತ್ರ ಬರೆದಿದ್ದಾರೆ.

ರಾಹುಲ್ ಗಾಂಧಿ ಮತ್ತು ಶರದ್ ಪವಾರ್ ಅವರಂತಹ ಇಂಡಿಯಾ ಬ್ಲಾಕ್ ನಾಯಕರಿಗೆ ಬರೆದ ಪತ್ರದಲ್ಲಿ, ಆಮ್ ಆದ್ಮಿ ಪಕ್ಷದ ಸದಸ್ಯೆ ಸ್ವಾತಿ ಮಲಿವಾಲ್ ಅವರು ತಮ್ಮನ್ನು ನಿಂದಿಸಿದ್ದನ್ನು ಪ್ರಶ್ನಿಸಿದ್ದಕ್ಕೆ "ಬಲಿಪಶು ಮಾಡಲಾಗಿದೆ ಮತ್ತು ಚಾರಿತ್ರ್ಯ ಹರಣ" ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

"ನನಗೆ ಬೆಂಬಲ ನೀಡುವ ಬದಲು, ನನ್ನ ಚಾರಿತ್ರ್ಯದ ಮೇಲೆ ನಿರಂತರ ದಾಳಿ ಮಾಡಲಾಗುತ್ತಿದೆ. ನನ್ನ ಸ್ವಂತ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಂದಲೂ ಅವಮಾನ ಮಾಡಲಾಗುತ್ತಿದೆ. ಈ ಕುರಿತು ಚರ್ಚಿಸಲು ನಾನು ನಿಮ್ಮ ಸಮಯ ಕೋರಲು ಬಯಸುತ್ತೇನೆ" ಎಂದು ಸ್ವಾತಿ ಮಲಿವಾಲ್ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಸ್ವಾತಿ ಮಲಿವಾಲ್
ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ: ಜೂನ್ 22 ರವರೆಗೆ ಬಿಭವ್ ಕುಮಾರ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಮಲಿವಾಲ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಬರೆದ ಪತ್ರಗಳನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

''ಕಳೆದ 18 ವರ್ಷಗಳಿಂದ ನಾನು ಜನರಿಗಾಗಿ ದುಡಿದಿದ್ದೇನೆ. 9 ವರ್ಷದಲ್ಲಿ ಮಹಿಳಾ ಆಯೋಗದಲ್ಲಿ 1.7 ಲಕ್ಷ ಪ್ರಕರಣಗಳನ್ನು ಆಲಿಸಿದ್ದೇನೆ. ಯಾರಿಗೂ ಹೆದರದೆ, ಯಾರಿಗೂ ತಲೆಬಾಗದೆ ಮಹಿಳಾ ಆಯೋಗವನ್ನು ಅತ್ಯಂತ ಉನ್ನತ ಸ್ಥಾನದಲ್ಲಿ ನಿಲ್ಲಿಸಿದ್ದೇನೆ. ಆದರೆ ಅದು ಮುಖ್ಯಮಂತ್ರಿಗಳ ಮನೆಯಲ್ಲಿ ಮೊದಲು ನನ್ನನ್ನು ಹೀನಾಯವಾಗಿ ಥಳಿಸಲಾಗಿದೆ ಮತ್ತು ನಂತರ ನನ್ನ ಚಾರಿತ್ರ್ಯ ಹರಣ ಮಾಡಲಾಗಿದೆ" ಎಂದು ಎಎಪಿ ರಾಜ್ಯಸಭಾ ಸದಸ್ಯೆ ಬೇಸರ ವ್ಯಕ್ತಪಡಿಸಿದ್ದಾರೆ.

X
Open in App

Advertisement

X
Kannada Prabha
www.kannadaprabha.com