NEET-UG Row: ಸಾಂಸ್ಥಿಕ ವೈಫಲ್ಯ, ಎನ್‌ಟಿಎ ಮುಖ್ಯಸ್ಥರ ಮೇಲೂ ನಿಗಾ: ಧರ್ಮೇಂದ್ರ ಪ್ರಧಾನ್‌

‘ಯುಜಿ–ನೀಟ್‌’ ಮತ್ತು ‘ಯುಜಿಸಿ–ನೆಟ್‌’ ಪರೀಕ್ಷಾ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಮುಖ್ಯಸ್ಥರ ಮೇಲೂ ನಿಗಾ ಇರಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ.
Dharmendra Pradhan
ಧರ್ಮೇಂದ್ರ ಪ್ರಧಾನ್‌
Updated on

ನವದೆಹಲಿ: ‘ಯುಜಿ–ನೀಟ್‌’ ಮತ್ತು ‘ಯುಜಿಸಿ–ನೆಟ್‌’ ಪರೀಕ್ಷಾ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಮುಖ್ಯಸ್ಥರ ಮೇಲೂ ನಿಗಾ ಇರಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ.

ನೀಟ್ ಯುಜಿ ಅಕ್ರಮದ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌, ‘‌ಸಿಎಸ್‌ಐಆರ್‌–ಯುಜಿಸಿ–ನೆಟ್‌’ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಅಲ್ಲಗಳೆದರು.

ವಿದ್ಯಾರ್ಥಿಗಳ ಹಿತಾಸಕ್ತಿಯ ಪಾಲಕರಾದ ನಾವು ಯಾವುದೇ ಕ್ರಮ ತೆಗೆದುಕೊಳ್ಳುವ ಮುನ್ನ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಮುಖ್ಯವಾಗಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ಹೇಳಿದ ಸಚಿವರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಮುಖ್ಯಸ್ಥರ ಮೇಲೂ ನಿಗಾ ಇರಿಸಲಾಗಿದೆ ಎಂದು ಹೇಳಿದರು.

Dharmendra Pradhan
NEET NET Paper leak: NTA ಮುಖ್ಯಸ್ಥ ಸುಬೋಧ್ ಕುಮಾರ್ ವಜಾ, ನಾಳೆಯ ನೀಟ್ ಪ್ರವೇಶ ಪರೀಕ್ಷೆ ಮುಂದೂಡಿಕೆ

ನೀಟ್‌ ಪರೀಕ್ಷೆಯನ್ನು ಸರಿಯಾಗಿ ಬರೆದು ಉತ್ತೀರ್ಣರಾಗಿರುವ ಲಕ್ಷಾಂತರ ಅಭ್ಯರ್ಥಿಗಳ ವೃತ್ತಿಜೀವನಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ ಎಂದ ಪ್ರಧಾನ್‌, ಕೌನ್ಸಿಲ್‌ ಆಫ್‌ ಸೈಂಟಿಫಿಕ್‌ ಅಂಡ್‌ ಇಂಡಸ್ಟ್ರಿಯಲ್‌ ರಿಸರ್ಚ್‌– ಯುಜಿಸಿ- ನೆಟ್‌’ (CSIR-UGC-NET) ಪರೀಕ್ಷೆಯ ಜೂನ್‌ ಆವೃತ್ತಿಯನ್ನು ಎನ್‌ಟಿಎ ಶುಕ್ರವಾರ ರಾತ್ರಿ ದಿಢೀರನೇ ಮುಂದೂಡಿದೆ. ವಿಜ್ಞಾನ ವಿಷಯಗಳಲ್ಲಿ ಕಿರಿಯ ಸಂಶೋಧನಾ ಫೆಲೊ, ಸಹಾಯಕ ಪ್ರಾಧ್ಯಾಪಕರು ಮತ್ತು ಪಿಎಚ್‌.ಡಿ ಕೋರ್ಸ್‌ ಪ್ರವೇಶಕ್ಕಾಗಿನ ಅರ್ಹತೆಗಾಗಿ ಈ ಪರೀಕ್ಷೆ ನಡೆಸಲಾಗುತ್ತದೆ.

ಸಿಎಸ್‌ಐಆರ್‌–ಯುಜಿಸಿ–ಎನ್‌ಇಟಿ’ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಲಾಜಿಸ್ಟಿಕ್‌ ಸಮಸ್ಯೆಗಳ ಕಾರಣ ಅದನ್ನು ಮುಂದೂಡಲಾಗಿದೆ. ಅಲ್ಲದೆ ಜೂನ್‌ 23ರಂದು (ಭಾನುವಾರ) 1,563 ಅಭ್ಯರ್ಥಿಗಳಿಗೆ ‘ನೀಟ್‌’ ಮರು ಪರೀಕ್ಷೆಯೂ ಜರುಗಲಿದೆ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಸಿಎಸ್‌ಐಆರ್‌–ಯುಜಿಸಿ–ಎನ್‌ಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು.

‘ಸಾಂಸ್ಥಿಕ ವೈಫಲ್ಯ’

ಪರೀಕ್ಷಾ ಅಕ್ರಮಗಳಲ್ಲಿನ ಎನ್‌ಟಿಎ ಪಾತ್ರ ಮತ್ತು ಅದರ ವಿರುದ್ಧದ ತನಿಖೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ವಿಷಯದಲ್ಲಿ ಸಾಂಸ್ಥಿಕ ವೈಫಲ್ಯವಾಗಿದೆ ಎಂಬುದನ್ನು ನಾನು ಈಗಾಗಲೇ ಒಪ್ಪಿಕೊಂಡಿದ್ದೇನೆ. ಸ್ವತಃ ನಾನೂ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇನೆ. ಈ ಕುರಿತು ಎನ್‌ಟಿಎ ಉನ್ನತ ನಾಯಕತ್ವವು ಹಲವು ಪ್ರಶ್ನೆಗಳನ್ನು ಎದುರಿಸುತ್ತಿದ್ದು, ನಿಗಾದಲ್ಲಿದೆ.

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕದಿಂದ ಶಿಕ್ಷಣ ಸಚಿವಾಲಯ ಕೇಳಿರುವ ವರದಿ ಕುರಿತ ಪ್ರಶ್ನೆಗೆ, ‘ಆ ವರದಿ ಇನ್ನೂ ಬಂದಿಲ್ಲ. ಆದರೆ ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ದರೂ ಬಿಡುವುದಿಲ್ಲ’ ಎಂದು ಉತ್ತರಿಸಿದರು.

ಗುಜರಾತ್‌ನ ಗೋಧ್ರಾದಲ್ಲಿನ ‘ನೀಟ್‌’ ಪರೀಕ್ಷಾ ಅಕ್ರಮಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ಗೋಧ್ರಾದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಅಲ್ಲಿ ಸಂಘಟಿತ ವಂಚನೆ ನಡೆದಿದೆ. ಈ ಕಾರಣಕ್ಕಾಗಿ 30 ವಿದ್ಯಾರ್ಥಿಗಳನ್ನು ಡಿಬಾರ್‌ ಮಾಡಲಾಗಿದೆ. ಅಂತೆಯೇ ದೇಶದಾದ್ಯಂತ ಅನ್ಯಾಯದ ವಿಧಾನದ ಮೂಲಕ ಪರೀಕ್ಷೆ ಬರೆಯಲು ಯತ್ನಿಸಿದ 63 ವಿದ್ಯಾರ್ಥಿಗಳನ್ನೂ ಡಿಬಾರ್‌ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com