ಅನುಮತಿಯಿಲ್ಲದೆ ಯಾವುದೇ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಯುಪಿ ಸರ್ಕಾರಿ ನೌಕರರಿಗೆ ನಿರ್ಬಂಧ

ಉತ್ತರ ಪ್ರದೇಶ ಸರ್ಕಾರ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮತ್ತು ಇತರೆ ಯಾವುದೇ ಮಾಧ್ಯಮಗಳಿಗೆ ಸರ್ಕಾರದ ನಿರ್ಧಾರಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡದಂತೆ ರಾಜ್ಯ ಸರ್ಕಾರಿ ನೌಕರರಿಗೆ ನಿರ್ಬಂಧ ವಿಧಿಸಿದೆ.
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಲಖನೌ: ಉತ್ತರ ಪ್ರದೇಶ ಸರ್ಕಾರ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮತ್ತು ಇತರೆ ಯಾವುದೇ ಮಾಧ್ಯಮಗಳಿಗೆ ಸರ್ಕಾರದ ನಿರ್ಧಾರಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡದಂತೆ ರಾಜ್ಯ ಸರ್ಕಾರಿ ನೌಕರರಿಗೆ ನಿರ್ಬಂಧ ವಿಧಿಸಿ ಸುತ್ತೋಲೆ ಹೊರಡಿಸಿದೆ.

ಈ ಸಂಬಂಧ ನೇಮಕಾತಿ ಮತ್ತು ಸಿಬ್ಬಂದಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೇವೇಶ್ ಚತುರ್ವೇದಿ ಅವರು ಬುಧವಾರ ಹೊರಡಿಸಿದ ಸುತ್ತೋಲೆಯಲ್ಲಿ, ಸರ್ಕಾರದ ನಿರ್ಧಾರಗಳನ್ನು ಸಾಮಾಜಿಕ ಮಾಧ್ಯಮ, ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್, ಡಿಜಿಟಲ್ ಅಥವಾ ರೇಡಿಯೊದಂತಹ ಯಾವುದೇ ಪ್ರಸಾರ ಮಾಧ್ಯಮಗಳಲ್ಲಿ ಪೂರ್ವಾನುಮತಿ ಇಲ್ಲದೆ ಮಾತನಾಡುವುದು, ಪೋಸ್ಟ್ ಮಾಡುವುದು ಅಥವಾ ಬರೆಯುವುದನ್ನು ರಾಜ್ಯದ ಸರ್ಕಾರಿ ನೌಕರರಿಗೆ ನಿರ್ಬಂಧಿಸಲಾಗಿದೆ.

"ಈ ಸುತ್ತೋಲೆಯು ಅಸ್ತಿತ್ವದಲ್ಲಿರುವ ನಿಯಮಗಳ ವಿಸ್ತರಣೆಯಾಗಿದ್ದು, ರಾಜ್ಯ ಸರ್ಕಾರಿ ನೌಕರರು ಮುದ್ರಣ, ಡಿಜಿಟಲ್ ಮಾಧ್ಯಮ, ಟೆಲಿಕಾಸ್ಟ್ ಅಥವಾ ಪ್ರಸಾರ ಮಾಧ್ಯಮಗಳಲ್ಲಿ ಯಾವುದೇ ರೀತಿಯ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವ ಮೊದಲು ಅನುಮತಿ ಪಡೆಯುವುದು ಕಡ್ಡಾಯವಾಗಿದೆ" ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯೋಗಿ ಆದಿತ್ಯನಾಥ್
ಕುತೂಹಲ ಮೂಡಿಸಿದ ಆರ್ ಎಸ್ಎಸ್ ಮುಖ್ಯಸ್ಥ- ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭೇಟಿ!

ಆದಾಗ್ಯೂ, ಸರ್ಕಾರದ ಮೂಲಗಳಿಂದ ಮಾಹಿತಿಯ ಹರಿವನ್ನು ನಿಯಂತ್ರಿಸುವ ಉದ್ದೇಶದಿಂದ ಕಾರ್ಯಗತಗೊಳಿಸಲಾದ ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಈ ಕ್ರಮವು ಮಹತ್ವದ ನೀತಿ ಬದಲಾವಣೆಯಾಗಿ ಕಂಡುಬರುತ್ತದೆ.

ದಿನ ಪತ್ರಿಕೆಗಳು ಮತ್ತು ರೆಡಿಯೋದಲ್ಲಿ ಸರ್ಕಾರದ ಟೀಕೆಗೆ ಸಂಬಂಧಿಸಿದಂತೆ ಹೊಸ ನಿಬಂಧನೆಗಳನ್ನು ಪರಿಚಯಿಸಲಾಗಿದೆ ಎಂದು ನೇಮಕಾತಿ ಮತ್ತು ಸಿಬ್ಬಂದಿ ವಿಭಾಗದ ಕಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಯಾರಾದರೂ ಮಾನದಂಡಗಳನ್ನು ಉಲ್ಲಂಘಿಸುವುದು ಅಥವಾ ಸರ್ಕಾರದ ಸುತ್ತೋಲೆಗಳಿಂದ ನಿರ್ಣಾಯಕ ಮಾಹಿತಿಯನ್ನು ಸೋರಿಕೆ ಮಾಡುವುದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ" ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com