Lok Sabha Speaker Election: ಓಂ ಬಿರ್ಲಾ vs ಕೋಡಿಕುನ್ನಿಲ್ ಸುರೇಶ್; INDIA ಕೂಟಕ್ಕೆ TMC ಶಾಕ್, NDA ಅಭ್ಯರ್ಥಿಗೆ YCP ಬೆಂಬಲ!

ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಸ್ಪೀಕರ್ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಎನ್ ಡಿಎ ಕೂಟದಿಂದ ಓಂ ಬಿರ್ಲಾ ಮತ್ತು INDIA ಕೂಟದಿಂದ ಕೋಡಿಕುನ್ನಿಲ್ ಸುರೇಶ್ ಸ್ಪರ್ಧಿಸುತ್ತಿದ್ದಾರೆ.
Om Birla vs Kodikunnil Suresh
ಓಂ ಬಿರ್ಲಾ vs ಕೋಡಿಕುನ್ನಿಲ್ ಸುರೇಶ್
Updated on

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಸ್ಪೀಕರ್ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಎನ್ ಡಿಎ ಕೂಟದಿಂದ ಓಂ ಬಿರ್ಲಾ ಮತ್ತು INDIA ಕೂಟದಿಂದ ಕೋಡಿಕುನ್ನಿಲ್ ಸುರೇಶ್ ಸ್ಪರ್ಧಿಸುತ್ತಿದ್ದಾರೆ.

ಆಡಳಿತಾರೂಢ ಎನ್‌ಡಿಎ ಕೂಟ ವಿಪಕ್ಷಗಳಿಗೆ ಉಪಸಭಾಪತಿ ಸ್ಥಾನದ ಭರವಸೆ ನೀಡದ ಕಾರಣ ಪ್ರತಿಪಕ್ಷಗಳು ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಕೊನೇ ಕ್ಷಣದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಹೀಗಾಗಿ ಲೋಕಸಭೆಯ ಸ್ಪೀಕರ್ ಸ್ಥಾನವು ಓಂ ಬಿರ್ಲಾ ಮತ್ತು ಕೋಡಿಕುನ್ನಿಲ್ ಸುರೇಶ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಬುಧವಾರ ಬೆಳಗ್ಗೆ 11 ಗಂಟೆಗೆ ಮತದಾನ ನಡೆಯಲಿದೆ.

17ನೇ ಲೋಕಸಭೆಯ ಸ್ಪೀಕರ್ ಆಗಿದ್ದ ಬಿಜೆಪಿಯ ಓಂ ಬಿರ್ಲಾ ಅವರು ಎನ್‌ಡಿಎ ಅಭ್ಯರ್ಥಿಯಾಗಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಎನ್‌ಡಿಎಗೆ ಹೆಚ್ಚಿನ ಸಂಖ್ಯೆಯಿರುವ ಕಾರಣ ಅವರು ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಕ್ರಾಸ್ ವೋಟಿಂಗ್ ನಿರೀಕ್ಷೆಯಲ್ಲಿರುವ ಇಂಡಿಯಾ ಕೂಟ ತಮ್ಮ ಅಭ್ಯರ್ಥಿಯ ಸುರೇಶ್ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದೆ.

Om Birla vs Kodikunnil Suresh
ಲೋಕಸಭೆ ಸ್ಪೀಕರ್ ಚುನಾವಣೆ: ಕಾಂಗ್ರೆಸ್, ಬಿಜೆಪಿಯಿಂದ ಸಂಸದರಿಗೆ ವಿಪ್ ಜಾರಿ

ಇಂಡಿಯಾ ಕೂಟಕ್ಕೆ ಶಾಕ್ ಕೊಟ್ಟ TMC

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಬುಧವಾರ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿದ್ದು, ಇಂಡಿಯಾ ಬ್ಲಾಕ್​ನ ಅಭ್ಯರ್ಥಿಯಾಗಿ ಕೆ. ಸುರೇಶ್ ಅವರನ್ನು ಆಯ್ಕೆ ಮಾಡುವ ಮುನ್ನ ತಮ್ಮ ಬಳಿ ಸಮಾಲೋಚನೆಯನ್ನೇ ನಡೆಸಿಲ್ಲ ಎಂದು ಟಿಎಂಸಿ ಆರೋಪಿಸಿದೆ. ಕಾಂಗ್ರೆಸ್ ಸಂಸದ ಕೆ. ಸುರೇಶ್ ಅವರನ್ನು ಇಂಡಿಯಾ ಬ್ಲಾಕ್‌ನ ಜಂಟಿ ನಾಮನಿರ್ದೇಶಿತ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಪ್ರತಿಪಕ್ಷಗಳ ನಿರ್ಧಾರದ ಬಗ್ಗೆ ನಮ್ಮ ಪಕ್ಷದ ನಾಯಕರ ಬಳಿ ಸಮಾಲೋಚನೆ ನಡೆಸಿಲ್ಲ. ದುರದೃಷ್ಟವಶಾತ್ ಇದು ಏಕಪಕ್ಷೀಯ ನಿರ್ಧಾರವಾಗಿದೆ ಎಂದು ಟಿಎಂಸಿ ಹೇಳಿದೆ.

ಓಂ ಬಿರ್ಲಾಗೆ ವೈಸಿಪಿ ಬೆಂಬಲ!

ಇತ್ತ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಲೋಕಸಭಾ ಸ್ಪೀಕರ್ (Lok Sabha Speaker) ಹುದ್ದೆಗೆ ಬುಧವಾರ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಸಂಸದ ಓಂ ಬಿರ್ಲಾ ಅವರನ್ನು ಬೆಂಬಲಿಸಲಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯವಾಗಿ ವಿರೋಧ ಇರುವ ಹೊರತಾಗಿಯೂ ಡೆಲ್ಲಿಯಲ್ಲಿ ಬಿರ್ಲಾ ಅವರನ್ನು ಬೆಂಬಲಿಸಲು ವೈಎಸ್​ಆರ್​ ನಿರ್ಧರಿಸಿದೆ.

ಇನ್ನು ವೈಎಸ್ಆರ್​ಪಿ ಆಗಾಗ್ಗೆ ಸಂಸತ್ತಿನಲ್ಲಿ ವಿಶೇಷವಾಗಿ ರಾಜ್ಯಸಭೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದು, ಸಂಖ್ಯಾಬಲದ ಕೊರತೆಯಿದ್ದಾಗ ಕಾನೂನುಗಳನ್ನು ಅಂಗೀಕರಿಸಲು ನೆರವಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ತೆಗೆದುಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರ ಮತ್ತು ಜಮ್ಮು ಮತ್ತು 370 ನೇ ವಿಧಿಯನ್ನು ರದ್ದುಪಡಿಸುವುದನ್ನು ರೆಡ್ಡಿ ಬೆಂಬಲಿಸಿದ್ದರು.

ಓಂ ಬಿರ್ಲಾ ಮತ್ತು ಬಿಜೆಪಿ ಈಗಾಗಲೇ ಗೆಲುವನ್ನು ಖಚಿತಪಡಿಸಿಕೊಳ್ಳಲು ಸಂಖ್ಯಾಬಲ ಹೊಂದಿದ್ದು, ಆದಾಗ್ಯೂ ಜಗನ್ ಬಿಜೆಪಿ ಕಡೆಗೆ ಒಲವು ತೋರಿದೆ.

ಅಂದಹಾಗೆ ಸಂಸದೀಯ ಸಂಪ್ರದಾಯಕ್ಕೆ ಅನುಗುಣವಾಗಿ ಬಿರ್ಲಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲು ಬಿಜೆಪಿ ವಿರೋಧ ಪಕ್ಷಗಳನ್ನು ಸಂಪರ್ಕಿಸಿತ್ತು. ಬಿಜೆಪಿಯೇತರ ಸಂಸದರಿಗೆ ಉಪಸಭಾಪತಿ ಸ್ಥಾನ ನೀಡಿದರೆ ಮಾತ್ರ ಬಿರ್ಲಾ ಅವರನ್ನು ಬೆಂಬಲಿಸುವುದಾಗಿ ಪ್ರತಿಪಕ್ಷಗಳು ಸೂಚಿಸಿದ್ದವು.

Om Birla vs Kodikunnil Suresh
ಲೋಕಸಭೆ ಸ್ಪೀಕರ್ ಹುದ್ದೆ: NDA ಅಭ್ಯರ್ಥಿ ಓಂ ಬಿರ್ಲಾ, ಇಂಡಿಯಾ ಬಣದ ಕೆ ಸುರೇಶ್ ನಡುವೆ ಪೈಪೋಟಿ!

ಪಕ್ಷಗಳ ಬಲಾಬಲ

ಲೋಕಸಭೆಯಲ್ಲಿ ಬಿಜೆಪಿ ಈಗಾಗಲೇ ತನ್ನದೇ ಸಂಸದರಿಂದ 240 ಮತಗಳನ್ನು ಮತ್ತು NDA ಪಾಲುದಾರ ಪಕ್ಷಗಳಿಂದ 53 ಮತಗಳನ್ನು ಹೊಂದಿದೆ. ಚಂದ್ರಬಾಬು ನಾಯ್ಡು ಅವರ ಟಿಡಿಪಿಯ 16 ಸಂಸದರು ಮತ್ತು ಪವನ್ ಕಲ್ಯಾಣ್ ರ ಜನಸೇನಾ ಪಕ್ಷದ ಇಬ್ಬರು ಸಂಸದರು ಸೇರಿಕೊಂಡಿದ್ದಾರೆ. ವೈಎಸ್​ಆರ್​​ಪಿ ಹೆಚ್ಚುವರಿ ಮತಗಳು ಎನ್ ಡಿಎ ಪ್ಲಸ್ ಆಗಲಿದ್ದು, ಬಿರ್ಲಾ ಅವರಿಗೆ 297 ಮತಗಳ ಬೆಂಬಲವನ್ನು ನೀಡುತ್ತದೆ. ಇದು ಅವರಿಗೆ ಭರ್ಜರಿ ಮುನ್ನಡೆ ನೀಡುತ್ತದೆ. ಅಂತೆಯೇ ಮತ್ತೊಂದೆಡೆ, ಪ್ರತಿಪಕ್ಷಗಳು ಅಂದರೆ ಇಂಡಿಯಾ ಒಕ್ಕೂಟ 232 ಸಂಸದರನ್ನು ಹೊಂದಿವೆ.

ಯಾರು ಈ ಸುರೇಶ್?

ಲೋಕಸಭಾ ಸ್ಪೀಕರ್ ಚುನಾವಣೆಯಲ್ಲಿ NDA ಅಭ್ಯರ್ಥಿ ಓಂ ಬಿರ್ಲಾ ಅವರ ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಎಂಟು ಬಾರಿ ಸಂಸದರಾಗಿದ್ದು, ಅವರು ಕೇರಳದ ಮಾವೇಲಿಕರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಪ್ರಸ್ತುತ ಸದಸ್ಯರಲ್ಲಿ ಅತಿ ಹೆಚ್ಚು ಚುನಾವಣೆಗಳನ್ನು ಗೆದ್ದಿರುವ ಕಾರಣ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಹೆಸರಿಸಬೇಕೆಂದು ಪ್ರತಿಪಕ್ಷಗಳು ಭಾವಿಸಿದ್ದವು. ಇವರನ್ನು ಹಂಗಾಮಿ ಸ್ಪೀಕರ್ ಮಾಡುವ ಬಗ್ಗೆಯೂ ಚರ್ಚೆ ನಡೆದಿತ್ತು. ಇವರು 18ನೇ ಲೋಕಸಭೆಯಲ್ಲಿ ಅತ್ಯಂತ ಅನುಭವಿ ಸಂಸದ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಈಗ ಅತ್ಯಂತ ಅನುಭವಿ ಹಾಗೂ ದಲಿತ ಮುಖವನ್ನು ಸ್ಪೀಕರ್ ಸ್ಥಾನಕ್ಕೆ ಇಂಡಿ ಮೈತ್ರಿಕೂಟ ಕಣಕ್ಕೆ ಇಳಿಸಿದೆ.

1989 ರಲ್ಲಿ ಸುರೇಶ್‌ ಮೊದಲ ಬಾರಿಗೆ ಸಂಸತ್‌ ಚೊಚ್ಚಲ ಬಾರಿಗೆ ಪ್ರವೇಶಿಸಿದರು. ಇವರು 2009 ರಿಂದ ಮಾವೇಲಿಕ್ಕರ ಸ್ಥಾನವನ್ನು ಸತತವಾಗಿ ಗೆಲ್ಲುತ್ತಿದ್ದಾರೆ. 2009ರಲ್ಲಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಅವರಿಗಿದೆ.

ಮಾವೇಲಿಕ್ಕರ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್‌ ತಮ್ಮ ಹತ್ತಿರದ ಪ್ರತಿ ಸ್ಪರ್ಧಿ ಸಿಪಿಐಎಂನ ಅರುಣ್ ಕುಮಾರ್ ಅವರನ್ನು 10 ಸಾವಿರ ಮತಗಳಿಂದ ಸೋಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com