ದೆಹಲಿ ನೀರಿನ ಬಿಕ್ಕಟ್ಟು: ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರಿದ ಅತಿಶಿ, ಉಪವಾಸ ಸತ್ಯಾಗ್ರಹ ಅಂತ್ಯ!

ದೆಹಲಿಯ ಜನತೆಗೆ ನ್ಯಾಯಯುತವಾದ ನೀರು ಒದಗಿಸುವಂತೆ ಕಳೆದ 5 ದಿನಗಳಿಂದ ಜಲಸಚಿವ ಅತಿಶಿ ಉಪವಾಸ ನಡೆಸುತ್ತಿದ್ದಾರೆ ಎಂದು ಹೇಳಿದರು. ಅತಿಶಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಇಂದು ಅಂತ್ಯಗೊಂಡಿದೆ ಎಂದು ಸಂಜಯ್ ಸಿಂಗ್ ಹೇಳಿದರು.
ಅತಿಶಿ ಆಸ್ಪತ್ರೆಗೆ ದಾಖಲು
ಅತಿಶಿ ಆಸ್ಪತ್ರೆಗೆ ದಾಖಲುPTI
Updated on

ದೆಹಲಿಯಲ್ಲಿನ ನೀರಿನ ಕೊರತೆಯ ಕುರಿತು ಕಳೆದ ನಾಲ್ಕು ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿದ್ದ ಜಲಸಚಿವ ಅತಿಶಿ ಅವರು ಐದನೇ ದಿನವಾದ ಮಂಗಳವಾರ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಮುಂಜಾನೆ ಅವರ ಆರೋಗ್ಯ ಹದಗೆಟ್ಟ ನಂತರ ಅತಿಶಿ ಅವರನ್ನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಸಂಬಂಧ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ದೆಹಲಿಯ ಜನತೆಗೆ ನ್ಯಾಯಯುತವಾದ ನೀರು ಒದಗಿಸುವಂತೆ ಕಳೆದ 5 ದಿನಗಳಿಂದ ಜಲಸಚಿವ ಅತಿಶಿ ಉಪವಾಸ ನಡೆಸುತ್ತಿದ್ದಾರೆ ಎಂದು ಹೇಳಿದರು. ಅತಿಶಿ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಇಂದು ಅಂತ್ಯಗೊಂಡಿದೆ ಎಂದು ಹೇಳಿದರು.

ಹರಿಯಾಣ ಸರ್ಕಾರದಿಂದ ದೆಹಲಿಗೆ 613 MGD ನೀರು ಸಿಗಬೇಕು. ಆದರೆ ಕಳೆದ ಮೂರು ವಾರಗಳಿಂದ ದೆಹಲಿ ನಿರಂತರವಾಗಿ 100 MGD ಗಿಂತ ಕಡಿಮೆ ನೀರು ಪಡೆಯುತ್ತಿದೆ. ಇದರಿಂದ 28 ಲಕ್ಷಕ್ಕೂ ಹೆಚ್ಚು ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ದೆಹಲಿಯ ಜನರಿಗೆ ನ್ಯಾಯಯುತವಾದ ನೀರನ್ನು ಒದಗಿಸಲು ಅತಿಶಿ ಅನೇಕ ಪ್ರಯತ್ನಗಳನ್ನು ಮಾಡಿದರು. ಆದರೆ ಯಾವುದೇ ಪರಿಹಾರ ದೊರೆಯದಿದ್ದಾಗ, ಅವರು ಈ ಅನಿರ್ದಿಷ್ಟ ಉಪವಾಸವನ್ನು ಪ್ರಾರಂಭಿಸಿದರು.

ಅತಿಶಿ ಆಸ್ಪತ್ರೆಗೆ ದಾಖಲು
ಕೇಜ್ರಿವಾಲ್‌ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್; ದೆಹಲಿ ಸಿಎಂಗೆ ಜೈಲೇ ಗತಿ

ಸಂಸದ ಸಂಜಯ್ ಸಿಂಗ್ ಮಾತನಾಡಿ, ಇಂದು ದೆಹಲಿಯ ಹಕ್ಕಿನ ನೀರು ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತಿದ್ದೇವೆ. ಎಲ್ ಜಿ ಸಾಹೇಬರು ಹರಿಯಾಣದ ಮುಖ್ಯಮಂತ್ರಿಯವರೊಂದಿಗೂ ಮಾತನಾಡಿದ್ದಾರೆ. ಬಳಿಕ ಇಂದು ಅನಿರ್ದಿಷ್ಟಾವಧಿ ಉಪವಾಸ ಅಂತ್ಯಗೊಳಿಸಲಾಗುತ್ತಿದೆ. ಈಗ ನಾವು ದೆಹಲಿಯ ಹಕ್ಕುಗಳನ್ನು ಪಡೆಯಲು ಎಲ್ಲಾ ವಿರೋಧ ಪಕ್ಷಗಳೊಂದಿಗೆ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇವೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com