
ನವದೆಹಲಿ: ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಾಡಾನೆಗಳ ಹಾವಳಿಗೆ BSF ಯೋಧನೋರ್ವ ಸಾವನ್ನಪ್ಪಿದ್ದು, ಪುಂಡಾನೆಗಳ ಅಟ್ಟಹಾಸ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹೌದು.. ಮೇಘಾಲಯ ರಾಜ್ಯದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಾಡಾನೆಗಳ ಹಿಂಡು ಗಡಿಯಲ್ಲಿನ ಸೈನಿಕರ ಮೇಲೆ ದಾಳಿ ಮಾಡಿದ್ದು ಈ ವೇಳೆ ಬಿಎಸ್ ಎಫ್ ಯೋಧ ಎಸ್ ಐ ರಾಜ್ ಬೀರ್ ಸಿಂಗ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೇಘಾಲಯದ ಪಶ್ಚಿಮ ಗಾರೋ ಬೆಟ್ಟಗಳಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿ ಕಾಡಾನೆಗಳ ಹಿಂಡು ದಾಳಿ ಮಾಡಿದ್ದು, ಈ ವೇಳೆ ಅಲ್ಲಿ ಕರ್ತವ್ಯನಿರತರಾಗಿದ್ದ ಬಿಎಸ್ ಎಫ್ ಯೋಧ ಎಸ್ ಐ ರಾಜ್ ಬೀರ್ ಸಿಂಗ್ ಮೇಲೆ ಕಾಡಾನೆಗಳು ದಾಳಿ ಮಾಡಿ ಕೊಂದು ಹಾಕಿವೆ. ಈ ಘಟನೆಯಲ್ಲಿ ಮತ್ತೋರ್ವ ಯೋಧ ಗಾಯಗೊಂಡಿದ್ದು, ಅವರನ್ನು ಸೇನಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಡಾನೆಗಳ ದಾಳಿ ಮತ್ತು ಗಡಿ ರೇಖೆ ದಾಟುತ್ತಿರುವ ವಿಡಿಯೋಗಳು ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಸುಮಾರು 12 ರಿಂದ 15 ಆನೆಗಳ ಹಿಂಡು ಗಡಿಯಲ್ಲಿನ ಗೇಟ್ ಗಳನ್ನು ಒಡೆದು ಭಾರತದ ಗಡಿಯೊಳಗೆ ನುಸುಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
Advertisement