Lalu Prasad Yadav
ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್online desk

ಇಂದಿರಾ ಗಾಂಧಿ ನಮ್ಮನ್ನು ಜೈಲಿಗೆ ಕಳಿಸಿದ್ದರು, ಆದರೆ ನಮ್ಮನ್ನು ನಿಂದಿಸಿರಲಿಲ್ಲ: ಲಾಲು ಯಾದವ್

ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
Published on

ಪಾಟ್ನ: ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಲವು ನಾಯಕರನ್ನು ಜೈಲಿಗೆ ಕಳಿಸಿದ್ದರು. ಆದರೆ ಅವರನ್ನು ಎಂದಿಗೂ ನಿಂದಿಸಿರಲಿಲ್ಲ ಎಂದು ಹೇಳಿದ್ದಾರೆ.

ಎಕ್ಸ್ ನಲ್ಲಿ ಪತ್ರಕರ್ತ ನಳಿನ್ ವರ್ಮಾ ಬರೆದಿರುವ 1975 ರಲ್ಲಿ ಸಂಘದ ಮೌನ (The Sangh Silence in 1975) ಎಂಬ ಲೇಖನ ಹಂಚಿಕೊಂಡಿರುವ ಆರ್ ಜೆಡಿ ಮುಖ್ಯಸ್ಥ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ದಾಖಲಿಸಿದ್ದಾರೆ.

ಹಿರಿಯ ಪತ್ರಕರ್ತ ನಳಿನ್ ವರ್ಮ ಲೇಖನದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದ್ದು, 1975 ದೇಶದ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದ್ದರೂ, 2024ರಲ್ಲಿ ವಿರೋಧ ಪಕ್ಷವನ್ನು ಯಾರು ಗೌರವಿಸುತ್ತಿಲ್ಲ ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ.

Lalu Prasad Yadav
'ಹೆಚ್ಚು ಮಕ್ಕಳನ್ನು ಹುಟ್ಟಿಸಿ, ಭ್ರಷ್ಟಾಚಾರಕ್ಕೆ ನೂಕಿದ್ದೀರಿ'; ಲಾಲು ಯಾದವ್‌ಗೆ ನಿತೀಶ್‌ ಕುಮಾರ್‌ ಟಾಂಗ್!; ತಿರುಗೇಟು ಕೊಟ್ಟ ತೇಜಸ್ವಿ ಯಾದವ್

"ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಹೇರಿದ ಮಿತಿಮೀರಿದ ತುರ್ತುಪರಿಸ್ಥಿತಿಯ ವಿರುದ್ಧದ ಚಳವಳಿಯನ್ನು ಮುಂದುವರಿಸಲು ಜಯಪ್ರಕಾಶ್ ನಾರಾಯಣ್ ಅವರು ರಚಿಸಿದ್ದ ಸ್ಟೀರಿಂಗ್ ಕಮಿಟಿಯ ಸಂಚಾಲಕನಾಗಿದ್ದೆ. ನಾನು 15 ಕ್ಕೂ ಹೆಚ್ಚು ಕಾಲ ಭದ್ರತಾ ಕಾಯಿದೆ (ಮಿಸಾ) ಅಡಿಯಲ್ಲಿ ಜೈಲಿನಲ್ಲಿದ್ದೆ.

ಹಲವು ತಿಂಗಳುಗಳಿಂದ ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುವ ಮೋದಿ, ಜೆಪಿ ನಡ್ಡಾ, ನನಗೆ ಮತ್ತು ನನ್ನ ಸಹೋದ್ಯೋಗಿಗಳಿಗೆ ಯಾರು ಅಂತಲೇ ತಿಳಿದಿರಲಿಲ್ಲ. ಇಂದು ಅವರು ನಮಗೆ ಸ್ವಾತಂತ್ರ್ಯದ ಮೌಲ್ಯದ ಬಗ್ಗೆ ಉಪನ್ಯಾಸ ನೀಡುತ್ತಿದ್ದಾರೆ ಎಂದು ಲಾಲು ಪ್ರಸಾದ್ ಯಾದವ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಇಂದಿರಾ ಗಾಂಧಿಯವರು ನಮ್ಮಲ್ಲಿ ಅನೇಕರನ್ನು ಕಂಬಿ ಹಿಂದೆ ಹಾಕಿದರು, ಆದರೆ ಅವರು ಎಂದಿಗೂ ನಮ್ಮನ್ನು ನಿಂದಿಸಲಿಲ್ಲ. ಅವರು ಅಥವಾ ಅವರ ಮಂತ್ರಿಗಳು ನಮ್ಮನ್ನು "ದೇಶವಿರೋಧಿ" ಅಥವಾ "ದೇಶದ್ರೋಹಿ" ಎಂದು ಕರೆಯಲಿಲ್ಲ. ನಮ್ಮ ಸಂವಿಧಾನದ ವಾಸ್ತುಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸ್ಮರಣೆಯನ್ನು ವಿಧ್ವಂಸಗೊಳಿಸಲು ಅವರು ಎಂದಿಗೂ ಅವಕಾಶ ನೀಡಲಿಲ್ಲ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com