ಅನೈತಿಕ ಸಂಬಂಧ: ಬಂಗಾಳದಲ್ಲಿ ನ್ಯಾಯದ ಹೆಸರಿನಲ್ಲಿ ದಂಪತಿಗೆ TMC ನಾಯಕನಿಂದ ಮಾರಣಾಂತಿಕ ಹಲ್ಲೆ, ವಿಡಿಯೋ

ಉತ್ತರ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾದಲ್ಲಿ ವಾರಾಂತ್ಯದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಭಾನುವಾರ ಪ್ರಕರಣ ದಾಖಲಿಸಿಕೊಂಡ ಬಂಗಾಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ದಂಪತಿಗೆ ಥಳಿತ
ದಂಪತಿಗೆ ಥಳಿತPTI
Updated on

ಪಶ್ಚಿಮ ಬಂಗಾಳ: ಬಂಗಾಳದಿಂದ ಭಯಾನಕ ವಿಡಿಯೋವೊಂದು ಹೊರಬಿದ್ದಿದ್ದು, ಇದರಲ್ಲಿ ವ್ಯಕ್ತಿಯೊಬ್ಬ ಮಹಿಳೆ ಸೇರಿದಂತೆ ಇಬ್ಬರನ್ನು ಸಾರ್ವಜನಿಕರ ಸಮ್ಮುಖದಲ್ಲೇ ಮಾರಣಾಂತಿಕವಾಗಿ ಥಳಿಸಿದ್ದು ಇದನ್ನು ಜನರ ಗುಂಪು ಮೌನವಾಗಿ ವೀಕ್ಷಿಸುತ್ತಿದ್ದಾರೆ.

ಉತ್ತರ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾದಲ್ಲಿ ವಾರಾಂತ್ಯದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಭಾನುವಾರ ಪ್ರಕರಣ ದಾಖಲಿಸಿಕೊಂಡ ಬಂಗಾಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ದಂಪತಿಗಳು ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ 'ಸಲಿಶಿ ಸಭಾ' (ಕಾಂಗರೂ ಕೋರ್ಟ್) ತೀರ್ಪಿನ ನಂತರ ಈ ಕ್ರೂರ ದಾಳಿ ನಡೆದಿದೆ. ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಕ್ಲಿಪ್ ವೈರಲ್ ಆಗಿದ್ದು ಇದನ್ನು ಪರಿಶೀಲಿಸಿದ ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಇಸ್ಲಾಂಪುರ ಪೊಲೀಸ್ ವರಿಷ್ಠಾಧಿಕಾರಿ ಜೋಬಿ ಥಾಮಸ್ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಹಂಚಿಕೊಂಡ ದೃಶ್ಯಗಳಲ್ಲಿ, ಒಬ್ಬ ವ್ಯಕ್ತಿ ಗುಂಪಿನ ಮುಂದೆ ಮಹಿಳೆಯನ್ನು ಲಾಠಿಯಿಂದ ಪದೇ ಪದೇ ಥಳಿಸುತ್ತಿರುವುದನ್ನು ಕಾಣಬಹುದು. ಅವಳು ನೋವಿನಿಂದ ಕಿರುಚುತ್ತಾಳೆ, ಪ್ರೇಕ್ಷಕರು ಮೌನವಾಗಿ ನೋಡುತ್ತಿದ್ದಾರೆ. ಇದಾದ ನಂತರ ಆ ವ್ಯಕ್ತಿ ಮಹಿಳೆಯ ಪಕ್ಕದಲ್ಲಿ ಮಲಗಿದ್ದ ವ್ಯಕ್ತಿಗೆ ಥಳಿಸಲು ಆರಂಭಿಸಿದ್ದಾನೆ. ಒಂದು ಹಂತದಲ್ಲಿ ಆ ವ್ಯಕ್ತಿ ಮಹಿಳೆಯ ಕೂದಲು ಹಿಡಿದು ಒದ್ದಿದ್ದಾನೆ.

ದಂಪತಿಗೆ ಥಳಿತ
ಉತ್ತರ ಪ್ರದೇಶ: ಗುಂಪೊಂದರಿಂದ ಹತ್ಯೆಗೀಡಾದ ಮುಸ್ಲಿಂ ವ್ಯಕ್ತಿ ವಿರುದ್ಧ ಡಕಾಯಿತಿ ಪ್ರಕರಣ ದಾಖಲಿಸಿದ ಪೊಲೀಸರು

ವೀಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಬಿಜೆಪಿ, ಆಡಳಿತಾರೂಢ ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತು. ಮಮತಾ ಬ್ಯಾನರ್ಜಿ ಅವರು ಈ ಅಮಾನವೀಯ ವಿರುದ್ಧ ವರ್ತಿಸುತ್ತಾರೆಯೇ ಅಥವಾ ಶೇಖ್ ಷಹಜಹಾನ್ ಅವರ ಪರವಾಗಿ ನಿಂತ ರೀತಿಯಲ್ಲಿ ಆತನನ್ನು ರಕ್ಷಿಸುತ್ತಾರೆಯೇ? ಎಂದು ವಾಗ್ದಾಳಿ ನಡೆಸಿದೆ. ಆಡಳಿತಾರೂಢ ತೃಣಮೂಲ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿಪಿಎಂ ನಾಯಕರು ಸ್ಥಳೀಯ ಟಿಎಂಸಿ ಪ್ರಬಲ ನಾಯಕ ತಾಜೆಮುಲ್ ಸ್ಥಳೀಯ ವಿವಾದಗಳಲ್ಲಿ 'ತ್ವರಿತ ನ್ಯಾಯ' ನೀಡುವಲ್ಲಿ ಹೆಸರವಾಸಿಯಾಗಿದ್ದಾನೆ ಎಂದು ಆರೋಪಿಸಿದರು. ಆದರೆ, ಆರೋಪಿಗೆ ಪಕ್ಷದಲ್ಲಿ ಯಾವುದೇ ಹುದ್ದೆ ಇಲ್ಲ ಎಂದು ಟಿಎಂಸಿ ಪ್ರತಿಕ್ರಿಯಿಸಿದೆ.

ಟಿಎಂಸಿ ವಕ್ತಾರ ಶಂತನು ಸೇನ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಆದರೆ ಎಡರಂಗದ ಆಡಳಿತದಲ್ಲಿಯೂ ಇಂತಹ ಕಾಂಗರೂ ನ್ಯಾಯಾಲಯಗಳು ಸಾಮಾನ್ಯವಾಗಿದ್ದವು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com