14 ಜನರ ಸಾವಿಗೆ ಕಾರಣವಾದ 2023ರ ಆಂಧ್ರ ರೈಲು ಅಪಘಾತದ ವೇಳೆ ಚಾಲಕ ಮೊಬೈಲ್ ನಲ್ಲಿ ಕ್ರಿಕೆಟ್ ನೋಡುತ್ತಿದ್ದ!

ಅಕ್ಟೋಬರ್ 29, 2023 ರಂದು 14 ಪ್ರಯಾಣಿಕರ ಸಾವಿಗೆ ಕಾರಣವಾದ ಎರಡು ಪ್ಯಾಸೆಂಜರ್ ರೈಲುಗಳ ಪೈಕಿ ಒಂದರ ಚಾಲಕ ಮತ್ತು ಸಹಾಯಕ ಚಾಲಕ ಫೋನ್‌ನಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದರು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಹೇಳಿದ್ದಾರೆ.
2023ರ ಆಂಧ್ರ ರೈಲು ಅಪಘಾತ
2023ರ ಆಂಧ್ರ ರೈಲು ಅಪಘಾತ

ನವದೆಹಲಿ: ಅಕ್ಟೋಬರ್ 29, 2023 ರಂದು 14 ಪ್ರಯಾಣಿಕರ ಸಾವಿಗೆ ಕಾರಣವಾದ ಎರಡು ಪ್ಯಾಸೆಂಜರ್ ರೈಲುಗಳ ಪೈಕಿ ಒಂದರ ಚಾಲಕ ಮತ್ತು ಸಹಾಯಕ ಚಾಲಕ ಫೋನ್‌ನಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದರು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಹೇಳಿದ್ದಾರೆ.

ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ 2023 ಅಕ್ಟೋಬರ್‌ 29ರಂದು ನಡೆದಿದ್ದ ರೈಲು ಅಪಘಾತದ ವೇಳೆ ರೈಲೊಂದರ ಚಾಲಕ ಮತ್ತು ಸಹ ಚಾಲಕ ಮೊಬೈಲ್‌ ಫೋನ್‌ನಲ್ಲಿ ಕ್ರಿಕೆಟ್‌ ಪಂದ್ಯ ವೀಕ್ಷಿಸುತ್ತಿದ್ದರು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಶನಿವಾರ ತಿಳಿಸಿದ್ದಾರೆ.

2023ರ ಆಂಧ್ರ ರೈಲು ಅಪಘಾತ
ಆಂಧ್ರ ಪ್ರದೇಶ ರೈಲು ದುರಂತ: ಮೃತರ ಸಂಖ್ಯೆ 13ಕ್ಕೆ ಏರಿಕೆ, ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಈ ಅಪಘಾತದ ಬಳಿಕ ಪ್ರಯಾಣಿಕರ ಸುರಕ್ಷತೆಗೆ ಹೊಸ ವ್ಯವಸ್ಥೆಯನ್ನು ಅಳವಡಿಸಿದ್ದು, ಇದರಿಂದ ಚಾಲಕ ಮತ್ತು ಸಹಾಯಕ ಚಾಲಕ ರೈಲಿನ ಚಲನೆಯ ಬಗ್ಗೆ ನಿಗಾವಹಿಸುತ್ತಿದ್ದಾರಾ ಎಂಬುದನ್ನು ತಿಳಿಯಲು ಸಾಧ್ಯವಿದೆ ಎಂದರು.

"ನಾವು ಸುರಕ್ಷತೆಯತ್ತ ಗಮನ ಹರಿಸುವುದನ್ನು ಮುಂದುವರಿಸುತ್ತೇವೆ. ಪ್ರತಿ ಘಟನೆಯ ಮೂಲ ಕಾರಣವನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತೇವೆ ಮತ್ತು ಅದು ಪುನರಾವರ್ತನೆಯಾಗದಂತೆ ನಾವು ಪರಿಹಾರವನ್ನು ಕಂಡುಕೊಳ್ಳುತ್ತೇವೆ" ಎಂದು ಅವರು ಹೇಳಿದರು.

ವಿಶಾಖಪಟ್ಟಣ–ರಾಯಗಢ ಪ್ರಯಾಣಿಕ ರೈಲಿಗೆ ವಿಶಾಖಪಟ್ಟಣ–ಪಲಾಸ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 14ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು. ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಕಂಟಕಪಲ್ಲಿಯಲ್ಲಿ ಹೌರಾ-ಚೆನ್ನೈ ಮಾರ್ಗದಲ್ಲಿ ಅಂದು ಸಂಜೆ 7 ಗಂಟೆಗೆ ರಾಯಗಡ ಪ್ಯಾಸೆಂಜರ್ ರೈಲು ವಿಶಾಖಪಟ್ಟಣಂ ಪಲಾಸ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ 14 ಪ್ರಯಾಣಿಕರು ಸಾವನ್ನಪ್ಪಿ, 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com