ಹಿಮಾಚಲ ರಾಜಕೀಯ ಬಿಕ್ಕಟ್ಟು: 9 ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದ ಅನರ್ಹ ಕಾಂಗ್ರೆಸ್ ಶಾಸಕ

ಕಾಂಗ್ರೆಸ್ ನ ಕನಿಷ್ಠ ಒಂಬತ್ತು ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅನರ್ಹಗೊಂಡಿರುವ ಹಿಮಾಚಲ ಪ್ರದೇಶದ ಆರು ಕಾಂಗ್ರೆಸ್ ಶಾಸಕರಲ್ಲಿ ಒಬ್ಬರಾದ ರಾಜಿಂದರ್ ರಾಣಾ ಅವರು ಶನಿವಾರ ಹೇಳಿದ್ದಾರೆ.
ರಾಜಿಂದರ್ ರಾಣಾ
ರಾಜಿಂದರ್ ರಾಣಾ

ಶಿಮ್ಲಾ: ಕಾಂಗ್ರೆಸ್ ನ ಕನಿಷ್ಠ ಒಂಬತ್ತು ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ವಿಧಾನಸಭೆಯಿಂದ ಅನರ್ಹಗೊಂಡಿರುವ ಹಿಮಾಚಲ ಪ್ರದೇಶದ ಆರು ಕಾಂಗ್ರೆಸ್ ಶಾಸಕರಲ್ಲಿ ಒಬ್ಬರಾದ ರಾಜಿಂದರ್ ರಾಣಾ ಅವರು ಶನಿವಾರ ಹೇಳಿದ್ದಾರೆ.

ಕಾಂಗ್ರೆಸ್ ನ ಕೆಲವು ಬಂಡಾಯ ಶಾಸಕರು ವಾಪಸ್ ಬರಲು ಬಯಸಿದ್ದಾರೆ ಎಂಬ ಹಿಮಾಚಲ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ಹೇಳಿಕೆಯನ್ನು ತಳ್ಳಿಹಾಕಿದ ರಾಣಾ, ಸುಖು ಅವರು ತಮ್ಮ ಹೇಳಿಕೆಗಳಿಂದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

"ಯಾರೂ ಹಿಂತಿರುಗಲು ಬಯಸುವುದಿಲ್ಲ. ಮತ್ತೊಂದೆಡೆ, ಕನಿಷ್ಠ ಒಂಬತ್ತು ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ" ಎಂದು ರಾಣಾ ಪಿಟಿಐಗೆ ತಿಳಿಸಿದ್ದಾರೆ.

ರಾಜಿಂದರ್ ರಾಣಾ
ಹಿಮಾಚಲ ಪ್ರದೇಶ: ಬಂಡಾಯ ಶಾಸಕರ ಜೊತೆಗೆ ಮಾತುಕತೆ ಬಳಿಕ ಖರ್ಗೆ ಭೇಟಿಯಾಗಲಿರುವ ವಿಕ್ರಮಾದಿತ್ಯ!

ಮತ್ತೊಂದೆಡೆ, "ಕಾಂಗ್ರೆಸ್‌ನ ಶೇಕಡಾ 80 ರಷ್ಟು ಶಾಸಕರು ಒಟ್ಟಿಗೆ ಇದ್ದಾರೆ" ಮತ್ತು ಉಳಿದವರು "ಕ್ಷುಲ್ಲಕ ಕಾರಣಕ್ಕೆ" ಅತೃಪ್ತರಾಗಿದ್ದಾರೆ. ಅನರ್ಹಗೊಂಡಿರುವ ಆರು ಶಾಸಕರ ಜತೆ ಮಾತುಕತೆ ನಡೆಸಿದ್ದು, ಸಮನ್ವಯ ಸಮಿತಿ ರಚನೆಯಾದ ಬಳಿಕ ಪರಿಸ್ಥಿತಿ ಸುಧಾರಿಸಲಿದೆ ಎಂದು ಸಿಎಂ ಸುಖು ಹೇಳಿದ್ದಾರೆ.

ರಾಜ್ಯದಿಂದ ಏಕೈಕ ಸ್ಥಾನಕ್ಕೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನದ ಕುರಿತು ಪ್ರತಿಕ್ರಿಯಿಸಿದ ರಾಣಾ, "ಹಿಮಾಚಲ ಪ್ರದೇಶ ಮತ್ತು ಅದರ ಜನರ ಗೌರವ ಎತ್ತಿಹಿಡಿಯಲು ನಾವು ಅಡ್ಡ ಮತದಾನ ಮಾಡಿದ್ದೇವೆ" ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com