ಲಾಲು ಹೇಳಿಕೆಗೆ ಕೌಂಟರ್: ಬಿಜೆಪಿಯಿಂದ ಮೋದಿ ಕಾ ಪರಿವಾರ್ ಅಭಿಯಾನ!

ಪ್ರಧಾನಿ ಮೋದಿಗೆ ಕುಟುಂಬ ಇಲ್ಲ ಎಂಬ ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಹೇಳಿಕೆಗೆ ಬಿಜೆಪಿ ಭರ್ಜರಿ ಕೌಂಟರ್ ನೀಡಿದೆ.
ಮೋದಿ ಕಾ ಪರಿವಾರ್ ಅಭಿಯಾನ (ಸಂಗ್ರಹ ಚಿತ್ರ)
ಮೋದಿ ಕಾ ಪರಿವಾರ್ ಅಭಿಯಾನ (ಸಂಗ್ರಹ ಚಿತ್ರ)online desk
Updated on

ನವದೆಹಲಿ: ಪ್ರಧಾನಿ ಮೋದಿಗೆ ಕುಟುಂಬ ಇಲ್ಲ ಎಂಬ ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಹೇಳಿಕೆಗೆ ಬಿಜೆಪಿ ಭರ್ಜರಿ ಕೌಂಟರ್ ನೀಡಿದೆ. ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆಪಿ ನಡ್ದಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೆಸರಿನ ಪಕ್ಕ ಮೋದಿ ಕಾ ಪರಿವಾರ್ (ಮೋದಿ ಕುಟುಂಬದವರು) ಎಂದು ಬರೆದಿದ್ದಾರೆ.

ಇದನ್ನು ಮೋದಿ ಕಾ ಪರಿವಾರ್ ಅಭಿಯಾನವನ್ನಾಗಿ ಮಾಡಲಾಗಿದ್ದು, ದೇಶದ ಬಹುತೇಕ ಬಿಜೆಪಿ ನಾಯಕರು ಅಭಿಯಾನಕ್ಕೆ ಕೈ ಜೋಡಿಸಿದ್ದು ತಾವೂ ಸಹ ಮೋದಿ ಪರಿವಾರದವರು ಎಂದು ಬರೆದುಕೊಂಡಿದ್ದಾರೆ. ಲಾಲೂ ಆರೋಪಕ್ಕೆ ತೆಲಂಗಾಣದ ಆದಿಲಾಬಾದ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತಿರುಗೇಟು ನೀಡಿದ್ದ ಪ್ರಧಾನಿ ಮೋದಿ, ದೇಶದಲ್ಲಿನ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಮೋದಿ ಕಾ ಪರಿವಾರ್ ಅಭಿಯಾನ (ಸಂಗ್ರಹ ಚಿತ್ರ)
ತಾಯಿ ಸತ್ತಾಗ ತಲೆ ಬೋಳಿಸಿಕೊಳ್ಳದ ಪ್ರಧಾನಿ ಮೋದಿ ನಿಜವಾದ ಹಿಂದೂ ಅಲ್ಲ- ಲಾಲು ಪ್ರಸಾದ್ ಯಾದವ್

ಕುಟುಂಬ ರಾಜಕಾರಣ ನಡೆಸುತ್ತಿರುವವರಿಗೆ ಹಲವು ಮುಖಗಳಿರಬಹುದು ಆದರೆ ಸುಳ್ಳು ಮತ್ತು ಲೂಟಿ ಮಾಡುವುದು ಕುಟುಂಬ ರಾಜಕಾರಣದಲ್ಲಿ ತೊಡಗಿರುವವರಲ್ಲಿ ಕಾಣುವ ಸಾಮಾನ್ಯ ಅಂಶ ಎಂದು ಮೋದಿ ಗುಡುಗಿದ್ದರು. ಇದಷ್ಟೇ ಅಲ್ಲದೇ ದೇಶದ 140 ಕೋಟಿ ಮಂದಿ ತಮ್ಮ ಪರಿವಾರದವರೆಂದು ಮೋದಿ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com