ತಾಂಜೇನಿಯಾಗೆ 30,000 ಟನ್ ಅಕ್ಕಿ ರಫ್ತು ಮಾಡಲು ಕೇಂದ್ರ ಸರ್ಕಾರ ಅಸ್ತು

ಕೇಂದ್ರ ಸರ್ಕಾರವು 30,000 ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ತಾಂಜೇನಿಯಾಕ್ಕೆ ಮತ್ತು 80,000 ಟನ್ ನುಚ್ಚಕ್ಕಿಯನ್ನು ಜಿಬೌಟಿ ಮತ್ತು ಗಿನಿಯಾ ಬಿಸ್ಸೌ ದೇಶಗಳಿಗೆ ರಫ್ತು ಮಾಡಲು ಅನುಮತಿ ನೀಡಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರವು 30,000 ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ತಾಂಜೇನಿಯಾಕ್ಕೆ ಮತ್ತು 80,000 ಟನ್ ನುಚ್ಚಕ್ಕಿಯನ್ನು ಜಿಬೌಟಿ ಮತ್ತು ಗಿನಿಯಾ ಬಿಸ್ಸೌ ದೇಶಗಳಿಗೆ ರಫ್ತು ಮಾಡಲು ಅನುಮತಿ ನೀಡಿದೆ.

ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ (ಎನ್‌ಸಿಇಎಲ್) ಮೂಲಕ ರಫ್ತಿಗೆ ಅನುಮತಿ ನೀಡಲಾಗಿದೆ ಎಂದು ವಿದೇಶಿ ವ್ಯಾಪಾರಗಳ ಮಹಾನಿರ್ದೇಶನಾಲಯವು (ಡಿಜಿಎಫ್‌ಟಿ)ಅಧಿಸೂಚನೆಯಲ್ಲಿ ತಿಳಿಸಿದೆ.

ದೇಶದಲ್ಲಿ ಅಕ್ಕಿಯ ಪೂರೈಕೆಯನ್ನು ಹೆಚ್ಚಿಸಲು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಏರಿಕೆಯನ್ನು ನಿಯಂತ್ರಣದಲ್ಲಿಡುವ ಸಲುವಾಗಿ 2023ರ ಜುಲೈ 20 ರಿಂದ ಬಾಸ್ಮತಿ ಹೊರತುಪಡಿಸಿ ಇತರ ಬಗೆಯ ಬಿಳಿ ಅಕ್ಕಿಯ ರಫ್ತನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಆದಾಗ್ಯೂ, ವಿನಂತಿ ಮೇರೆಗೆ ಕೆಲವು ದೇಶಗಳಿಗೆ ತಮ್ಮ ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸಲು ಸರ್ಕಾರವು ರಫ್ತಿಗೆ ಅನುಮತಿ ನೀಡಿತ್ತು.

ಪ್ರಾತಿನಿಧಿಕ ಚಿತ್ರ
ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ನುಚ್ಚಕ್ಕಿ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ!

ತಾಂಜೇನಿಯಾ ಪೂರ್ವ ಆಫ್ರಿಕಾದ ರಾಷ್ಟ್ರವಾಗಿದ್ದು, ಜಿಬೌಟಿ ಆಫ್ರಿಕಾದ ಖಂಡದ ಈಶಾನ್ಯ ಕರಾವಳಿಯಲ್ಲಿದೆ. ಗಿನಿಯಾ-ಬಿಸ್ಸಾವು ಪಶ್ಚಿಮ ಆಫ್ರಿಕಾದ ಉಷ್ಣವಲಯದ ದೇಶವಾಗಿದೆ.

ಅಧಿಸೂಚನೆಯ ಪ್ರಕಾರ, 30,000 ಟನ್ ನುಚ್ಚು ಅಕ್ಕಿಯನ್ನು ಜಿಬೌಟಿಗೆ ಮತ್ತು 50,000 ಟನ್ ಅನ್ನು ಗಿನಿಯಾ-ಬಿಸ್ಸೌಗೆ ರಫ್ತು ಮಾಡಲು ಸರ್ಕಾರ ಅನುಮತಿ ನೀಡಿದೆ.

ಪ್ರಾತಿನಿಧಿಕ ಚಿತ್ರ
ಭಾರತದಿಂದ ಅಕ್ಕಿ ರಫ್ತು ಕಡಿತ: ಅಮೆರಿಕದಲ್ಲಿ ತಲ್ಲಣ, ಮಾಲ್ ಗಳಿಗೆ ಮುಗಿಬೀಳುತ್ತಿರುವ ಅನಿವಾಸಿ ಭಾರತೀಯರು, ನಿಜಾಂಶವೇನು?

ಭಾರತವು ಈ ಹಿಂದೆ ನೇಪಾಳ, ಕ್ಯಾಮರೂನ್, ಕೋಟ್ ಡಿ ಐವೊರ್, ಗಿನಿಯಾ, ಮಲೇಷ್ಯಾ, ಫಿಲಿಪೈನ್ಸ್ ಮತ್ತು ಸೀಶೆಲ್ಸ್‌ನಂತಹ ದೇಶಗಳಿಗೆ ರಫ್ತುಗಳಿಗೆ ಅನುಮತಿ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com