ಲೋಕಸಭೆ ಚುನಾವಣೆಗೂ ಮುನ್ನ ಉಜ್ವಲ ಗ್ಯಾಸ್ ಸಬ್ಸಿಡಿ ಒಂದು ವರ್ಷ ವಿಸ್ತರಿಸಿದ ಕೇಂದ್ರ

ಉಜ್ವಲ ಯೋಜನೆಯಡಿ ಬಡ ಮಹಿಳೆಯರಿಗೆ ಪ್ರತಿ ಎಲ್‌ಪಿಜಿ ಸಿಲಿಂಡರ್ ಗೆ ನೀಡುತ್ತಿದ್ದ 300 ರೂ. ಸಬ್ಸಿಡಿಯನ್ನು ಮುಂದಿನ ಆರ್ಥಿಕ ವರ್ಷದವರೆಗೆ ವಿಸ್ತರಿಸುವುದಾಗಿ ಗುರುವಾರ ಪ್ರಕಟಿಸಿದೆ.
ಸಬ್ಸಿಡಿ ರಹಿತ ಗ್ಯಾಸ್ ದರ ಏರಿಕೆ (ಸಂಗ್ರಹ ಚಿತ್ರ)
ಸಬ್ಸಿಡಿ ರಹಿತ ಗ್ಯಾಸ್ ದರ ಏರಿಕೆ (ಸಂಗ್ರಹ ಚಿತ್ರ)

ನವದೆಹಲಿ: ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆಗೆ ಮುನ್ನ, ಉಜ್ವಲ ಯೋಜನೆಯಡಿ ಬಡ ಮಹಿಳೆಯರಿಗೆ ಪ್ರತಿ ಎಲ್‌ಪಿಜಿ ಸಿಲಿಂಡರ್ ಗೆ ನೀಡುತ್ತಿದ್ದ 300 ರೂ. ಸಬ್ಸಿಡಿಯನ್ನು ಮುಂದಿನ ಆರ್ಥಿಕ ವರ್ಷದವರೆಗೆ ವಿಸ್ತರಿಸುವುದಾಗಿ ಗುರುವಾರ ಪ್ರಕಟಿಸಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ, ಪ್ರತಿ ವರ್ಷಕ್ಕೆ 12 ಸಿಲಿಂಡರ್ ಗಳಿಗೆ ನೀಡಲಾಗುತ್ತಿದ್ದ 200 ರೂ. ಸಬ್ಸಿಡಿಯನ್ನು 300 ರೂ.ಗೆ ಹೆಚ್ಚಿಸಿತ್ತು. ಇದರಿಂದ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ 14.2 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್‌ 600 ರೂ.ಗೆ ಲಭ್ಯವಾಗುತ್ತಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಉಜ್ವಲ ಯೋಜನೆಯಡಿ ಪ್ರತಿ ಸಿಲಿಂಡರ್‌ಗೆ 300 ರೂಪಾಯಿ ಸಬ್ಸಿಡಿ ನೀಡಲಾಗುತ್ತಿದ್ದು, ಇದು ಮಾರ್ಚ್ 31 ರಂದು ಕೊನೆಗೊಳ್ಳುತ್ತದೆ.ಸಬ್ಸಿಡಿ

ಸಬ್ಸಿಡಿ ರಹಿತ ಗ್ಯಾಸ್ ದರ ಏರಿಕೆ (ಸಂಗ್ರಹ ಚಿತ್ರ)
ಉಜ್ವಲ ಗ್ರಾಹಕರ ಎಲ್‌ಪಿಜಿ ಸಬ್ಸಿಡಿ ಮೊತ್ತ 200 ರೂ. ನಿಂದ 300 ರೂ.ಗೆ ಹೆಚ್ಚಿಸಿದ ಕೇಂದ್ರ

ಆದರೆ ಈ ಸಬ್ಸಿಡಿಯನ್ನು 2024-25 ರವರೆಗೆ ವಿಸ್ತರಿಸಲು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ(CCEA) ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಇಂದು ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಕ್ರಮದಿಂದ ಸುಮಾರು 10 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದ್ದು, ಸರ್ಕಾರಕ್ಕೆ ವಾರ್ಷಿಕ 12,000 ಕೋಟಿ ರೂ. ವೆಚ್ಚವಾಗಲಿದೆ.

ಏಪ್ರಿಲ್-ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೇ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಬಂಪರ್ ಗಿಫ್ಟ್ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com