ಲೋಕಸಭೆ ಚುನಾವಣೆ: ಬಿಜೆಪಿಯ ಸೀಟು ಹಂಚಿಕೆ ಪ್ಲಾನ್ ಗೆ ಮಹಾರಾಷ್ಟ್ರ ಮಿತ್ರಪಕ್ಷಗಳ ಬೇಸರ!

ಸೂತ್ರದ ಪ್ರಕಾರ, ರಾಜ್ಯದ ಒಟ್ಟು 48 ಸ್ಥಾನಗಳ ಪೈಕಿ 36 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು, ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಕ್ರಮವಾಗಿ ಎಂಟು ಮತ್ತು ನಾಲ್ಕು ಸ್ಥಾನಗಳಿಂದ ಕಣಕ್ಕೆ ಇಳಿಯಲಿವೆ.
ಅಮಿತ್ ಶಾ
ಅಮಿತ್ ಶಾ

ಮುಂಬಯಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಧ್ಯಪ್ರವೇಶದ ನಂತರ, ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿಯು ತನ್ನ ಸೀಟು ಹಂಚಿಕೆ ವಿವಾದವನ್ನು ಪರಿಹರಿಸಿದೆ ಮತ್ತು ಮುಂಬರುವ ಲೋಕಸಭೆ ಚುನಾವಣೆಗೆ 36:8:4 ಸೂತ್ರವನ್ನು ತಾತ್ಕಾಲಿಕವಾಗಿ ನಿರ್ಧರಿಸಿದೆ.

ಸೂತ್ರದ ಪ್ರಕಾರ, ರಾಜ್ಯದ ಒಟ್ಟು 48 ಸ್ಥಾನಗಳ ಪೈಕಿ 36 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು, ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಕ್ರಮವಾಗಿ ಎಂಟು ಮತ್ತು ನಾಲ್ಕು ಸ್ಥಾನಗಳಿಂದ ಕಣಕ್ಕೆ ಇಳಿಯಲಿವೆ. ಆದರೆ, ಬಿಜೆಪಿಯ ಎರಡೂ ಮಿತ್ರಪಕ್ಷಗಳು ತಮ್ಮ ಅತೃಪ್ತಿ ವ್ಯಕ್ತಪಡಿಸಿವೆ.

ಅಕೋಲಾ, ಜಲಗಾಂವ್ ಮತ್ತು ಸಂಭಾಜಿ ನಗರದಲ್ಲಿ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ನಂತರ, ಅಮಿತ್ ಶಾ ಮಂಗಳವಾರ ರಾತ್ರಿ ಮುಂಬೈಗೆ ತೆರಳಿದರು. ಮುಖ್ಯಮಂತ್ರಿ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರೊಂದಿಗೆ ಚರ್ಚೆ ನಡೆಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಉದ್ಧವ್ ಠಾಕ್ರೆ ಅವರನ್ನು ತೊರೆದು ನಮ್ಮೊಂದಿಗೆ ಬಂದಿರುವ 13 ಹಾಲಿ ಲೋಕಸಭಾ ಸದಸ್ಯರಿದ್ದಾರೆ, ಹೀಗಾಗಿ ನಾವು ಕನಿಷ್ಠ 13 ಸ್ಥಾನಗಳನ್ನು ಬಯಸಿದ್ದೇವೆ ಎಂದು ಶಿಂಧೆ ಹೇಳಿದರು. ಅಜಿತ್ ಪವಾರ್ ಒಂಬತ್ತು ಸ್ಥಾನಗಳನ್ನು ಕೋರಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸಿದ ನಾಯಕರೊಬ್ಬರು ತಿಳಿಸಿದ್ದಾರೆ. ಆದರೆ ಬಹು ಸಮೀಕ್ಷೆಯ ವರದಿಗಳು ಬೇರೆ ರೀತಿಯಲ್ಲಿ ಸೂಚಿಸುತ್ತಿವೆ ಎಂದು ಅಮಿತ್ ಶಾ ಅವರಿಗೆ ಹೇಳಿದರು.

ಅಮಿತ್ ಶಾ
ಮಹಾರಾಷ್ಟ್ರ: ನಾಂದೇಡ್‌ನಲ್ಲಿ ಅಶೋಕ್ ಚವಾಣ್ ಸಮ್ಮುಖದಲ್ಲಿ 55 ಕಾಂಗ್ರೆಸ್ ಮಾಜಿ ಶಾಸಕರು ಬಿಜೆಪಿ ಸೇರ್ಪಡೆ

ಮಿತ್ರಪಕ್ಷಗಳ ವಿರುದ್ಧ ಸ್ಪಷ್ಟವಾದ ಸಾರ್ವಜನಿಕ ಕೋಪವಿದೆ ಮತ್ತು ಅವರ ಅಭ್ಯರ್ಥಿಗಳು ಗೆಲ್ಲುವ ಅವಕಾಶಗಳು ಬಹಳ ಕಡಿಮೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಲ್ಲಿ ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಉತ್ತಮ.

ಬಿಜೆಪಿಗೆ ಲೋಕಸಭೆಯಲ್ಲಿ ಸಾಧ್ಯವಾದಷ್ಟು ಸ್ಥಾನಗಳನ್ನು ಗೆಲ್ಲುವುದು ಮುಖ್ಯವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಒಪ್ಪಂದ ಮಾಡಿಕೊಳ್ಳುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com