ರಾಜಸ್ಥಾನ: ಶಿವರಾತ್ರಿ ಮೆರವಣಿಗೆ ವೇಳೆ ವಿದ್ಯುತ್ ತಗುಲಿ 14 ಮಕ್ಕಳಿಗೆ ಸುಟ್ಟ ಗಾಯ

ರಾಜಸ್ಥಾನದ ಕೋಟಾದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಶುಕ್ರವಾರ ನಡೆದ ‘ಶಿವ ಭಾರತ್’ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹದಿನಾಲ್ಕು ಮಕ್ಕಳಿಗೆ ವಿದ್ಯುತ್ ತಗುಲಿದೆ.
ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸುತ್ತಿರುವುದು
ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸುತ್ತಿರುವುದು

ಕೋಟಾ: ರಾಜಸ್ಥಾನದ ಕೋಟಾದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಶುಕ್ರವಾರ ನಡೆದ ‘ಶಿವ ಭಾರತ್’ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹದಿನಾಲ್ಕು ಮಕ್ಕಳಿಗೆ ವಿದ್ಯುತ್ ತಗುಲಿದೆ.

ಕುನ್ಹಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಕಟೂರಾ ಪ್ರದೇಶದಲ್ಲಿ 10 ರಿಂದ 16 ವರ್ಷದ ಮಕ್ಕಳಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿದೆ. ಘಟನೆಯಲ್ಲಿ 14 ಮಕ್ಕಳಿಗೆ ಸುಟ್ಟಗಾಯಳಾಗಿವೆ.

ಇಬ್ಬರು ಮಕ್ಕಳಿಗೆ ಶೇ. 100 ಮತ್ತು ಶೇ. 50 ರಷ್ಟು ಸುಟ್ಟ ಗಾಯಗಳಾಗಿದ್ದು, ಉಳಿದ 12 ಮಕ್ಕಳಿಗೆ ಶೇಕಡಾ 50 ಕ್ಕಿಂತ ಕಡಿಮೆ ಸುಟ್ಟ ಗಾಯಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸುತ್ತಿರುವುದು
ಧಾರವಾಡ: ಕ್ರಿಕೆಟ್ ಆಡುವಾಗ ವಿದ್ಯುತ್ ತಂತಿ ತಗುಲಿ 10ನೇ ತರಗತಿ ವಿದ್ಯಾರ್ಥಿ ಸಾವು!

ಎಲ್ಲಾ ಗಾಯಾಳುಗಳನ್ನು ಕೋಟಾದ ಎಂಬಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇಂದು ಬೆಳಗ್ಗೆ 11:30 ಸುಮಾರಿಗೆ 'ಶಿವ ಭಾರತ್' ಮೆರವಣಿಗೆಯು ಕಾಳಿಬಸ್ತಿ ಮೂಲಕ ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಮೆರವಣಿಗೆಯಲ್ಲಿದ್ದ ಬಾಲಕನೊಬ್ಬ 22 ಅಡಿ ಎತ್ತರದ ಬಿದಿರಿನ ಕೋಲಿನ ಮೇಲೆ ಧ್ವಜ ಹಿಡಿದುಕೊಂಡು ತೆರಳುತ್ತಿದ್ದಾಗ ಅದು ಹೈ-ಟೆನ್ಷನ್ ಲೈನ್ ಗೆ ತಗುಲಿದೆ ಎಂದು ಕೋಟಾ ಸಿಟಿ ಎಸ್ಪಿ ಅಮೃತಾ ದುಹಾನ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com