ಸಿಬ್ಬಂದಿ ಜೊತೆ ಅಸಭ್ಯ ವರ್ತನೆ: ವಿಮಾನದಿಂದ ರೆಲಿಗೇರ್‌ ಮುಖ್ಯಸ್ಥೆ ರಶ್ಮಿ ಸಲೂಜಾ ಕೆಳಗಿಸಿದ ಏರ್‌ ಇಂಡಿಯಾ

ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇರೆಗೆ ರೆಲಿಗೇರ್‌ ಎಂಟರ್‌‍ಪ್ರೈಸಸ್‌ನ ಮುಖ್ಯಸ್ಥೆ ರಶ್ಮಿ ಸಲೂಜಾ ಅವರನ್ನು ಏರ್‌ ಇಂಡಿಯಾ ವಿಮಾನದಿಂದ ಕೆಳಗಿಳಿಸಲಾಗಿದೆ,
ರಶ್ಮಿ ಸಲೂಜಾ
ರಶ್ಮಿ ಸಲೂಜಾ

ನವದೆಹಲಿ: ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇರೆಗೆ ರೆಲಿಗೇರ್‌ ಎಂಟರ್‌‍ಪ್ರೈಸಸ್‌ನ ಮುಖ್ಯಸ್ಥೆ ರಶ್ಮಿ ಸಲೂಜಾ ಅವರನ್ನು ಏರ್‌ ಇಂಡಿಯಾ ವಿಮಾನದಿಂದ ಕೆಳಗಿಳಿಸಲಾಗಿದೆ, ಮತ್ತು ಲಿಖಿತ ಭರವಸೆ ನೀಡಿದ ನಂತರ ಬೇರೊಂದು ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

ಮಾರ್ಚ್‌ 5ರಂದು ಲಂಡನ್‌ಗೆ ತೆರಳುತ್ತಿದ್ದ (ಎಐ 161) ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದ ಕ್ಯಾಫ್ಟನ್‌ನ ಕೈಗೊಂಡ ತೀರ್ಮಾನದಂತೆ ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿವೆ. ವಿಮಾನವು ನಿಗದಿತ ಸಮಯಕ್ಕೆ ಹೊರಡುವ ಮೊದಲೇ ರಶ್ಮಿ ಅವರು ಸಿಬ್ಬಂದಿ ಜೊತೆಗೆ ಅಸಭ್ಯವಾಗಿ ವಾಗ್ವಾದಕ್ಕೆ ಇಳಿದಿದ್ದರು ಎನ್ನಲಾಗಿದೆ. ಆದರೆ, ಅವರ ಹೆಸರನ್ನು ಏರ್‌ ಇಂಡಿಯಾವು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಈ ಬಗ್ಗೆ ರೆಲಿಗೇರ್‌ ಎಂಟರ್‌ಪ್ರೈಸಸ್‌ ಕೂಡ ಪ್ರತಿಕ್ರಿಯೆ ನೀಡಿಲ್ಲ.

ಈ ಘಟನೆಯಿಂದಾಗಿ ವಿಮಾನ ಹಾರಾಟವು ಒಂದು ಗಂಟೆ ವಿಳಂಬವಾಗಿದೆ. ಆದರೆ, ಪ್ರಮುಖ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ಬಗ್ಗೆ ಅವರು ಲಿಖಿತ ಹೇಳಿಕೆ ನೀಡಿದ್ದರಿಂದ ಮತ್ತೊಂದು ವಿಮಾನದಲ್ಲಿ ಪ್ರಯಾಣಿಸಲು ಅವರಿಗೆ ಅವಕಾಶ ಕಲ್ಪಿಸಲಾಯಿತು ಎಂದು ಏರ್‌ ಇಂಡಿಯಾದ ವಕ್ತಾರರು ತಿಳಿಸಿದ್ದಾರೆ.

ರಶ್ಮಿ ಸಲೂಜಾ
ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ ಪ್ರಯಾಣಕಿಯನ್ನು ಇಳಿಸಿದ ಏರ್ ಇಂಡಿಯಾ ವಿಮಾನ

ಸದ್ಯ ರಶ್ಮಿ ಸಲೂಜಾ ಡಾಬರ್‌ನ ಬರ್ಮನ್ ಕುಟುಂಬದೊಂದಿಗೆ ಕಾರ್ಪೊರೇಟ್ ಜಗಳದಲ್ಲಿ ಸಿಲುಕಿಕೊಂಡಿದ್ದಾರೆ. ಅವರು ಕೇರ್ ಹೆಲ್ತ್ ಇನ್ಶುರೆನ್ಸ್ ಲಿಮಿಟೆಡ್ ಸ್ಟಾಕ್ ಆಯ್ಕೆಗಳ ಅನುದಾನಕ್ಕೆ ಸಂಬಂಧಿಸಿದಂತೆ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ (ಸೆಬಿ) ಪರಿಶೀಲನೆಯನ್ನು ಎದುರಿಸುತ್ತಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಓಪನ್ ಆಫರ್ ಮೂಲಕ ರೆಲಿಗೇರ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶವನ್ನು ಬರ್ಮನ್ ಘೋಷಿಸಿತು, ಅದಾದ ನಂತರ ಎರಡು ಕಂಪನಿಗಳು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com