ಮಣಿಪುರಕ್ಕೆ ಏಕೆ ಭೇಟಿ ನೀಡಲಿಲ್ಲ, ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಮೌನವೇಕೆ?: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಶುಭಾಶಯ ಕೋರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಶುಕ್ರವಾರ ವಾಗ್ದಾಳಿ ನಡೆಸಿದ್ದು, ಮಣಿಪುರಕ್ಕೆ ಏಕೆ ಭೇಟಿ ನೀಡಲಿಲ್ಲ, ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಮೌನವೇಕೆ ಎಂದು ಪ್ರಶ್ನೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಶುಭಾಶಯ ಕೋರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಶುಕ್ರವಾರ ವಾಗ್ದಾಳಿ ನಡೆಸಿದ್ದು, ಮಣಿಪುರಕ್ಕೆ ಏಕೆ ಭೇಟಿ ನೀಡಲಿಲ್ಲ, ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಮೌನವೇಕೆ ಎಂದು ಪ್ರಶ್ನೆ ಮಾಡಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ಅಂತಾರಾಷ್ಟ್ರೀಯ ಮಹಿಳಾ ದಿನವಾಗಿದ್ದು, ಮಹಿಳೆಯರಿಗೆ ಗೌರವ ಸಲ್ಲಿಸುವುದು ಬಿಟ್ಟರೆ, ಪ್ರಧಾನಿಯವರಿಂದ ಬೇರೆನನ್ನೂ ನಿರೀಕ್ಷಿಸುವುದಿಲ್ಲ ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ ದರ 100 ರೂ. ಇಳಿಕೆ: ಮಹಿಳೆಯರಿಗೆ ಪ್ರಧಾನಿ ಮೋದಿ ಗಿಫ್ಟ್‌

ಅದೇನೇ ಇದ್ದರೂ, ದೇಶಾದ್ಯಂತ ಮಹಿಳೆಯರು ಮೋದಿವಯವರನ್ನು ಕೇಳುತ್ತಿರುವ ಕೆಲವು ಪ್ರಮುಖ ಪ್ರಶ್ನೆಗಳು ಇಲ್ಲಿವೆ...

  • ಕಳೆದ ವರ್ಷದಿಂದ ಮಣಿಪುರದಲ್ಲಿ ಯುದ್ಧದ ಪರಿಸ್ಥಿತಿ ಇದೆ. ಇಲ್ಲಿನ ಮಹಿಳೆಯರು ಹೆಚ್ಚು ಬಾಧಿತರಾಗಿದ್ದಾರೆ. ಮಹಿಳೆಯರ ಮೇಲೆ ಹಲ್ಲೆ ಮತ್ತು ಬೆತ್ತಲೆ ಮೆರವಣಿಗೆ ಮಾಡುವ ವೀಡಿಯೊಗಳು ಕಂಡು ಬಂದಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಆಡಳಿತವಿದ್ದರೂ ಮೋದಿಯವರೇಕೆ ಮಣಿಪುರದ ಬಗ್ಗೆ ತಲೆಕೆಡಿಸಿಕೊಂಡಿಲ್ಲ?

  • ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳಿಂದ ಕಿರುಕುಳದ ಆರೋಪ ಕೇಳಿಬಂದಿದೆ. ಪ್ರಧಾನಿ ಮೌನವಾಗಿರುವುದು ಏಕೆ?

  • ಈ ವಿಷಯದ ಬಗ್ಗೆ ಪ್ರಧಾನಿಯವರ ನಿಲುವು ಏನು ಮತ್ತು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು 'ಮೋದಿ ಕಾ ಪರಿವಾರ್' ಸದಸ್ಯ ಎಂದು ಮೋದಿ ಪರಿಗಣಿಸುತ್ತಾರೆಯೇ?

  • "ಮೋದಿ ಹೈ ತೋ ಮೆಹೆಂಗೈ ಹೈ! ಆಹಾರ ಮತ್ತು ಅಗತ್ಯ ವಸ್ತುಗಳ ಬೆಲೆಗಳಲ್ಲಿ ಏರಿಕೆಯಾಗಿದೆ. ಈ ಬೆಲೆ ಏರಿಕೆಯ ಹೊರೆಯಿಂದ ಮನೆಗಳನ್ನು ರಕ್ಷಿಸುವ ಯೋಜನೆಯನ್ನು ಪ್ರಧಾನಿ ಹೊಂದಿದ್ದಾರೆಯೇ?

  • "ಅನ್ಯಾಯ್ ಕಾಲ" ನ ವಿಶಿಷ್ಟ ಲಕ್ಷಣವೆಂದರೆ ಸಾಮೂಹಿಕ ನಿರುದ್ಯೋಗ ಬಿಕ್ಕಟ್ಟು. ಉದ್ಯೋಗ ಹುಡುಕುವವರ ಉತ್ಸಾಹ ಕಡಿಮೆಯಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಗಿಂತಲೂ ಕಾರ್ಮಿಕ ಮಹಿಳೆಯರ ಶೇಕಡಾವಾರು 20 ರಷ್ಟು ಕಡಿಮೆಯಾಗಿದೆ, ಇದು ಆರ್ಥಿಕತೆಯ ದೀರ್ಘಾವಧಿಯ ಸಾಮರ್ಥ್ಯವನ್ನು ದುರ್ಬಲಗೊಳಿಸುವ ಸಾಧ್ಯತೆಗಳಿವೆ. ಮಹಿಳೆಯರನ್ನು ಆರ್ಥಿಕ ಮುಖ್ಯವಾಹಿನಿಗೆ ತರಲು ಪ್ರಧಾನಿ ಬಳಿ ಯೋಜನೆ ಇದೆಯೇ?

  • 2014 ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಪ್ರಧಾನ ಮಂತ್ರಿಗಳು "ಬೇಟಿ ಬಚಾವೋ ಬೇಟಿ ಪಢಾವೋ" ಯೋಜನೆಯನ್ನು ಪ್ರಾರಂಭಿಸಿದರು, ಆದರೆ ನಂತರ ಯೋಜನೆಯಲ್ಲಿ ನೀಡಲಾದ ಶೇ.80 ಪ್ರತಿಶತದಷ್ಟು ಹಣವನ್ನು ಜಾಹೀರಾತುಗಳಿಗೆ ಮೀಸಲಿಡಲಾಗಿದೆ.

  • "ಹೆಣ್ಣು ಭ್ರೂಣಹತ್ಯೆ ನಿಲ್ಲಿಸಲು ಮತ್ತು ಮಹಿಳಾ ಶಿಕ್ಷಣವನ್ನು ಉತ್ತೇಜಿಸಲು ಮೋದಿಯವರ ಬಳಿ ಅರ್ಥಪೂರ್ಣ ದೃಷ್ಟಿ ಇದೆಯೇ? ಅಥವಾ ತಮ್ಮನ್ನು ತಾನೇ ಬ್ರ್ಯಾಂಡ್ ಮಾಡಿಕೊಳ್ಳಲು ಇದನ್ನು ಮಾರ್ಗವನ್ನು ಬಳಸುತ್ತಾರೆಯೇ?

ಭಾರತದ ಮಹಿಳೆಯರು ಉತ್ತರಗಳ ಪಡೆಯಲು ಬಯಸುತ್ತಿದ್ದಾರೆಂದು ಪ್ರಶ್ನೆಗಳ ಸುರಿಸಿದ್ದಾರೆ. ಇದೇ ವೇಳೆ ಬಿಜೆಪಿ ಹಠಾವೋ, ಬೇಟಿ ಬಚಾವೋ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com